ಭಾರತದ ಬೃಹತ್ ರಕ್ಷಣಾ ವಸ್ತುಪ್ರದರ್ಶನ- ಡಿಫೆಕ್ಸೋ ತಮಿಳುನಾಡು ರಾಜಧಾನಿ ಚೆನ್ನೈನ ಹೊರವಲಯದಲ್ಲಿ ಇಂದಿನಿಂದ ಆರಂಭವಾಗಿದ್ದು, ದೇಶ-ವಿದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅನಾವರಣಗೊಂಡಿವೆ. ದೇಶದ ಸೇನಾ ಅತ್ಯಾಧುನೀಕರಣ ಕಾರ್ಯಕ್ರಮದ ಭಾಗವಾಗಿ ಕೋಟ್ಯಂತರ ಡಾಲರ್‍ಗಳ ಒಪ್ಪಂದಗಳಿಗೆ ವೇದಿಕೆಯೂ ಸಜ್ಜಾಗಿದೆ.
> . ಚೆನ್ನೈ ಹೊರವಲಯ ಹಾಗೂ ದೇವಳ ನಗರಿ ಮಹಾಬಲಿಪುರಂಗೆ ಸಮೀಪದ ತಿರುವಿಂಡನ್‍ತೈನಲ್ಲಿ ನಾಲ್ಕು ದಿನಗಳ ಕಾಲ ಈ ವಸ್ತುಪ್ರದರ್ಶನ ನಡೆಯಲಿದ್ದು, ಪ್ರಧಾನಿ ಅಧಿಕೃತವಾಗಿ ಉದ್ಘಾಟಿಸುವರು.
> ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್, ಜರ್ಮನಿ, ಅಫ್ಘಾನಿಸ್ತಾನ, ಇಸ್ರೇಲ್, ಸ್ವೀಡನ್, ಫಿನ್‍ಲೆಂಡ್, ಇಟಲಿ, ಮಡಗಾಸ್ಕರ್, ಮ್ಯಾನ್ಮಾರ್, ನೇಪಾಳ, ಪೋರ್ಚುಗಲ್, ವಿಯೆಟ್ನಾಂ ಸೇರಿದಂತೆ 47 ದೇಶಗಳ ಅಧಿಕೃತ ನಿಯೋಗದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
> ಈ ದೇಶಗಳ ಅತ್ಯಾಧುನಿಕ ವಿಮಾನಗಳು, ಕ್ಷಿಪಣಿಗಳು, ಡ್ರೋನ್‍ಗಳು, ಮಾನವರಹಿತ ವಿಮಾನಗಳು, ಯುದ್ದ ಟ್ಯಾಂಕ್‍ಗಳು, ಹೈ-ಟೆಕ್ ಬಂದೂಕುಗಳು, ಬೇಹುಗಾರಿಕೆ ಸಾಧನಗಳು ಪ್ರದರ್ಶನಗೊಳ್ಳಲಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ