ಶನಿವಾರ, ಏಪ್ರಿಲ್ 7, 2018

ಉಪಯುಕ್ತ ಮಾಹಿತಿ

ಭೂಮಿಯನ್ನು ಮೂರು ಸಮಾನಾಂತರ ಪದರುಗಳನ್ನಾಗಿ ಸ್ಯುಯೆಸ್ ವಿಂಗಡಿಸಿದ. ಇವುಗಳನ್ನು ಸಿ.ಆಲ್.ಸಿಮ್ಯಾ, ಹಾಗೂ ನಿಫೆ ಎಂದು ಹೆಸರಿಸಿದ.
> ಜೆಫ್ರಿ ಎಂಬುವವರು ಭೂಮಿಯನ್ನು ಮೇಲ್ಪದರ ಮಧ್ಯ ಪದರ ಹಾಗೂ ಕೆಳ ಪದರ ಇಂದು ವಿಂಗಡಿಸಿದ. ಈ ಪದರುಗಳನ್ನೇ ಆರ್ಥರ್ ಹೋಮ್ಸ್ ಭೂಕವಚದ, ಶಿಲಾಪಾದಕ ಕವಚ ಹಾಗೂ ಕೇಂದ್ರ ಕವಚ ಎಂದು ಕರೆದರು.
> ಭೂಮಿಯ ಮೇಲಿನಿಂದ ಕೆಳಕ್ಕೆ ಕೆಂದ್ರದವರೆಗೂ ಈ ಕೆಳಗಿನ ಪದರುಗಳು ಇದೆ.
# ಭೂಕವಚ :
1) ಭೂಮಿಯ ಮೇಲ್ಪದರ ಇದು. ಪ್ರಮಾಣ ಒಟ್ಟು ಭೂಮಿಯ ಶೇ.1.
2) ಇದರ ಸರಾಸರಿ ಆಳ 33 ಕಿ.ಮಿ- ಸಾಗರದ ಕೆಳಗೆ 5-10 ಕಿ.ಮಿ, ಭೂಭಾಗದ ಸರಾಸರಿ ಆಳ 35 ಕಿ.ಮಿ, ಪರ್ವತಗಳ ಉಗಮದ ಭಾಗ 55-70 ಕಿ.ಮಿ
3) ಸಿಆಲ್ :  ಇದು ಭೂದವಚದ ಮೇಲ್ಪದರ. ಇದರ ಸರಾಸರಿ ಆಳ 11 ಕಿ.ಮಿ. ಇದು ಮುಖ್ಯವಾಗಿ ಸಿಲಿಕೇಟ್ ಹಾಗೂ ಅಲ್ಯುಮಿನಿಯಂಗಳ ಶಿಲೆಗಳನ್ನು ಒಳಗೊಂಡಿದೆ. ಇದರ ಸಾಂದ್ರತೆ 2.75-2.9
4) ಸಿಮ್ಯಾ :   ಇದು ಭೂಕವಚದ ಕೆಳಪದರು. ಇದರ ದಪ್ಪ 22 ಕಿ.ಮಿ. ಸಿಆಲ್ ಮೇಲ್ಪದರ ಮತ್ತು ಇದರ ಮಧ್ಯೆ ಕೊನಾರ್ಡ ಸೀಮಾವಲಯ ಇದೆ.
> ಸಿಮ್ಯಾ ಪದರು ಸಿಲಿಕೇಟ ಮತ್ತು ಮ್ಯಾಗ್ನೇಷಿಯಂ ಶಿಲೆಗಳನ್ನೊಳಗೊಂಡಿದೆ. ಈ ಪದರಿನ ಸರಾಸರಿ ಸಾಂದ್ರತೆ 2.9-4.75
5) ಶಿಲಾಪಾಕ ಕವಚ :   ಇದು ಮೇಲಿನ ಪದರು ಭೂದವಚದಿಂದ ಮೆಹರೊವಿಸಿಕ್ ಸೀಮಾವಲಯದಿಂದ ಬೇರ್ಪಟ್ಟಿದೆ. ಶಿಲಾಪಾಕ ಕವಚದ ದಪ್ಪ 2865 ಕಿ.ಮಿ ಒಟ್ಟು ಭೂಮಿಯ ಶೇ. 83ರಷ್ಟು ಗಾತ್ರವನ್ನು ಹಾಗೂ ಶೇ.68ರಷ್ಟು ದ್ರವ್ಯರಾಶಿಯನ್ನು ಇದು ಹೊಂದಿದೆ.
> ಶಿಲಾಪಾಕವಲಯ ಭೂಮಿಯ ಶಕ್ತಿಯ ಮೂಲ ಭೂಖಂಡಗಳ ಅಲೆತ ಪ್ರಚಲನ ಪ್ರವಾಹಗಳು, ಭೂ ವಿಭಾಗಗಳ ಸ್ಥಾನಪಲ್ಲಟಕ್ಕೆ ಕಾರಣವಾಗುವ ಬಲ, ಭೂಕಂಪಗಳು, ಜ್ವಾಲಾಮುಖಿಗಳು ಇವೆಲ್ಲವುಗಳು ಉಗಮ ಸ್ಥಾನವೇ ಈ ಶಿಲಾಪಾಕ ಕವಚ.
> ಶಿಲಾಪಾಕ ಕವಚ ಆಲಿವಿನ್ – ಪೈರಾಕ್ಸಿನ್ ಖನಿಜಗಳ ಸಂಕೀರ್ಣದಿಂದ ಮಾಡಲ್ಪಟ್ಟಿದೆ. ಇದರ ಸಾಂದ್ರತೆ 4.75-5
# ಕೇಂದ್ರ ಕವಚ :
> ಶಿಲಾಪಾಕ ಕವಚ ಹಾಗೂ ಕೇಂದ್ರ ಕವಚದ ಮಧ್ಯೆ ಗುಟೆನ್ ಬರ್ಗ ಸೀಮಾವಲಯ ಇದೆ. ಇದನ್ನು ಬ್ರಿಟಿಷ್ ಭೂವಿಜ್ಞಾನಿ ಓಲ್ಡಾಮ್ ಗುರುತಿಸಿದ. ಕೇಂದ್ರ ಕವಚ ಶಿಲಾಪಾಕ ಕವಚದಿಂದ ಭೂ ಕೇಂದ್ರದವರೆಗೆ 3471 ಕಿ.ಮಿ ಆಳ ಹೊಂದಿದೆ. ಇದು ಭೂಮಿಯ ಒಟ್ಟು ಗಾತ್ರದ ಶೇ.16 ಹಾಗೂ ಒಟ್ಟು ದ್ರವ್ಯರಾಶಿಯ ಶೇ.33 ಭಾಗಗಳನ್ನು ಹೊಂದಿವೆ. ಸಾಂದ್ರತೆ 9.5-4.5 ಗಳನ್ನು ಕೇಂದ್ರ ಕವಚ ಹೊರಗೋಳ ಮತ್ತು ಒಳಗೋಳ ಎರಡು ಭಾಗಗಳನ್ನು ಹೊಂದಿದೆ. ಈ ಎರಡು ವಿಭಾಗಗಳನ್ನು ಡೆನ್ಮಾರ್ಕನ ಮಹಿಳಾ ಭೂವಿಜ್ಞಾನಿ ಲೆಹ್ಮಾನ್ 1936 ಗುರುತಿಸಿದರು
> ಹೊರ ಕೇಂದ್ರಗಳ ದ್ರವರೂಪದ ಲೋಹವಾಗಿದ್ದು ಒಳ ಕೇಂದ್ರಗೋಳ ಭಾರವಾದ ಶಿಲಾದ್ರವ್ಯಗಳ ಘನರೂಪವಾಗಿದೆ.
> ಹೊರ ಕೇಂದ್ರಗಳ ದ್ರವಲೋಹ ಎನ್ನುವುದು ಭೂಕಂಪದ ಪಿ.ಅಲೆಗಳು ಅದರ ಮೂಲಕ ಹಾಯುವುದರಿಂದ ಸಾಬೀತಾಗಿದೆ.

# ಭೂಮಿಯ ಇತಿಹಾಸ-ಕೆಲವು ಪ್ರಮುಖ ಅಂಶಗಳು :
> 4 ಬಿಲಿಯನ್ ವರ್ಷಗಳ ಹಿಂದೆ ಭೂ ಕವಚ ರಚನೆಯಾಯಿತು. ಇದನ್ನು ಅರಿಜೀವ ಕಲ್ಪ ಎನ್ನುತ್ತಾರೆ.
> ನಂತರ 2.5 ಬಿಲಿಯನ್ ವರ್ಷಗಳ ಹಿಂದೆ ಪ್ರಾಚೀನ ಜೀವಕಲ್ಪದ ಕ್ಯಾಂಬ್ರಿಯನ್ ಯುಗದಲ್ಲಿ ಸಂಧಿಪದಿ ಹಾಗೂ ಅಕಶೇರುಗಳು ಪಳೆಯುಳಿಕೆಗಳು ಕಂಡು ಬಂದು ಜೀವಿಗಳ ಮೊದಲ ಕುರುಹು ನೀಡಿದವು.
> ಪ್ರಾಚೀನ ಜೀವಕಲ್ಪದಲ್ಲಿಯೇ ಡೆವೊನಿಯನ್ ಯುಗ ಮೀನುಗಳ ಸಾಮ್ರಾಜ್ಯ ಯುಗವೆಂದು ಖ್ಯಾತವಾಗಿದೆ.
> ನಂತರ 180 ಮಿಲಿಯನ್ ವರ್ಷಗಳ ಹಿಂದಿನ ಮಧ್ಯ ಜೀವಕಲ್ಪವನ್ನು ಡೈನೋಸಾರ್ ಸಾಮ್ರಾಜ್ಯ ಎನ್ನಲಾಗಿದೆ. ಈ ಕಲ್ಪದ ಟ್ರೈಯಾಸಿಕ ಯುಗದಲ್ಲಿ ಡೈನೊಸಾರ್‍ಗಳು ಸಣ್ಣ ಸಣ್ಣ ಜೀವಿಗಳಾಗಿ ಕಂಡು, ಜುರಾಸಿಕ್ ಯುಗದಲ್ಲಿ ದೈತ್ಯವಾಗಿ ಬೆಳೆದು ಕ್ರೆಟೆಸಿಯಸ್ ಯುಗದಲ್ಲಿ ಅಂತ್ಯ ಕಂಡವು.
> ಕ್ರೆಟೆಸಿಯಸ್ ಯುಗದ ಅವಧಿ 65 ಮಿಲಿಯನ್ ವರ್ಷಗಳ ಹಿಂದೆ ಮುಗಿಯಿತು.
> ನಂತರ 65 ಮಿಲಿಯನ್ ವರ್ಷಗಳಿಂದ ಇಲ್ಲಿಯವರೆಗಿನ ಅವಧಿಯನ್ನು ನವ ಜೀವಕಲ್ಪ ಎನ್ನಲಾಗಿದ್ದ ಇದನ್ನು ತೃತೀಯ ಹಾಗೂ ಚತುರ್ಥ ಯುಗಗಳನ್ನಾಗಿ ವಿಂಗಡಿಸಲಾಗಿದೆ. ತೃತೀಯ ಯುಗವನ್ನು ಸಸ್ತನಿಗಳ ಯುಗ ಎನ್ನಲಾಗಿದೆ. ಇದರಲ್ಲಿ ಕೆಳಗಿನ ಉಪಯೋಗಗಳಿವೆ.
> ಪೇಲಿಯೋಸಿಸ್- ಹೂ ಬಿಡುವ ಸಸ್ಯಗಳ ವ್ಯಾಪಕತೆ.
> ಈಯೋಸೀನ್- ವಿವಿಧ ರೀತಿಯ ಹುಲ್ಲು, ಆಹಾರ ಮತ್ತು ಹಣ್ಣಿನ ಗಿಡಗಳ ಉಗಮ, ವಿಪಿ, ಉಭಯವಾಸಿ, ಚಿಕ್ಕ ಜೀವರಾಶಿಗಳು ಮತ್ತು ಮೀನು ವ್ಯಾಪಕವಾಗಿದ್ದವು. ಬಾವಲಿ, ಒಂಟೆ, ಬೆಕ್ಕು, ಕುದುರೆ, ಕೋತಿ, ವೇಲ್, ರೈನೊಗಳು ಕಾಣಿಸಿಕೊಂಡವು.
> ಆಲಿಗೊಸೀನ – ಪುರಾತನ ಏಪಗಳು ಉಗಮ.
> ಮಿಯೊಸೀನ್ – ಏಪಗಳು ವ್ಯಾಪಕಗೊಂಡವುಮ ಹೂ ಬಿಡುವ ಸಸ್ಯಗಳು ಇಂದಿನ ರೂಪ ಪಡೆದವು.
> ಪ್ಲಿಯೊಸೀನ್- ಮನುಷ್ಯನನ್ನು ಹೋಲುವಂಥ ಏಪಗಳು.

ಚತುರ್ಥ ಯುಗ : 
> ಒಂದು ಮಿಲಿಯನ ವರ್ಷಗಳ ಗಿಂದಿನಿಂದ ಆದರಂಬವಾಗಿರುವ ಅವಧಿ. ಇದರಲ್ಲಿ ಪ್ಲಿಸ್ಟೋಸೀನ್ ಹಾಗೂ ಇತ್ತೀಚಿನ ಎಂಬ ಎರಡು ಉಪ ಯುಗಗಳಿವೆ. ಪ್ಲಿಸ್ಟೋಸೀನ್‍ನಲ್ಲಿ ಆಧುನಿಕ ಮಾನವ ಹೋಮೊ ಸೇಪಿಯನ್ಸ್ ಕಾಣಿಸಿಕೊಂಡ, ತುಪ್ಪಳ ಹೊಂದಿದ ಜೀವಿಗಳು ಕಾಣಿಸಿಕೊಂಡವು.
> ಇತ್ತೀಚಿನ ಯುಗದಲ್ಲಿ ಮಾನವ ನಾಗರಿಕತೆ ಉಗಮಗೊಂಡಿದೆ.
ನಗ್ನೀಕರಣ : ಭೂಮಿಯ ಮೇಲ್ಮೈ ಭೂಭಾಗ ಮತ್ತು ಜಲಭಾಗಗಳಿಂದ ಕೂಡಿದ್ದು ಇವು ನಿರಂತರವಾಗಿ ಮಾರ್ಪಾಡು ಕಾಣುತ್ತಿರುತ್ತದೆ. ಈ ಮಾರ್ಪಾಡೇ ನಗ್ನೀಕರಣ. ಇದು ನಿರಂತರ ನೈಸರ್ಗಿಕ ಕ್ರಿಯೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ