ಸೋಮವಾರ, ಏಪ್ರಿಲ್ 9, 2018

ಡೇ ಸ್ಪೆಷಲ್‌: ವಿಶ್ವ ಹೋಮಿಯೋಪಥಿ ದಿನ

===============
*ಏಪ್ರಿಲ್‌ 10 ಹೋಮಿಯೋಪಥಿ ಜನಕ ಜರ್ಮನ್‌ ವೈದ್ಯ ಡಾ. ಸ್ಯಾಮುಯೆಲ್‌ ಹಾನೆಮನ್‌ ಜನ್ಮದಿನವಾದ್ದರಿಂದ ಈ ದಿನವನ್ನು ವಿಶ್ವ ಹೋಮಿಯೋಪಥಿ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವ ಹೋಮಿಯೋಪತಿ ಜಾಗೃತಿ ಸಂಸ್ಥೆ ವತಿಯಿಂದ ಈ ವರ್ಷ ಒಂದು ವಾರಗಳ ಕಾಲ ಏಪ್ರಿಲ್‌ 10ರಿಂದ 16ರವರೆಗೆ ಹೋಮಿಯೋಪಥಿ ಜಾಗೃತಿ ವಾರವನ್ನು ಆಚರಿಸಲಾಗುತ್ತಿದೆ.* 
================
*ಹೋಮಿಯೋಪಥಿ ಎನ್ನುವುದು ಪರ್ಯಾಯ ಔಷಧದ ಒಂದು ವ್ಯವಸ್ಥೆಯಾಗಿದೆ. ಈ ಔಷಧಗಳನ್ನು ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ವಿಶ್ವದ 2ನೇ ಅತಿ ದೊಡ್ಡ ಚಿಕಿತ್ಸಾ ಪದ್ಧತಿಯಾದ ಹೋಮಿಯೋಪಥಿ ಸಮಕಾಲೀನ ಮಾತ್ರವಲ್ಲ ದೀರ್ಘ ಕಾಲದ ಕಾಯಿಲೆಗಳನ್ನು ಶಮನಗೊಳಿಸುತ್ತದೆ ಹಾಗೂ ಕ್ಯಾನ್ಸರ್‌, ಅನುವಂಶೀಯ ರೋಗಗಳನ್ನು ಗುಣಪಡಿಸುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ ಎಂದು ಹೇಳಲಾಗಿದೆ. ಅಧ್ಯಯನದ ಪ್ರಕಾರ ಭಾರತೀಯ ಜನಸಂಖ್ಯೆಯ ಶೇ.10 ಭಾಗ ತನ್ನ ಆರೋಗ್ಯ ಶುಶ್ರೂಶೆಯ ಅಗತ್ಯಗಳಿಗೆ ಹೋಮಿಯೋಪಥಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಭಾರತದಲ್ಲಿ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯು ಜಾರಿಗೆ ಬಂದು ನೂರಾರು ವರ್ಷಗಳೇ ಆಗಿವೆ. ಈ ದಿನದಂದು ಹೋಮಿಯೋಪಥಿ ಬಗ್ಗೆ ಉಪನ್ಯಾಸಗಳು, ಮಾಧ್ಯಮ ಸಂದರ್ಶನಗಳು ಮತ್ತು ವಿಶ್ವದಾದ್ಯಂತ ಉಚಿತ ಹೋಮಿಯೋಪತಿ ಚಿಕಿತ್ಸೆಯ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತವೆ.*
===============
*World Homoeopathy Day with theme “Enhancing Quality Research in Homoeopathy through scientific evidence and rich clinical experiences”*
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ