ಸೋಮವಾರ, ಫೆಬ್ರವರಿ 26, 2018

ಜಾರಿ ನಿರ್ದೇಶನಾಲಯ.* *ಏನಿದು...?*

*##ಮಾಹಿತಿ ವೇದಿಕೆ##*

*ಜಾರಿ ನಿರ್ದೇಶನಾಲಯ.*
         *ಏನಿದು...?*
###############
*ಇದು ಕಾನೂನು ಜಾರಿ ಸಂಸ್ಥೆ ಮತ್ತು ಆರ್ಥಿಕ ಗುಪ್ತಚರ ಸಂಸ್ಥೆಯಾಗಿದ್ದು, ಆರ್ಥಿಕ ಕಾನೂನುಗಳನ್ನು ಜಾರಿಗೆ ತರುವುದು ಮತ್ತು ಭಾರತದಲ್ಲಿ ಆರ್ಥಿಕ ಅಪರಾಧವನ್ನು ನಿವಾರಿಸಿವುದು. ಇದು ಆದಾಯ ಇಲಾಖೆಯ (ಹಣಕಾಸು ಸಚಿವಾಲಯ೦ ಭಾಗವಾಗಿದೆ. ಜಾರಿ ನಿರ್ದೇಶನಾಲಯದ ಮುಖ್ಯ ಉದ್ದೇಶವು ಎರಡು ಪ್ರಮುಖ ಕಾಯಿದೆಗಳ ಜಾರಿಯಾಗಿದೆ ಅವು ಯಾವುವೆಂದರೆ - ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ 1999 (FEMA) ಮತ್ತು Prevention of Money Laundering Act 2002 (PMLA). ಇದು ಭಾರತೀಯ ಕಂದಾಯ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಆಡಳಿತಾತ್ಮಕ ಸೇವೆಯ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ವಿದೇಶಾಂಗ ವಿನಿಮಯ ನಿಯಂತ್ರಣ ಕಾಯಿದೆ, 1947 ರ ಅಡಿಯಲ್ಲಿ ವಿನಿಮಯ ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮೇ 1 1956 ರಂದು Enforcement Unit ಅನ್ನು ಸ್ಥಾಪಿಸಲಾಯಿತು. ನಂತರ Enforcement Unit ಅನ್ನು " ಜಾರಿ ನಿರ್ದೇಶನಾಲಯ " ಎಂದು 1957 ರಲ್ಲಿ ಮರು ನಾಮಕರಣ ಮಾಡಲಾಯಿತು.*

==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ