ಭಾನುವಾರ, ಫೆಬ್ರವರಿ 25, 2018

ಹಿಂದೂ ಧರ್ಮ ಮತ್ತು ಇತಿಹಾಸ*

* *#==ಜ್ಞಾನ ಮಂದಿರ==#*

*ಹಿಂದೂ ಧರ್ಮ ಮತ್ತು ಇತಿಹಾಸ*
################
*ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.*
###############
*ದರ ಮೂಲಗಳಲ್ಲಿ ಕಬ್ಬಿಣ ಯುಗದ ಭಾರತದ ಐತಿಹಾಸಿಕ ವೈದಿಕ ಧರ್ಮವಿದೆ, ಮತ್ತು ಹಲವುವೇಳೆ ಹಿಂದೂ ಧರ್ಮವು “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಧರ್ಮ”ಅಥವಾ “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯ” ಎಂದು ಹೇಳಲಾಗುತ್ತದೆ.. ಹಿಂದೂ ಧರ್ಮವು ವಿವಿಧ ಸಂಪ್ರದಾಯಗಳಿಂದ ರಚಿತವಾಗಿದೆ ಮತ್ತು ಒಬ್ಬ ಏಕಾಂಗಿ ಸಂಸ್ಥಾಪಕನನ್ನು ಹೊಂದಿಲ್ಲ. ಹಿಂದೂ ಧರ್ಮವು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಂತರ ವಿಶ್ವದ ಮೂರನೇ ಅತಿ ದೊಡ್ಡ ಧರ್ಮವಾಗಿದೆ ಮತ್ತು ಭಾರತದಲ್ಲಿ ಸುಮಾರು 83 ಕೋಟಿ ಅನುಯಾಯಿಗಳು ಹಾಗೂ ಒಟ್ಟಾರೆ ಸುಮಾರು 100 ಕೋಟಿ ಅನುಯಾಯಿಗಳನ್ನು ಹೊಂದಿದೆ. ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯಿರುವ ಇತರ ರಾಷ್ಟ್ರಗಳನ್ನು ದಕ್ಷಿಣ ಏಷ್ಯಾದಾದ್ಯಂತ ಕಾಣಬಹುದು. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ. ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು.*
#############
*ಹಿಂದೂ ಶಬ್ದ ವ್ಯುತ್ಪತ್ತಿ :*
#############
*ಹಿಂದೂ ಶಬ್ದವು ಪರ್ಶಿಯಾದ ಭಾಷೆಯಲ್ಲಿ ಸಿಂಧೂ ನದಿಯ ಹೆಸರು, ವೈದಿಕ ಸಂಸ್ಕೃತದ ಸಿಂಧು (ಅಂದರೆ ಸಿಂಧೂ ನದಿ) ಶಬ್ದಕ್ಕೆ ಸಮಾನವಾದ ಪರ್ಶಿಯಾದ ಭಾಷೆಯ ಶಬ್ದವಾದ ಹಿಂದೂ (ಹಂಡೂ) ಎಂಬಲ್ಲಿ ಮೊದಲು ಕಂಡಿತು. ಋಗ್ವೇದವು ಭಾರತೀಯ-ಆರ್ಯರ ನಾಡನ್ನು ಸಪ್ತ ಸಿಂಧು (ವಾಯವ್ಯ ದಕ್ಷಿಣ ಏಷ್ಯಾದಲ್ಲಿನ ಏಳು ನದಿಗಳಿರುವ ನಾಡು, ಸಿಂಧೂ ನದಿಯು ಅವುಗಳಲ್ಲಿ ಒಂದು) ಎಂದು ಉಲ್ಲೇಖಿಸುತ್ತದೆ. ಇದು ಪಾರ್ಸಿ ಮತದ ಪವಿತ್ರಗ್ರಂಥವಾದ ಅವೆಸ್ಟಾದ (ವೆನ್‌ಡಿಡಾಡ್ ಅಥವಾ ವಿಡೇವ್‌ಡಾಡ್ 1.18) ಹಪ್ಟ ಹಂಡೂ ಪದಕ್ಕೆ ಅನುರೂಪವಾಗಿದೆ.*
#############
*ಈ ಪದವನ್ನು ಭಾರತೀಯ ಉಪಖಂಡದಲ್ಲಿ ಸಿಂಧೂ ನದೀ ಪ್ರದೇಶ ಮತ್ತು ಅದರ ಪೂರ್ವಕ್ಕಿರುವ ಪ್ರದೇಶದಲ್ಲಿ ವಾಸಿಸುವವರಿಗೆ ಬಳಸಲಾಗಿತ್ತು. ಅರಬ್ಬೀ ಭಾಷೆಯಲ್ಲಿ, ಅಲ್-ಹಿಂದ್ ಪದವು ‘ಆಧುನಿಕ ಭಾರತದ ಜನರ ನಾಡನ್ನೂ’ ನಿರ್ದೇಶಿಸುತ್ತದೆ. ಪರ್ಶಿಯಾದ ಭಾಷೆಯ (ಮಧ್ಯಕಾಲೀನ ಪರ್ಶಿಯಾದ ಭಾಷೆ ಹಿಂದೂಕ್, ಹೊಸ ಪರ್ಶಿಯಾದ ಭಾಷೆ ಹಿಂದೂ) ಪದವಾದ ಇದು ದೆಹಲಿ ಸಲ್ತನತ್‌ನೊಂದಿಗೆ ಭಾರತವನ್ನು ಪ್ರವೇಶಿಸಿತು ಮತ್ತು ಕನಿಷ್ಠ ಕ್ರಿ.ಶ. 1323ರಿಂದ ದಕ್ಷಿಣ ಭಾರತೀಯ ಹಾಗೂ ಕಾಶ್ಮೀರದ ಪಠ್ಯಗಳಲ್ಲಿ,ಮತ್ತು ಹೆಚ್ಚಾಗಿ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕಾಣಿಸುತ್ತದೆ.*
###############
*18ನೆಯ ಶತಮಾನದ ಕೊನೆಯಿಂದ ಈ ಪದವನ್ನು ಉಪಖಂಡದ ಬಹುತೇಕ ಧಾರ್ಮಿಕ, ಆಧ್ಯಾತ್ಮಿಕ, ಹಾಗೂ ತಾತ್ವಿಕ ಸಂಪ್ರದಾಯಗಳಿಗೆ, ಸಾಮಾನ್ಯವಾಗಿ ಸಿಖ್ ಧರ್ಮ, ಜೈನ ಧರ್ಮ, ಬೌದ್ಧ ಧರ್ಮಗಳನ್ನು ಪ್ರತ್ಯೇಕವೆಂದು ಸೇರಿಸದೆ, ಒಂದು ಸರ್ವಾನ್ವಯ ಪದವಾಗಿ ಬಳಸಲಾಗಿದೆ. ಹಿಂದೂ ಧರ್ಮ ಎಂಬ ಪದವು ಭಾರತಕ್ಕೆ ಸ್ಥಳೀಯವಾದ ಧಾರ್ಮಿಕ, ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸೂಚಿಸಲು ಇಂಗ್ಲಂಡ್‌ನ ಜನರಿಂದ ಪರಿಚಯಿಸಲ್ಪಟ್ಟಿತು.*
==============
*ಧರ್ಮಗ್ರಂಥಗಳು :*
###########
*ಹಿಂದೂ ಧರ್ಮಗ್ರಂಥಗಳ ಅಗಾಧ ಮಂಡಲವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಗ್ರಂಥಗಳು ಎಂದು ವಿಭಜಿಸಲಾಗುತ್ತದೆ. ಈ ಧರ್ಮಗ್ರಂಥಗಳು ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಪುರಾಣಗಳನ್ನು ಚರ್ಚಿಸುತ್ತವೆ ಮತ್ತು ಧರ್ಮದ ಆಚರಣೆಯ ಬಗ್ಗೆ ಮಾಹಿತಿ ಒದಗಿಸುತ್ತವೆ.*
*ಈ ಗ್ರಂಥಗಳ ಪೈಕಿ, ವೇದಗಳು ಮತ್ತು ಉಪನಿಷತ್ತುಗಳು ಅಧಿಕಾರ, ಮಹತ್ವ ಮತ್ತು ಪ್ರಾಚೀನತೆಯಲ್ಲಿ ಪ್ರಮುಖವಾದವುಗಳು. ಇತರ ಪ್ರಮುಖವಾದ ಧರ್ಮಗ್ರಂಥಗಳು, ಪುರಾಣಗಳು ಮತ್ತು ಮಹಾಕಾವ್ಯಗಳಾದ ಮಹಾಭಾರತ ಹಾಗೂ ರಾಮಾಯಣಗಳನ್ನು ಒಳಗೊಳ್ಳುತ್ತವೆ. ಕೃಷ್ಣನಿಂದ ನುಡಿಯಲಾದ ಮಹಾಭಾರತದ ಒಂದು ಪ್ರಕರಣ ಗ್ರಂಥವಾದ ಭಗವದ್ಗೀತೆಯನ್ನು ಕೆಲವೊಮ್ಮೆ ವೇದಗಳ ಆಧ್ಯಾತ್ಮಿಕ ಉಪದೇಶಗಳ ಸಾರಾಂಶವೆಂದು ಕರೆಯಲಾಗುತ್ತದೆ.*
==============
# *ಹಿಂದೂ ಧರ್ಮ : *
÷÷÷÷÷÷÷÷÷÷÷÷÷÷÷
* *ಭಾರತದ ಅತೀ ಪ್ರಾಚೀನ ಧರ್ಮ – ಹಿಂಧೂ ಧರ್ಮ*
* *ಹಿಂಧೂ ಧರ್ಮವನ್ನು ಈ ಹೆಸರಿನಿಂದಲೂ ಕರೆಯುವರು – ಸನಾತನ ಧರ್ಮ.*
* *ಹಿಂಧೂ ಎಂಬ ಪದ ಈ ಭಾಷೆಯಿಂದ ಬಂದಿದೆ – ಪರ್ಶಿಯನ್*
* *ಸಿಂಧೂ ದೇಶವನ್ನು ಹಿಂಧೂ ಎಂದು ಕರೆದವರು – ಪರ್ಶಿಯನ್ನರು*
* *ಹಿಂದೂ ಧರ್ಮದ ಸಂಕೇತ – ಪ್ರಣವ ಅಥವಾ ಓಂ (ಅರ್ಧ – ಸದಾ ನೂತನ ಅಥವಾ ಆ ಮೂಲಕ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ)*
* *ಹಿಂದೂ ಧರ್ಮದ ಇತರ ಹೆಸರುಗಳು – ವೈಧಿಕ ಧರ್ಮ , ಆರ್ಯ ಧರ್ಮ*
* *ಹಿಂದೂ ಧರ್ಮದ ಮೂಲ ಗ್ರಂಥಗಳ ವಿಭಾಗಗಳು – ಶೃತಿ ಮತ್ತು ಸ್ಮೃತಿ*
* *ಶೃತಿ ಎಂದರೆ – ಕೇಳಿಸಿಕೊಂಡಿದ್ದು ಎಂದರ್ಥ*
* *ಸ್ಮೃತಿ ಎಂದರೆ – ನೆನಪಿನಲ್ಲಿ ಉಳಿದದ್ದು ಎಂದರ್ಥ*
* *ಭಗವದ್ಗೀತೆ – ಮಹಾಭಾರತದ ಒಂದು ಅಂಗವಾಗಿದೆ*
############

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ