ಗುರುವಾರ, ಫೆಬ್ರವರಿ 22, 2018

ಮಹಿಳಾ ಸಬಲೀಕರಣಕ್ಕೆ ಮಾದರಿಯಾದ ರಾಜಸ್ಥಾನದ ರೈಲು ನಿಲ್ದಾಣ*

*==ಜ್ಞಾನ ಮಂದಿರ==*

*ಮಹಿಳಾ ಸಬಲೀಕರಣಕ್ಕೆ ಮಾದರಿಯಾದ ರಾಜಸ್ಥಾನದ ರೈಲು ನಿಲ್ದಾಣ*
===============
*ಜೈಪುರ: ರಾಜಸ್ಥಾನದ ಜೈಪುರದ ಗಾಂಧೀನಗರ ರೈಲ್ವೇ ಸ್ಟೇಶನ್ ದಿನದ 24 ಗಂಟೆಯೂ ಮಹಿಳೆಯರಿಂದಲೇ ಕಾರ್ಯಾಚರಿಸಲ್ಪಡುತ್ತಿರುವ ದೇಶದ ಮೊತ್ತ ಮೊದಲ ನಾನ್-ಸಬ್‌ಅರ್ಬನ್ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.*
==================
*ಈ ವಾರದ ಆರಂಭದಿಂದ ಈ ಸ್ಟೇಶನ್‌ನ ಎಲ್ಲಾ 32 ಹುದ್ದೆಗಳಿಗೆ ಮಹಿಳೆಯರನ್ನೇ ನೇಮಿಸಲಾಗಿದೆ, ಟಿಕೆಟ್ ಕಲೆಕ್ಟರ್, ಪಾಯಿಂಟ್ ವುಮೆನ್, ರೈಲ್ವೇ ರಕ್ಷಣಾ ಪಡೆ, ಸ್ಟೇಶನ್ ಮಾಸ್ಟರ್, ಟಿಕೆಟ್ ರಿಸರ್ವೇಶನ್ ಕ್ಲಕ್ ಹೀಗೆ ಎಲ್ಲಾ ಕಾರ್ಯವನ್ನೂ ಮಹಿಳೆಯರೇ ಇಲ್ಲಿ ನಿಭಾಯಿಸುತ್ತಿದ್ದಾರೆ.*
==============
*ದಿನ ಸುಮಾರು 7000 ಪ್ರಯಾಣಿಕರು ಇಲ್ಲಿ ಬಂದು ಹೋಗುತ್ತಾರೆ, 50 ರೈಲುಗಳು ಈ ನಿಲ್ದಾಣವನ್ನು ಹಾದು ಹೋಗುತ್ತವೆ. 25 ರೈಲುಗಳು ಇಲ್ಲಿ ತಂಗುತ್ತವೆ.*
============
*ಈ ನಿಲ್ದಾಣದ ಎಲ್ಲಾ ಕಾರ್ಯವನ್ನು ಮಹಿಳೆಯರೇ ನಿಭಾಯಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಯಾಗಿದೆ.*
=================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ