ಬುಧವಾರ, ಏಪ್ರಿಲ್ 11, 2018

ಏನಿದು ವಿವಿಪ್ಯಾಟ್..?

============
ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಚುನಾವಣಾ ವ್ಯವಸ್ಥೆಯನ್ನು ಕ್ರಾಂತಿಕಾರಿಯನ್ನಾಗಿಸಿದೆ ಹಾಗೂ ಮತದಾರ ತಾಳೆ ನೋಡಬಹುದಾದ ಪತ್ರ ಪರಿಶೋಧನೆ ಮಾಹಿತಿ(ವಿವಿಪಿಎಟಿ ಅಥವಾ ವಿವಿಪ್ಯಾಟ್) ವ್ಯವಸ್ಥೆಯನ್ನು ಪರಿಚಯಿಸಿರುವುದು ಮತದಾನ ಪ್ರಕ್ರಿಯೆಗೆ ಹೆಚ್ಚು ಪಾರದರ್ಶಕತೆ ಒದಗಿಸಿದೆ. ವಿದ್ಯುನ್ಮಾನ ಮತ ಯಂತ್ರ (ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್-ಇವಿಎಂ), ಮತ ಪೆಟ್ಟಿಗೆಗೆ ಪರ್ಯಾಯವಾಗಿದ್ದು, ಚುನಾವಣಾ ಪ್ರಕ್ರಿಯೆಗೆ ಪ್ರಧಾನ ಆಧಾರವಾಗಿದೆ. ಚುನಾವಣಾ ಆಯೋಗ 1977ರಲ್ಲಿ ಮೊದಲ ಬಾರಿಗೆ ಇದನ್ನು ರೂಪಿಸಿ, ಹೈದರಾಬಾದ್‍ನ ಭಾರತ ವಿದ್ಯುನ್ಮಾನ ನಿಗಮ ನಿಯಮಿತಕ್ಕೆ (ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ-ಇಸಿಐಎಲ್) ಇದರ ವಿನ್ಯಾಸ ಮತ್ತು ಅಭಿವೃದ್ಧಿಯ ಜವಾಬ್ದಾರಿ ವಹಿಸಿತು.
==============
1979ರಲ್ಲಿ ಇದರ ಮೊದಲ ಮಾದರಿಯನ್ನು ಅಭಿವೃದ್ಧಿಗೊಳಿಸಿ, 6ನೆ ಆಗಸ್ಟ್, 1980ರಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮುಂದೆ ಇದನ್ನು ಪ್ರದರ್ಶಿಸಿತು. ಇದನ್ನು ಪರಿಚಯಿಸಲು ಒಮ್ಮತದ ತೀರ್ಮಾನಕ್ಕೆ ಬಂದ ನಂತರ ಇವಿಎಂಗಳ ತಯಾರಿಕೆಗಾಗಿ ಇಸಿಐಎಲ್ ಜತೆ ಕಾರ್ಯನಿರ್ವಹಿಸಲು ಮತ್ತೊಂದು ಸಾರ್ವಜನಿಕ ಉದ್ದಿಮೆಯಾದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(ಎಚ್‍ಎಎಲ್)ನನ್ನು ಆಯ್ಕೆ ಮಾಡಲಾಯಿತು. ಕೇರಳದಲ್ಲಿ 1982ರ ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಇವಿಎಂಗಳನ್ನು ಬಳಸಲಾಯಿತು. ಆದರೆ, ಇವುಗಳ ಬಳಕೆಯನ್ನು ನಿರ್ದಿಷ್ಟವಾಗಿ ತಿಳಿಸುವ ಕಾನೂನು ಅನುಪಸ್ಥಿತಿಯಿಂದಾಗಿ ಆ ಚುನಾವಣೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು.
============
ಆನಂತರ 1989ರಲ್ಲಿ, ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸುವುದಕ್ಕಾಗಿ ನಿಯಮ ರೂಪಿಸಲು ಜನಪ್ರತಿನಿಧಿ ಕಾಯ್ದೆ, 1951ರ ಅಧಿನಿಯಮಕ್ಕೆ ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಯಿತು (ಅಧ್ಯಾಯ-3). ಇದನ್ನು ಪರಿಚಯಿಸಲು ಸಾರ್ವತ್ರಿಕ ಒಮ್ಮತ ವ್ಯಕ್ತವಾಗಿದ್ದು, 1998ರಲ್ಲಿ ಹಾಗೂ ಮಧ್ಯಪ್ರದೇಶ, ರಾಜಸ್ತಾನ ಮತ್ತು ದೆಹಲಿ-ಮೂರು ರಾಜ್ಯಗಳಲ್ಲಿ ವಿಸ್ತರಿಸಿರುವ 25 ವಿಧಾನಸಭಾ ಕ್ಷೇತ್ರಗಳಲ್ಲಿ ಇವುಗಳನ್ನು ಉಪಯೋಗಿಸಲಾಯಿತು. ಇದರ ಬಳಕೆಯನ್ನು 1999ರಲ್ಲಿ 45 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಆನಂತರ, 2000ರ ಫೆಬ್ರವರಿಯಲ್ಲಿ, ಹರಿಯಾಣ ವಿಧಾನಸಭೆ ಚುನಾವಣೆಗಳ 45 ವಿಧಾನಸಭಾ ಕ್ಷೇತ್ರಗಳಿಗೆ ಮತ್ತಷ್ಟು ವಿಸ್ತರಿಸಲಾಯಿತು. 2001ರ ಮೇನಲ್ಲಿ ತಮಿಳುನಾಡು, ಕೇರಳ, ಪಾಂಡಿಚೇರಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಇವಿಎಂಗಳನ್ನು ಬಳಸಲಾಯಿತು. ಆಗಿನಿಂದ ಪ್ರತಿ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಆಯೋಗ ಇವಿಎಂಗಳನ್ನು ಉಪಯೋಗಿಸುತ್ತಿದೆ. 2004ರಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ, ದೇಶದ ಎಲ್ಲ 543 ಲೋಕಸಭಾ ಕ್ಷೇತ್ರಗಳಲ್ಲೂ ಇವಿಎಂಗಳನ್ನು(ಒಂದು ದಶಲಕ್ಷಕ್ಕೂ ಹೆಚ್ಚು) ಬಳಸಲಾಯಿತು.
===============
ಒಂದು ಇವಿಎಂ ಎರಡು ಘಟಕಗಳನ್ನು ಹೊಂದಿರುತ್ತದೆ. ಅವುಗಳೆಂದರೆ ನಿಯಂತ್ರಣ ಘಟಕ(ಕಂಟ್ರೋಲ್ ಯೂನಿಟ್-ಸಿಯು) ಮತ್ತು ಮತಚೀಟಿ ಘಟಕ(ಬ್ಯಾಲೊಟಿಂಗ್ ಯೂನಿಟ್-ಬಿಯು). ಇವೆರಡರ ನಡುವೆ ಸಂಪರ್ಕ ಕಲ್ಪಿಸಲು ಕೇಬಲ್(5 ಮೀ. ಉದ್ದ) ಇರುತ್ತದೆ. ಒಂದು ಬ್ಯಾಲೊಟಿಂಗ್ ಯೂನಿಟ್ 16 ಅಭ್ಯರ್ಥಿಗಳಿಗೆ ಸೇವೆ ಒದಗಿಸುತ್ತದೆ. ಇವಿಎಂಗಳಿಗಾಗಿ ಅನೇಕ ವೈವಿಧ್ಯತೆಗಳು ಲಭ್ಯವಿರುತ್ತವೆ. ಕಾಲಕಾಲಕ್ಕೆ ಇದನ್ನು ಅಭಿವೃದ್ದಿಗೊಳಿಸಲಾಗುತ್ತದೆ ಹಾಗೂ ಈಗ ಹೆಚ್ಚು ದೃಢವಾಗಿದೆ. 2006ರ ಪೂರ್ವದಲ್ಲಿ ಮತ್ತು 2006ರ ನಂತರದ ಇವಿಎಂಗಳ ಪ್ರಕರಣದಲ್ಲಿ, 4(ನಾಲ್ಕು) ಬ್ಯಾಲೊಟಿಂಗ್ ಯೂನಿಟ್‍ಗಳು ಗರಿಷ್ಠ 64 ಅಭ್ಯರ್ಥಿಗಳವರೆಗೆ ಹೆಸರನ್ನು ಒಟ್ಟಿಗೆ ಸೇರಿಸಬಹುದಾದ (ನೋಟಾ ಒಳಗೊಂಡಂತೆ) ಅವಕಾಶ ಕಲ್ಪಿಸಿತ್ತು. ಇದನ್ನು ಒಂದು ಕಂಟ್ರೋಲ್ ಯೂನಿಟ್‍ನೊಂದಿಗೆ ಬಳಸಬಹುದಾಗಿತ್ತು.
==============
2006ರ ನಂತರ ಮೇಲ್ದರ್ಜೆಗೇರಿಸಿದ ಇವಿಎಂಗಳಲ್ಲಿ, 24(ಇಪ್ಪತ್ತನಾಲ್ಕು) ಬ್ಯಾಲೊಟಿಂಗ್ ಯೂನಿಟ್‍ಗಳು ಒಟ್ಟಿಗೆ 384 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಬಹುದಾದ (ನೋಟಾ ಒಳಗೊಂಡಂತೆ) ಅವಕಾಶ ಕಲ್ಪಿಸಿದ್ದು, ಇದನ್ನು ಒಂದು ಕಂಟ್ರೋಲ್ ಯೂನಿಟ್‍ನೊಂದಿಗೆ ಬಳಸಬಹುದಾಗಿದೆ. ಇದು 7.5 ವೋಲ್ಟ್ಸ್‍ಗಳನ್ನು ಹೊಂದಿರುವ ಒಂದು ಪವರ್ ಪ್ಯಾಕ್ (ಬ್ಯಾಟರಿ) ಮೂಲಕ ಚಾಲನೆಯಾಗುತ್ತದೆ. ಕಂಟ್ರೋಲ್ ಯೂನಿಟ್‍ಗಳು 4ಕ್ಕಿಂತ ಹೆಚ್ಚು ಬಿಯುಗಳ ಸಂಪರ್ಕ ಕಲ್ಪಿಸಿದ್ದರೆ, 2006ರ ನಂತರ ಆಧುನೀಕರಿಸಿದ ಇವಿಎಂಗಳಲ್ಲಿ, ಪವರ್ ಪ್ಯಾಕ್‍ಗಳನ್ನು 5ನೇ, 9ನೇ, 13ನೇ, 17ನೇ ಮತ್ತು 21ನೇ ಬ್ಯಾಲೊಟಿಂಗ್ ಯೂನಿಟ್‍ಗಳಲ್ಲಿ ಸೇರಿಸಲಾಗಿರುತ್ತದೆ. ಅಭ್ಯರ್ಥಿಯ ಮತ ಗುಂಡಿಯೊಂದಿಗೆ ಬಿಯು ಬಲ ಭಾಗದ ಮೇಲೆ 1 ರಿಂದ 16 ಅಂಕಿಗಳನ್ನು ದೃಷ್ಟಿದೋಷ ಇರುವ ಮತದಾರರ ಮಾರ್ಗದರ್ಶನಕ್ಕಾಗಿ ಬ್ರೈಲ್ ಲಿಪಿಯಲ್ಲಿ ಉಬ್ಬಿಸಲಾಗಿರುತ್ತದೆ. ತರುವಾಯ, ಚುನಾವಣಾ ಆಯೋಗವು ಉನ್ನತ ಮಟ್ಟದಲ್ಲಿ ಮತದಾನದ ಅನುಭವ ಪಡೆಯಲು, ಆಯ್ಕೆ ಮಾಡಿದ ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂಗಳೊಂದಿಗೆ ಮತದಾರ ತಾಳೆ ನೋಡಬಹುದಾದ ಪತ್ರ ಪರಿಶೋಧನೆ ಮಾಹಿತಿ(ವಿವಿಪಿಎಟಿ ಅಥವಾ ವಿವಿಪ್ಯಾಟ್) ವ್ಯವಸ್ಥೆ ಜಾರಿಗೊಳಿಸಿದೆ.
===============
ಚುನಾವಣೆಗಳಲ್ಲಿ ಇವಿಎಂಗಳ ವಿನ್ಯಾಸ ಮತ್ತು ಅನ್ವಯವು ಜಾಗತಿಕ ಪ್ರಜಾಪ್ರಭುತ್ವದಲ್ಲಿ ಒಂದು ಮಹತ್ವದ ಸಾಧನೆ ಎಂದೇ ಪರಿಗಣಿಸಲಾಗಿದೆ. ಇದು ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ, ಕ್ಷಿಪ್ರತೆ ಮತ್ತು ಸ್ವೀಕಾರಾರ್ಹತೆಯನ್ನು ತಂದಿದೆ. ಇದರ ಬಳಕೆಯಲ್ಲಿ ಚುನಾವಣಾ ಅಧಿಕಾರಿಗಳು ದೊಡ್ಡ ಸಮೂಹ ಪಳಗುವಂತಾಗಲು ಸಹ ಇದು ಸಹಾಯ ಮಾಡಿದೆ. ಇದರ ಅಭಿವೃದ್ಧಿಯಲ್ಲಿ ಆಯೋಗ ಸರಣಿ ಸಲಹೆ-ಸೂಚನೆಗಳು, ಆಗಾಗ ಕೇಳಲ್ಪಡುವ ಪ್ರಶ್ನೆಗಳು ಮತ್ತು ತಾಂತ್ರಿಕ ಮಾರ್ಗದರ್ಶನಗಳನ್ನು ನೀಡಿದೆ. ಈ ಅವಧಿಯಲ್ಲಿ ಅನೇಕ ನ್ಯಾಯಾಂಗ ಘೋಷಣೆಗಳೂ ಸಹ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂಗಳು ಒಂದು ಅವಿಭಾಗ್ಯ ಅಂಗವನ್ನಾಗಿ ಮಾಡುವಲ್ಲಿ ಕೂಡ ನೆರವಾಗಿದೆ.
=============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ