ಮಂಗಳವಾರ, ಫೆಬ್ರವರಿ 20, 2018

ಡೇ ಸ್ಪೆಷಲ್‌: ವಿಶ್ವ ಸಾಮಾಜಿಕ ನ್ಯಾಯ ದಿನ

*==ಜ್ಞಾನ ಮಂದಿರ==*

*ಡೇ ಸ್ಪೆಷಲ್‌: ವಿಶ್ವ ಸಾಮಾಜಿಕ ನ್ಯಾಯ ದಿನ*
*================*
*ರಾಷ್ಟ್ರದ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಅವಶ್ಯ. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗೆ ಆಧಾರವಾಗಿರುವ ತತ್ವಾಗಿದೆ. ವಿಶ್ವದಾದ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ, ಬಡತನ, ನಿರುದ್ಯೋಗ, ಶಿಕ್ಷಣ, ವಲಸೆ, ಆರ್ಥಿಕ ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿದೆ. ಇಂಥ ಸಮಸ್ಯೆಗಳನ್ನು ತೊಡೆದು ಹಾಕುವ ಪ್ರಯತ್ನಗಳಿಗೆ ಪ್ರೋತ್ಸಾಹಿಸಲು , ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ಕಿತ್ತುಹಾಕಲು ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನಆಚರಿಸಲಾಗುತ್ತದೆ.*

*ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ರ ಫೆಬ್ರವರಿ 20ರಂದು ಈ ದಿನವನ್ನು ಅಂಗೀಕರಿಸಲಾಯಿತು ಹಾಗೂ 2009ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಲಾಯಿತು. ಪ್ರತಿ ಸಮಾಜದಲ್ಲು ಐಕ್ಯತೆ, ಸಾಮರಸ್ಯ, ಸೌಹಾರ್ದತೆ , ಮೂಲಭೂತ ಹಕ್ಕುಗಳ ನ್ಯಾಯವಿದ್ದರೆ ಸಮಾಜದ ಅಭಿವೃದ್ಧಿಯಾಗುತ್ತದೆ. ಇದರಿಂದ ದೇಶ ಅಭಿವೃದ್ದಿಯಾಗುತ್ತದೆ. ದೇಶ ಅಭಿವೃದ್ಧಿಯಾದರೆ ವಿಶ್ವವೇ ಅಭಿವೃದ್ಧಿಯಾಗುತ್ತದೆ ಎಂಬುದು ವಿಶ್ವ ಸಂಸ್ಥೆಯ ಅಭಿಪ್ರಾಯವಾಗಿದೆ.*
===============
*ಪ್ರತಿ ವರ್ಷ ಒಂದು ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವರ್ಕರ್ಸ್‌ ಆನ್‌ ದಿ ಮೂವ್‌: ದ ಕ್ವೆಸ್ಟ್‌ ಫಾರ್‌ ಸೋಶಿಯಲ್‌ ಜಸ್ಟಿಸ್‌. ಯೋಗ್ಯವಾದ ಕೆಲಸದ ಹುಡುಗಾಟಕ್ಕಾಗಿ ಅನೇಕರು ವಲಸೆ ಹೋಗುತ್ತಿದ್ದಾರೆ. ಇದು ಕೂಡ ಸಾಮಾಜಿಕ ಸಮಸ್ಯೆಯ ಭಾಗವಾಗಿದೆ. ಈ ಬಗ್ಗೆ ಅರಿವು ಮೂಡಿಸಲು ಈ ವರ್ಷದ ಆಚರಣೆ ಮುಡಿಪಾಗಿದೆ. ಯುಎನ್‌ , ಇಂಟರ್‌ನ್ಯಾಷನಲ್‌ ಲೇಬರ್‌ ಆಫೀಸ್‌ ಸೇರಿದಂತೆ ಹಲವು ಸಂಘಟನೆಗಳು ಸಾಮಾಜಿಕ ನ್ಯಾಯದ ಮಹತ್ವ ಕುರಿತು ವಿಶೇಷ ಹಾಗೂ ಹಲವು ಚಟುವಟಿಕೆಗಳ್ನು ಹಮ್ಮಿಕೊಳ್ಳುತ್ತವೆ.*
==============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ