*ಮುಂಬಯಿ 8 ಪೊಲೀಸ್ ಸ್ಟೇಷನ್ ಗೆ ಮಹಿಳಾ ಉಸ್ತುವಾರಿ ದೇಶದಲ್ಲೇ ಇದು ಪ್ರಥಮ*
=======
*ದೇಶದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ನಗರಿ ಮುಂಬೈನ ಎಂಟು ಪೊಲೀಸ್ ಠಾಣೆಗಳಿಗೆ ಮಹಿಳೆಯರು ಮುಖ್ಯಸ್ಥರಾಗುವ ಮೂಲಕ ಹೊಸ ದಾಖಲೆ ಸೃಷ್ಠಿಯಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಎಂಟು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರನ್ನು ಮುಖ್ಯಸ್ಥರಾಗಿ ನೇಮಿಸಲಾಗಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆೆ ನೆಲೆಸುವಂತಾಗಲಿ ಎಂದು ಮುಂಬೈ ಪೊಲೀಸ್ ಟ್ವೀಟ್ ಮಾಡಿದ್ದಾರೆ.*
==============
*ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದ್ದು, ಮಹಿಳಾ ಸಬಲೀಕರಣಕ್ಕೆೆ ಇದೊಂದು ಉತ್ತಮ ನಡೆ. ಪೊಲೀಸ್ ಠಾಣೆಗಳಲ್ಲಿ ಮಹಿಳೆಯರೇ ಮುಖ್ಯಸ್ಥರಾಗಿರುವುದು ಮುಂಬೈ ಪೊಲೀಸರಿಗೆ ಹೆಮ್ಮೆಯ ಸಂಗತಿ. ಸದ್ಯದಲ್ಲೇ ಇಂಥ ಠಾಣೆಗಳ ಸಂಖ್ಯೆೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದೆ. ಇಂಥ ಪ್ರಕರಣಗಳು ಮಹಿಳೆಯರ ಸಬಲೀಕರಣಕ್ಕೆೆ ಪೂರಕವಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಹೇಳಿದ್ದಾರೆ.*
============
*ಅಲ್ಕಾ ಮಂಡೇವ್ ಏರ್‌ಪೋರ್ಟ್ ಪೊಲೀಸ್ ಠಾಣೆ, ರಶ್ಮಿ ಜಾಧವ್ ಕಫೆ ಪರೇಡ್ ಪೊಲೀಸ್ ಠಾಣೆ, ಮೃದುಲಾ ಲಾಡ್ ಸಿಯಾನ್ ಪೊಲೀಸ್ ಠಾಣೆ, ಲತಾ ಶಿರ್‌ಸಾತ್ ಸಹರ್ ಪೊಲೀಸ್ ಠಾಣೆ, ಜೋತ್ಸ್ನಾ ರಸಮ್ ವನ್‌ರೈ ಪೊಲೀಸ್ ಠಾಣೆ, ರೋಹಿಣಿ ಕಲೆ ಪಂತನ್‌ಗರ್ ಪೊಲೀಸ್ ಠಾಣೆ, ವಿದ್ಯಲಕ್ಷ್ಮೀ ಹಿರೇಮಠ್ ಅರಾರೆ ಪೊಲೀಸ್ ಠಾಣೆ ಹಾಗೂ ಕಲ್ಪನಾ ಗಡೇಕರ್ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.*
*ಈ ಎಂಟು ಮಂದಿಯು ಫೋಟೋ ಬಿಡುಗಡೆ ಮಾಡಿರುವ ಮುಂಬೈ ಪೊಲೀಸ್ ಇವರು ನಗರದಲ್ಲಿ ಹೊಸ ಅಲೆ ಸೃಷ್ಟಿಸಲಿದ್ದಾರೆ ಎಂದು ಅಡಿ ಟಿಪ್ಪಣಿ ನೀಡಿದೆ.*
=============
ಮಂಗಳವಾರ, ಏಪ್ರಿಲ್ 3, 2018
ಮುಂಬಯಿ 8 ಪೊಲೀಸ್ ಸ್ಟೇಷನ್ ಗೆ ಮಹಿಳಾ ಉಸ್ತುವಾರಿ ದೇಶದಲ್ಲೇ ಇದು ಪ್ರಥಮ*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ