=================
*ಹೊಸದಿಲ್ಲಿ, ಎ.3: ತೀವ್ರ ಗಾಯಗೊಂಡು ವಿಕಲಚೇತನರಾದ ಸೈನಿಕರೊಬ್ಬರು ಕೆಚ್ಚು ಪ್ರದರ್ಶಿಸಿ, ಪಟ್ಟು ಬಿಡದೇ ಮೊಣಕಾಲಿನ ಪುಷ್ ಅಪ್‌ನಲ್ಲಿ 55 ಪುಷ್ ಅಪ್‌ಗಳೊಂದಿಗೆ ಹೊಸ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ. ಇವರು 15 ವರ್ಷಗಳ ಹಿಂದೆ ಸ್ಫೋಟದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.*
==============
*ಲ್ಯಾನ್ಸ್ ನಾಯಕ್ ದೇಶ್ ದೀಪಕ್ 15 ಜಾಟ್ ರೆಜಿಮೆಂಟ್‌ನವರಾಗಿದ್ದು, ಅಸ್ಸಾಂನ ಬಕ್ಷಾದಲ್ಲಿ ಹೊಸ ದಾಖಲೆ ನಿರ್ಮಿಸಿದರು. ಈ ಹಿಂದೆ 2017ರ ಆಗಸ್ಟ್‌ನಲ್ಲಿ 49 ಪುಷ್ ಅಪ್ ದಾಖಲೆ ಸೃಷ್ಟಿಸಿದ್ದ ಯುಎಇಯ ಜಾರ್ಜೀಸ್ ರಶೀದ್ ಅವರ ದಾಖಲೆಯನ್ನು ದೇಶ್ ದೀಪಕ್ ಉತ್ತಮಪಡಿಸಿದರು.*
==============
*ಇವರು ಏಶ್ಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಇವರು 1 ನಿಮಿಷದಲ್ಲಿ 51 ಆಂಕಲ್ ಪುಷ್ ಅಪ್ ಮಾಡಿದ ದಾಖಲೆ ಹೊಂದಿದ್ದರು. ಇದಾದ ಬಳಿಕ 52 ಆಂಕಲ್ ಪುಷ್ ಅಪ್ ದಾಖಲೆ ಸೃಷ್ಟಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದರು. ಜಮ್ಮು ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ 2003ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇವರು ಗಾಯಗೊಂಡಿದ್ದರು.*
===============
*"ಲ್ಯಾನ್ಸ್ ನಾಯಕ್ ದೇಶ್ ದೀಪಕ್ ತೀರಾ ಬದ್ಧತೆಯ ಸೈನಿಕ. ಈ ದುರದೃಷ್ಟಕರ ಘಟನೆಯಿಂದ ಹೊರಬಂದು ಬಾಸ್ಕೆಟ್‌ಬಾಲ್, ಬಾಕ್ಸಿಂಗ್ ಹಾಗೂ ಸ್ಕ್ವಾಷ್‌ನಂಥ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಈ ಹಿಂದೆ ಹಲವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು" ಎಂದು ಸೇನಾ ವಕ್ತಾರರು ಹೇಳಿದ್ದಾರೆ.*
=================
ಮಂಗಳವಾರ, ಏಪ್ರಿಲ್ 3, 2018
ಗಿನ್ನೆಸ್ ದಾಖಲೆ ಸೃಷ್ಟಿಸಿದ ವಿಕಲಚೇತನ ಯೋಧ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ