ಮಂಗಳವಾರ, ಫೆಬ್ರವರಿ 20, 2018

ಮಹಿಳಾ ವಿಶೇಷತೆ=

*==ಜ್ಞಾನ ಮಂದಿರ==*

*==ಮಹಿಳಾ ವಿಶೇಷತೆ==*

        *"ಸರಪಂಚ್"*

*ಮಸಾಣ್ ಜೋಗಿ ಸಮುದಾಯದ ಮೊಟ್ಟಮೊದಲ ಮಹಿಳಾ ಸರಪಂಚ್ ಆದವರು ಮಹಾರಾಷ್ಟ್ರದ ಮರಾಠವಾಡದ ತುಳಸಾಬಾಯಿ ರಾಮಲು ಸಂಖವಾಡ್. ಜಾತಿಪದ್ಧತಿ, ಪುರುಷಪ್ರಧಾನ ವ್ಯವಸ್ಥೆಗಳ ವಿರುದ್ಧ ದಶಕಗಳಿಂದ ಹೋರಾಡುತ್ತಿರುವ ಇವರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆ ಅರ್ಜಾಪುರ ಗ್ರಾಮದ ಸರಪಂಚ್ ಆಗಿದ್ದಾರೆ. ಸ್ಮಶಾನ ಕಾಯುವ, ಹೆಣಗಳನ್ನು ಸುಡುವ ಕಾಯಕದ ಇವರ ಸಮುದಾಯ ಮಹಾರಾಷ್ಟ್ರದ ಹಲವು ಭಾಗಗಳಲ್ಲಿದೆ. ರೇಷನ್ ಕಾರ್ಡ್, ವಿದ್ಯುತ್ ಇತ್ಯಾದಿಗಳಿಂದ ವಂಚಿತರಾಗಿರುವ ಇವರ ಜನಾಂಗದ ಹೆಚ್ಚಿನವರು ಭಿಕ್ಷೆ ಬೇಡಿ ಜೀವಿಸುತ್ತಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ದಿಟ್ಟತನದಿಂದ ಹೋರಾಡಿ ಸರಪಂಚ್ ಆದವರು ತುಳಸಾಬಾಯಿ. ಕಳೆದ ವರ್ಷ ತಮ್ಮ ಮನೆಗೆ ವಿದ್ಯುತ್, ನೀರು, ರೇಷನ್ ಕಾರ್ಡ್ ಪಡೆದ ಇವರು, ತಮ್ಮ ಸಮುದಾಯದ ಇತರರಿಗೂ ಈ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೋರಾಡುತ್ತಿದ್ದಾರೆ*
👧👧👧👧👧👧👧👧
======≠========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ