ಸೋಮವಾರ, ಏಪ್ರಿಲ್ 9, 2018

ಬ್ರೇಕಿಂಗ್: ಕಾಮನ್ ವೆಲ್ತ್ ಪದಕಪಟ್ಟಿಯಲ್ಲಿ ಐದರಿಂದ ಮೂರನೇ ಸ್ಥಾನಕ್ಕೆ ಜಿಗಿದ ಭಾರತ


===============
*ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 8 ಚಿನ್ನ, 4 ಬೆಳ್ಳಿ, 5 ಕಂಚನ್ನು ಪಡೆಯುವ ಮೂಲಕ ಒಟ್ಟು 17 ಪದಕಗಳನ್ನು ಪಡೆದಿದೆ. ಇದೀಗ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದೆ. ಇದೇ ವೇಳೆ ಪಟ್ಟಿಯಲ್ಲಿ 85 ಪದಕಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.*
=============
*ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಜೀತುರಾಯ್ 235.1 ಅಂಕಗಳನ್ನು ಗಳಿಸುವುದರ ಮೂಲಕ ಚಿನ್ನದ ಪದಕವನ್ನು ಹಾಗೂ ಇದೇ ಸ್ಪರ್ಧೆಯಲ್ಲಿ 214.3 ಅಂಕಗಳನ್ನು ಪಡೆಯುವ ಮೂಲಕ ಭಾರತದ ಮತ್ತೋರ್ವ ಶೂಟರ್ ಓಂ ಮಿಥರ್ವಾಲ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.*
==============
*ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಮತ್ತು ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೋ ಅವರ ನಡುವೆ ತೀವ್ರ ಪೈಪೋಟಿ ನಡೆಯಿತು.*
=============
*ಇಬ್ಬರು 247.2 ಅಂಕಗಳನ್ನು ಗಳಿಸಿದರು. ಮಾರ್ಟಿನಾ 10.3 ಮೀಟರ್ ಅಂತರದಲ್ಲಿ ಗುರಿ ಛೇದಿಸಿದರೆ ಮೆಹುಲಿ 9.9 ಮೀಟರ್ ಅಂತರದ ಗುರಿಯನ್ನು ಛೇದಿಸಿದರು. ಹಾಗಾಗಿ ಮೆಹುಲಿ ಘೋಷ್ ಅವರು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದೇ ಸ್ಪರ್ಧೆಯಲ್ಲಿ 9.9 ಮೀಟರ್ ಅಂತರದಿಂದ ಗುರಿ ಛೇದಿಸಿದ ಭಾರತದ ಅಪೂರ್ವಿ ಚಂಡೇಲಾ ಅವರು 225.3 ಅಂಕಗಳನ್ನು ಗಳಿಸುವುದರ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.*

=================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ