☀ಜೋಗ ಜಲಪಾತ
ಜೋಗ ಜಲಪಾತವನ್ನು ಗೇರುಸೊಪ್ಪ ಜಲಪಾತ ಎಂದು ಕೂಡಾ ಕರೆಯುವರು. ಈ ಜೋಗ ಜಲಪಾತ ಪ್ರಪಂಚದ ಪ್ರಸಿದ್ದ ಜಲಪಾತಗಳಲ್ಲೊಂದು. ಇದು ಭಾರತದ ಅತಿ ಎತ್ತರದ ಜಲಪಾತ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ದಟ್ಟವಾದ ಕಾಡು ಹಾಗೂ ಗುಡ್ಡಗಳಿಂದ ಆವೃತ್ತವಾದ ಜೋಗ ಕನಾ೯ಟಕದ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಸುಮಾರು 292 ಮೀ. ಎತ್ತರದಿಂದ ಭೋಗ೯ರೆಯುತ್ತಾ ಶರಾವತಿ ನದಿಯು ನಾಲ್ಕು ಕವಲುಗಳಾಗಿ ಧುಮುಕುತ್ತದೆ.
☀ಜೋಗ ಜಲಪಾತ
ಮಹಾತ್ಮಾ ಗಾಂಧಿ ಜಲ ವಿದ್ಯುತ್ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ 1930 ರ ದಶಕದ ಪೂವ೯ ಭಾಗದಲ್ಲಿ ಮೈಸೂರು ಲೋಕೋಪಯೋಗಿ ಇಲಾಖೆಯಿಂದ ಜಲ ವಿದ್ಯುತ್ ಯೋಜನಾ ಕಾಯ೯ ಶುರುವಾಯಿತು. ಫೆಬ್ರುವರಿ 21, 1949 ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ 120 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ.
☀ಕಾವೇರಿ ನದಿ
ಹೊಗೆನಕಲ್ ಜಲಪಾತ ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು, ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ. ಭಾರತದ ನಯಾಗಾರ ಜಲಪಾತವೆಂದೇ ಸುಪ್ರಸಿದ್ದ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ. ಆದ್ದರಿಂದ ಇದಕ್ಕೆ ಹೊಗೆನಕಲ್ ಎಂದು ನಾಮಕರಣವಾಯಿತು.
☀ಕನಾ೯ಟಕ ಮತ್ತು ತಮಿಳುನಾಡು
ಹೊಗೆನಕಲ್ ಜಲಪಾತ ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು, ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ. ಭಾರತದ ನಯಾಗರ ಜಲಪಾತವೆಂದೇ ಸುಪ್ರಸಿದ್ದ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ. ಆದ್ದರಿಂದ ಇದಕ್ಕೆ ಹೊಗೆನಕಲ್ ಎಂದು ನಾಮಕರಣವಾಯಿತು.
☀ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ಹಾಗೂ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗೂ ಇದು ಒಂದು ಪ್ರಸಿದ್ದ ಪ್ರಾವಾಸಿ ತಾಣವಾಗಿದೆ.
ಮುತ್ಯಾಲಮಡುವಿನ ಹೆಸರು, ತೆಲಗು ಭಾಷೆಯ ಮುತ್ಯಾಲ- ಮುತ್ತುಗಳು( Pearl ) ಹಾಗೂ ಮಡುವು – ಮಡು( Valley ) ಪದಗಳಿಂದ ಉಗಮವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ ಧುಮುಕುವುದರಿಂದ ಈ ಹೆಸರು ಬಂದಿದೆ.
☀ನದಿ, ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟ ಮಣ್ಣು ಸಮುದ್ರ ತೀರದಲ್ಲಿ ಈ ಮಣ್ಣು ಸಂಗ್ರಹವಾಗುತ್ತದೆ. ಈ ಮಣ್ಣಿನಲ್ಲಿ ಬೆಳೆಯುವ ಮಣ್ಣುಗಳು ಭತ್ತ, ಗೋಡಂಬಿ, ತೆಂಗು, ಅಡಿಕೆ, ಬಾಳೆ, ಮುಂತಾದವುಗಳು. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಣ್ಣು ಕಂಡು ಬರುತ್ತದೆ.
☀ಅನೇಕ ಜಿಲ್ಲೆಗಳು ಅರಣ್ಯ ಪ್ರದೇಶಗಳನ್ನು ಹೊಂದಿವೆ. ಉತ್ತರ ಕನ್ನಡ ಜಿಲ್ಲೆಯು ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದ ಜಿಲ್ಲೆಗಳೆಂದರೆ- ರಾಯಚೂರು, ಬೀದರ್, ಗದಗ ಮುಂತಾದವು.
☀ಕರ್ನಾಟಕದಲ್ಲಿ ವಿಸ್ತೀರ್ಣದಲ್ಲಿ ಬೆಳಗಾವಿಯು ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಬೆಂಗಳೂರು ನಗರವು ಚಿಕ್ಕ ಜಿಲ್ಲೆಯಾಗಿದೆ.
☀2011 ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ- 6,11,30,704 ಆಗಿದ್ದು ಭಾರತದಲ್ಲಿ ಜನಸಂಖ್ಯೆಯಿಂದ 8 ನೇ ಸ್ಥಾನವನ್ನು ಪಡೆದಿದೆ. ಈ ಮೊದಲು ಆಂಧ್ರದಿಂದ ತೆಲಂಗಾಣಾ ಇಬ್ಬಾಗವಾಗುವ ಮೊದಲು ಕರ್ನಾಟಕವು ಒಂಬತ್ತನೇ ಸ್ಥಾನವನ್ನು ಪಡೆದಿತ್ತು. ತೆಲಂಗಾಣಾ ಹೊಸ ರಾಜ್ಯದ ನಂತರ ಎಂಟನೇ ಸ್ಥಾನಕ್ಕೇರಿದೆ.
☀1953
ಬಳ್ಳಾರಿ ಜಿಲ್ಲೆ ಹಿಂದಿನ ಮದರಾಸು ರಾಜ್ಯಕ್ಕೆ ಸೇರಿದ್ದು, ಬಳ್ಳಾರಿ ಜಿಲ್ಲೆಯನ್ನು 1953 ರಲ್ಲಿ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಕನ್ನಡ ವಿಶ್ವವಿದ್ಯಾಲಯ ಬಳ್ಳಾರಿ ಜಿಲ್ಲೆಯ ಹಂಪಿ ಬಳಿಯ ಕಮಲಾಪುರದಲ್ಲಿದೆ.
☀ಬಳ್ಳಾರಿ
ಹಂಪಿ ಉಜ್ಜಯನಿ ಪೀಠ, ಸಂಡೂರು ಅರಮನೆ, ಸಂಡೂರಿನ ದೇವಸ್ಥಾನಗಳು, ಹೊಸಪೇಟೆ ಬಳಿಯ ತುಂಗಾಭದ್ರಾ ಜಲಾಶಯ, ಮುಖ್ಯ ಖನಿಜಗಳು ಕಬ್ಬಿಣ, ಮ್ಯಾಂಗನೀಸ್, ಗ್ರಾನೈಟ್, ಚಿನ್ನ, ಮೆಗ್ನೀಷಿಯಂ ಗಳಿವೆ.
☀ಪವ೯ತ ಮಣ್ಣು
ಪವ೯ತ ಮಣ್ಣು ಭಾರತದಲ್ಲಿ ಸುಮಾರು 2.9 ಲಕ್ಷ ಚ.ಕಿ.ಮೀ ಗಳಲ್ಲಿ ಕಂಡು ಬರುತ್ತದೆ. ಪವ೯ತ ಮತ್ತು ಬೆಟ್ಟ ಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿ ಕಂಡು ಬರುವ ಪವ೯ತ ಮಣ್ಣು, ಕೊಳೆತ ಜೈವಿಕಾಂಶಗಳ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿರುತ್ತದೆ.
☀ಮೆಕ್ಕಲು ಮಣ್ಣು
ಮೆಕ್ಕಲು ಮಣ್ಣು – ನದಿಗಳು ಪವ೯ತ ಪ್ರದೇಶಗಳಿಂದ ಹೊತ್ತು ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎನ್ನುವರು.
ಮೆಕ್ಕಲು ಮಣ್ಣಿನ ಲಕ್ಷಣಗಳು
# ಈ ಮಣ್ಣು ಹಗುರ ಹಾಗೂ ನಯವಾದ ಹರಳು ರೂಪದ ಸರಂಧ್ರ ರಚನೆಯನ್ನು ಒಳಗೊಂಡಿರುತ್ತದೆ.
# ಇದು ಪೊಟಾಷ್, ಫಾಸ್ಪರಿಕ್ ಆಮ್ಲ ಹಾಗೂ ಸುಣ್ಣದ ಅಂಶಗಳನ್ನು ಒಳಗೊಂಡಿದ್ದು ಸಾರಜನಕ ಮತ್ತು ಜೈವಿಕಾಂಶಗಳ ಕೊರತೆಯನ್ನು ಹೊಂದಿರುತ್ತದೆ.
# ಮೆಕ್ಕಲು ಮಣ್ಣು ಭತ್ತ, ಕಬ್ಬು ತಂಬಾಕು, ಬಾಳೆ, ಹತ್ತಿ, ಗೋಧಿ ಮತ್ತು ಸೆಣಬು ಬೆಳೆಗಳನ್ನು ಬೆಳೆಯಲು ಸೂಕ್ತವಾಗಿದೆ.
☀ಉತ್ತರಪ್ರದೇಶ
ಕಬ್ಬು ಬೆಳೆಯಲು ಬೇಕಾಗುವ ಮಳೆಯ ಪ್ರಮಾಣ : 150 ಸೆ.ಮೀ
ಕಬ್ಬು ಬೆಳೆಯಲು ಬೇಕಾಗುವ ಉಷ್ಣಾಂಶ : 20-26 ಡಿಗ್ರಿ ಸೆಲ್ಸಿಯಸ್
☀1-R , 2-P, 3-Q
1) ಮೆಕ್ಕಲು ಮಣ್ಣು - R ) ಅಲ್ಲ್ಯೂವಿಯಲ್ ಮಣ್ಣು
2) ಜಂಬಿಟ್ಟಿಗೆ ಮಣ್ಣು - P ) ಲ್ಯಾಟರೈಟ್ ಮಣ್ಣು
3) ಕಪ್ಪು ಮಣ್ಣು - Q ) ರೆಗಾರ್ ಮಣ್ಣು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ