ಮಂಗಳವಾರ, ಫೆಬ್ರವರಿ 27, 2018

ದೇಶದ ಮೊದಲ ಇಂಗಾಲರಹಿತ ಗ್ರಾಮವಾಗಲು ದಾಪುಗಾಲಿಡುತ್ತಿರುವ ಕೇರಳದ ಮೀನಂಗಾಡಿ*

*##ಮಾಹಿತಿ ವೇದಿಕೆ##*

*ದೇಶದ ಮೊದಲ ಇಂಗಾಲರಹಿತ ಗ್ರಾಮವಾಗಲು ದಾಪುಗಾಲಿಡುತ್ತಿರುವ ಕೇರಳದ ಮೀನಂಗಾಡಿ*
###############
*ತಿರುವನಂತಪುರ,ಫೆ.27: ಕೇರಳದ ವಯನಾಡು ಜಿಲ್ಲೆಯ ಪುಟ್ಟಗ್ರಾಮ ಮೀನಂಗಾಡಿ ದೇಶದ ಮೊದಲ ಇಂಗಾಲರಹಿತ ಗ್ರಾಮವಾಗುವ ನಿಟ್ಟಿನಲ್ಲಿ ದಾಪುಗಾಲುಗಳನ್ನಿಡುತ್ತಿದೆ. ಸೋಮವಾರ ಗ್ರಾಮದ ಸ್ಥಳೀಯ ತೋಟಗಾರಿಕೆ ಕಚೇರಿಯಲ್ಲಿ ಬುಡಕಟ್ಟು ಮಹಿಳೆಯರ ಗುಂಪುಗಳಿಗೆ ಪುಟ್ಟ ಪ್ಲಾಸ್ಟಿಕ್ ಕಪ್‌ಗಳಲ್ಲಿರಿಸಲಾಗಿದ್ದ ನೂರಾರು ಬಾಳೇಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಗ್ರಾಮದ ಆಹಾರ ಭದ್ರತಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಈ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಪಂಚಾಯತ್ ಅಧಿಕಾರಿಗಳು ಕಟ್ಟುನಿಟ್ಟಿನ ಷರತ್ತುಗಳನ್ನೂ ವಿಧಿಸಿದ್ದಾರೆ. ‘‘ಈ ಪ್ಲಾಸ್ಟಿಕ್ ಕಪ್‌ಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಅವುಗಳನ್ನು ತೆಗೆದಿಡಿ ಮತ್ತು ನಮ್ಮ ನೌಕರರು ಅವುಗಳನ್ನು ಸಂಗ್ರಹಿಸುತ್ತಾರೆ. ಅಲ್ಲದೆ ನಿಮ್ಮ ಅಡುಗೆಮನೆಗಳ ತ್ಯಾಜ್ಯಗಳನ್ನು ಗೊಬ್ಬರವಾಗಿ ಬಳಸುವ ಜೊತೆಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಾಬೂನನ್ನು ಮಿತವಾಗಿ ಬಳಸಿ. ಅದರಲ್ಲಿ ರಾಸಾಯನಿಕ ಗಳಿರುತ್ತವೆ’’ ಎಂದು ಫಲಾನುಭವಿಗಳಿಗೆ ತಿಳಿಸಲಾಗಿದೆ.*
#################
*ಇತರ ಯಾವುದೇ ಗ್ರಾಮದಲ್ಲಿ ಅಲ್ಲಿಯ ನಿವಾಸಿಗಳು ಇಂತಹ ನಿರ್ದೇಶಗಳನ್ನು ಕಡೆಗಣಿಸಬಹುದೇನೋ? ಆದರೆ ವಾತಾವರಣದಲ್ಲಿ ಹಸಿರುಮನೆ ಅನಿಲದ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲು ಸರಕಾರಿ ಬೆಂಬಲದ ಯೋಜನೆಯು ಜಾರಿಯಲ್ಲಿರುವ ಮೀನಂಗಾಡಿಯಲ್ಲಿ ಪ್ರತಿ ಸಣ್ಣಹೆಜ್ಜೆಯೂ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಸ್ಥಿತ, ಸಮೃದ್ಧ ಕಾಫಿ ಮತ್ತು ಕಾಳುಮೆಣಸು ತೋಟಗಳ ನೆಲೆಯಾಗಿರುವ ಮೀನಂಗಾಡಿಯು ನಿಗದಿತ ಐದು ವರ್ಷಗಳಲ್ಲಿ ದೇಶದ ಮೊದಲ ಇಂಗಾಲರಹಿತ ವಾತಾವರಣ ಹೊಂದಿದ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.*
###########*##*
*ಮೀನಂಗಾಡಿಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ಇಂಗಾಲರಹಿತ ಗ್ರಾಮದ ಪರಿಕಲ್ಪನೆಗೆ ರಾಜ್ಯದ ಹಣಕಾಸು ಸಚಿವ ಥಾಮಸ್ ಇಸಾಕ್ ಅವರು 2016,ಜೂನ್‌ನಲ್ಲಿ ಚಾಲನೆ ನೀಡಿದ್ದರು. ಅದಕ್ಕೂ ತಿಂಗಳುಗಳ ಮುನ್ನ ಅವರು ಪ್ಯಾರಿಸ್‌ನಲ್ಲಿ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು ಹಸಿರುಮನೆ ಅನಿಲದ ಹೊರಸೂಸುವಿಕೆಯನ್ನು ತಡೆಯುವ ಮಹತ್ವದ ಬಗ್ಗೆ ತಿಳಿಹೇಳಿದ್ದರು. ಪರಿಸರವೇ ನಾಶವಾದರೆ ಮಳೆ ಎಲ್ಲಿಂದ ಬರುತ್ತದೆ? ಮಳೆಯೇ ಇಲ್ಲದಿದ್ದರೆ ಬದುಕು ಹೇಗೆ ಸಾಗುತ್ತದೆ ಎಂದು ಪ್ರಶ್ನಿಸುವ ಮೂಲಕ ಪರಿಸರ ರಕ್ಷಣೆಯ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದ್ದರು.*
##################
*ಸರಕಾರವು ಐದು ವರ್ಷಗಳಲ್ಲಿ ಮೀನಂಗಾಡಿಯನ್ನು ಇಂಗಾಲಮುಕ್ತವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಇಲ್ಲಿಯ ಯಶಸ್ಸನ್ನು ಅದು ರಾಜ್ಯದ ಇತರ ಭಾಗಗಳಲ್ಲಿ ಯೋಜನೆಯ ಜಾರಿಗಾಗಿ ನೀಲಿನಕ್ಷೆಯನ್ನಾಗಿ ಬಳಸಿಕೊಳ್ಳಲಿದೆ.*
##############
*ಮೀನಂಗಾಡಿ ಈ ಹಿಂದೆ ಹಲವಾರು ಪರಿಸರಸ್ನೇಹಿ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಹಿರಿಮೆಯನ್ನು ಹೊಂದಿದ್ದು, ಇದೇ ಕಾರಣದಿಂದ ಇಸಾಕ್ ಅವರು ಪ್ರಾಯೋಗಿಕ ಯೋಜನೆಗಾಗಿ ಈ ಗ್ರಾಮವನ್ನು ಆಯ್ದುಕೊಂಡಿದ್ದರು.*
############
*ಅಲ್ಲಿಂದೀಚಿಗೆ ಇಸಾಕ್‌ರ ಕನಸನ್ನು ನನಸಾಗಿಸುವುದು ಮೀನಂಗಾಡಿ ಪಂಚಾಯತ್‌ನ ಮೊದಲ ಆದ್ಯತೆಯಾಗಿದೆ.*
###############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ