ಬೆಂಗಳೂರು, ಮಾ. 31: ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಾರಿಗೆ ಸೌಕರ್ಯದಲ್ಲಿನ ಗಣನೀಯ ಪ್ರಗತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಪ್ರತಿಷ್ಠಿತ 'India Pride' ಪ್ರಶಸ್ತಿ ಸತತ ಮೂರನೆ ಬಾರಿಯೂ ಪಡೆದುಕೊಂಡ ದೇಶದ ಏಕೈಕ ಸಂಸ್ಥೆಯಾಗಿದೆ.
ಸದರಿ ಪ್ರಶಸ್ತಿಯನ್ನು ದೈನಿಕ ಭಾಸ್ಕರ್ ಸಂಸ್ಥೆಯವರು ಪ್ರತಿಷ್ಠಾಪಿಸಿದ್ದು, ಮಾ.28ರಂದು ಹೊಸದಿಲ್ಲಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧಮೇಂದ್ರ ಪ್ರಧಾನ್, ಮಧ್ಯ ಪ್ರವೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರದಾನ ಮಾಡಿದರು.
'India Pride' ಪ್ರಶಸ್ತಿಯನ್ನು ರಾಷ್ಟ್ರ ನಿರ್ಮಾಣದಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಸಲ್ಲಿಸಿರುವ ಕೊಡುಗೆಗಳನ್ನು ಗುರುತಿಸಿ ಕೃಷಿ, ವಿದ್ಯುತ್, ಮೂಲಭೂತ ಸೌಕರ್ಯ, ಸಾರಿಗೆ, ನೀರು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಉತ್ಕೃಷ್ಟ ಸೇವೆಗಾಗಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ