ಶುಕ್ರವಾರ, ಫೆಬ್ರವರಿ 23, 2018

ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ಬಳಿಕ ವಿದ್ಯುತ್ ಕಂಡ ಎಲಿಫೆಂಟಾ ಕೇವ್ಸ್*

*==ಜ್ಞಾನ ಮಂದಿರ==*

*ಸ್ವಾತಂತ್ರ್ಯ ಸಿಕ್ಕು 70 ವರ್ಷಗಳ ಬಳಿಕ ವಿದ್ಯುತ್ ಕಂಡ ಎಲಿಫೆಂಟಾ ಕೇವ್ಸ್*
================
*ಮುಂಬಯಿ: ಸ್ವಾತಂತ್ರ್ಯ ಸಿಕ್ಕು ಬರೋಬ್ಬರಿ 70 ವರ್ಷಗಳ ಬಳಿಕ ವಿಶ್ವ ವಿಖ್ಯಾತ ಎಲಿಫೆಂಟಾ ಕೇವ್ಸ್ ಇರುವ ಘರಪುರಿ ಐಸ್‌ಲ್ಯಾಂಡ್‌ಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ.*
===============
*7.5 ಕಿಲೋಮೀಟರ್ ಉದ್ದದ ಸಮುದ್ರದಡಿಯ ಕೇಬಲ್ ಮೂಲಕ ವಿಶ್ವ ಪ್ರಸಿದ್ಧ ಘರಪುರಿ ಐಸ್‌ಲ್ಯಾಂಡ್‌ಗೆ ವಿದ್ಯುತ್ ಒದಗಿಸಲಾಗಿದೆ. ಮುಂಬಯಿ ಕರಾವಳಿಯಿಂದ 10 ಕಿಲೋಮೀಟರ್ ಉತ್ತರದಲ್ಲಿರುವ ಈ ಐಸ್‌ಲ್ಯಾಂಡ್ ಯುನೆಸ್ಕೋ ಪಾರಂಪರಿಕ ತಾಣಗಳನ್ನು ಹೊಂದಿದೆ.*
============
*ವಿದ್ಯುತ್ ಸಂಪರ್ಕ ನೀಡುವುದಕ್ಕಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಅರಬ್ಬೀ ಸಮುದ್ರದಾಳದಲ್ಲಿ ವೈಯರ್ ಕೇಬಲ್ ಬಳಕೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಇಂಧನ ಸಚಿವ ಚಂದ್ರಶೇಖರ್ ಭವನ್‌ಕುಲೆ ಹೇಳಿದ್ದಾರೆ.*
=============
*ವಿದ್ಯುದೀಕರಣದಿಂದಾಗಿ ಈ ತಾಣಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ, ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ