ವಿಜ್ಞಾನ :
ಜೀವಕ್ರಿಯೆಗಳ
ಅಧ್ಯಯನ
=================
ಪೋಷಣೆ: ಜೀವಿಯು ಆಹಾರವನ್ನು ಸೇವಿಸಿ, ಅದನ್ನು ದೇಹಗತವನ್ನಾಗಿ ಮಾಡಲು ಕ್ರಿಯೆಗೆ ಪೋಷಣೆ ಎಂದು ಹೆಸರು. ಪೋಷಣೆಯಲ್ಲಿ ಎರಡು ಮುಖ್ಯ ವಿಧಗಳಿವೆ. ಸರಳ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ವಿಧಾನವನ್ನು ಸ್ವಪೋಷಣೆ ಎಂದು ಕರೆಯುತ್ತಾರೆ. ಸ್ವಪೋಷಣೆಯಲ್ಲಿ 2 ವಿಧಗಳಿವೆ. ದ್ಯುತಿ ಸ್ವಪೋಷಣೆ ಮತ್ತು ರಾಸಾಯನಿಕ ಸ್ವಪೋಷಣೆ ದ್ಯುತಿಸ್ವಪೋಷಣೆ ಎಲ್ಲಾ ಹಸಿರು ಸಸ್ಯಗಳಲ್ಲಿ ನಡೆಯುತ್ತದೆ. ರಾಸಾಯನಿಕ ಸ್ವಪೋಷಣೆ ಕೆಲವು ಬ್ಯಾಕ್ಟೀರಿಯಾಗಳಲ್ಲಿ ನಡೆಯುತ್ತದೆ.
# ದ್ಯುತಿ ಸಂಶ್ಲೇಷಣೆ:
=============
ಹಸಿರು ಸಸ್ಯಗಳು ನಿರವಯವ ವಸ್ತುಗಳಾದ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಸೂರ್ಯನ ಬೆಳಕು ಮತ್ತು ಹರಿತ್ತಿನ ಸಹಾಯದಿಂದ ಸಾವಯವ ವಸ್ತುಗಳನ್ನಾಗಿ ಸಂಶ್ಲೇಷಿಸುವ ಕ್ರಿಯೆಯನ್ನು ದ್ಯುತಿ ಸಂಶ್ಲೇಷಣೆ ಎಂದು ಕರೆಯುತ್ತಾರೆ. 6CO2+12H2OàC6H12O6+6H20+6O2 ದ್ಯುತಿ ಸಂಶ್ಲೇಷಣೆ ಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ.
1. ಬೆಳಕಿನ ಪ್ರತಿಕ್ರಿಯೆ: ಇದು ಬೆಳಕಿನ ಸಹಾಯದಿಂದ ಕ್ಲೋರೋಪ್ಲಾಸ್ಟನ ಗ್ರಾನದಲ್ಲಿ ನಡೆಯುತ್ತದೆ. ಇದನ್ನು ದ್ಯುತಿ ರಾಸಾಯನಿಕ ಪ್ರತಿಕ್ರಿಯೆ ಎನ್ನುತ್ತಾರೆ. ಈ ಹಂತದಲ್ಲಿ ನೀರು ಹೈಡ್ರಾಕ್ಸಿಲ್ ಮತ್ತು ಹೈಡ್ರೋಜನ್ ಅಯಾನುಗಳಾಗಿ ವಿಭಜಿಸಲ್ಪಡುತ್ತದೆ.
2. ಇರುಳಿನ ಪ್ರತಿಕ್ರಿಯೆ: ಇದು ಬೆಳಕಿನ ಸಹಾಯವಿಲ್ಲದೆ ಕ್ಲೋರೋ ಪ್ಲಾಸ್ಟಅನ ಸ್ಟ್ರೋಮಾದಲ್ಲಿ ನಡೆಯುತ್ತದೆ. ಇದನ್ನು ಕೆಲ್ವಿನ್ ಚಕ್ರವೆಂದು ಕರೆಯುತ್ತಾರೆ.
ಪರಪೋಷಣೆ: ಆಹಾರವನ್ನು ತಾವೇ ತಯಾರಿಸಲಾರದೆ ಇತರ ಮೂಲಗಳಿಂದ ಆಹಾರವನ್ನು ಪಡೆಯುವ ಪೋಷಣೆಯನ್ನು ಪರಪೋಷಣೆ ಎನ್ನುತ್ತಾರೆ. ಪರಪೋಷಕಗಳಲ್ಲಿ ಅನೇಕ ವಿಧಗಳಿವೆ, ಕೊಳೆತಿನಿಗಳು, ಅರೆಪರಾವಲಂಭಿಗಳು, ಪೂರ್ಣ ಪರಾವಲಂಬಿಗಳು, ಕೀಟಾಹಾರಿಗಳು, ಅಪ್ಪು ಸಸ್ಯಗಳು, ಕೂಡು ಜೀವನ ಇತ್ಯಾದಿ.
# ಜೀರ್ಣಕ್ರಿಯೆ:
============
ಮಾನವನಲ್ಲಿ ಜೀರ್ಣಕ್ರಿಯೆಯು 2 ಹಂತಗಳಲ್ಲಿ ನಡೆಯುತ್ತದೆ
1. ಯಾಂತ್ರಿಕ ಜೀರ್ಣಕ್ರಿಯೆ: ಆಹಾರದ ದೊಡ್ಡ ಕಣಗಳು ನಾಲಿಗೆ,ಹಲ್ಲು, ಮತ್ತು ಜಠರದ ಬಲಿಷ್ಠ ಸ್ನಾಯುಗಳಿಂದ ಮೃದುವಾದ ಮುದ್ದೆಯಂತೆ ಪರಿವರ್ತಿಸಲ್ಪಡುವುದು.
2. ರಾಸಾಯನಿಕ ಜೀರ್ಣಕ್ರಿಯೆ: ಆಹಾರವು ಕಿಣ್ವಗಳ ಕ್ರಿಯೆಯಿಂದ ಜಲವಿಶ್ಲೇಷಣೆ ಹೊಂದಿ ಅತ್ಯಂತ ಸೂಕ್ಷ್ಮಕಣಗಳಾಗುವುದು. ಮಾನವನ ಜೀರ್ಣನಾಳವು ಬಾಯಿಯಿಂದ ಗುದದ್ವಾದರವರೆಗೂ ವಿಸ್ತರಿದ್ದು ಗಂಟಲು, ಅನ್ನನಾಳ, ಜಠರ, ಸಣ್ಣಕರುಳು ಮತ್ತು ದೊಡ್ಡಕರುಳುಗಳನ್ನು ಒಳಗೊಂಡಿದೆ.
ಹಲ್ಲು:
=====
ಇದು ಡೆಂಟಿನ ಎಂಬ ಅತಿ ಗಟ್ಟಿಯಾದ ವಸ್ತುವಿನಿಂದ ಆಗಿದೆ. ಇದರ ಮೇಲೆ ಎನಾಮೆಲ್ ಎಂಬ ಅತ್ಯಂತ ಗಟ್ಟಿಯಾದ ಪದರವಿದೆ. ಮಾನವನಲ್ಲಿ 4 ವಿಧವಾದ ಹಲ್ಲುಗಳಿವೆ. ಬಾಚಿ ಹಲ್ಲುಗಳು, ಕೋರೆಹಲ್ಲುಗಳು, ಮುಂದವಡೆ, ಹಿಂದವಡೆ, ಮಾನವನ ದಂತಸೂತ್ರ 2,1,2,3. ಲಾಲಾಗ್ರಂಥಿಗಳು ಲಾಲಾರಸವನ್ನು ಸ್ರವಿಸುತ್ತವೆ. ಇದರಲ್ಲಿ ಅಮೈಲೇಸ್ ಕಿಣ್ವವಿದೆ. ಗಂಟಲಿನ ಮುಂಬಾಗದಲ್ಲಿ ಎಪಿಗ್ಲಾಟಿಸ್ ಎಂಬ ತೆಳುವಾದ ಮೃದಸ್ವಿ ಪೊರೆಯಿದ್ದು, ಇದು ಆಹಾರವು ಶ್ವಾಸನಾಳವನ್ನು ಪ್ರವೇಶಿಸದಂತೆ ತಡೆಯುತ್ತದೆ. ಜಠರದಲ್ಲಿ ಹೂಡ್ರೋಕ್ಲೋರಿಕ್ ಆಮ್ಲವು ಬಿಡುಗಡೆಯಾಗುತ್ತದೆ. ಜಠರ ರಸದಲ್ಲಿ ಪೆಪ್ಸಿನ್ ಮತ್ತು ರೆನಿನ್ ಕಿನ್ವಗಳಿಗೆ ಮೆದೋಜೀರಕ ರಸದಲ್ಲಿ ಅಮೈಲೇಸ್ ಮತ್ತು ಮೇದೋಜೀರಕ ಲಿಪೇಸ್ ಕಿಣ್ವಗಳಿವೆ. ಕರುಳು ರಸದಲ್ಲಿ ಮಾಲ್ವೇಸ್, ಸುಕ್ರೇಸ್, ಲ್ಯಾಕ್ವೇಸ್, ಪೆಪ್ಪೈಡೇಸ್, ಕರುಳಿನ ಲಿಪೇಸ್ ಕಿಣ್ವಗಳಿವೆ.
*# ಶ್ವಾಸಕ್ರಿಯೆ: *
=============
*ಆಹಾರವನ್ನು ಉತ್ಕರ್ಷಿಸಿ ಶಕ್ತಿಯ ಬಿಡುಗಡೆಯೊಡನೆ CO2 ಮತ್ತು ನೀರನ್ನು ಹೊರಹಾಕುವ ಕ್ರಿಯೆಯನ್ನು ಶ್ವಾಸಕ್ರಿಯೆ ಎನ್ನುತ್ತಾರೆ. ಶ್ವಾಸಕ್ರಿಯೆಯಲ್ಲಿ 2 ವಿಧಗಳಿವೆ. ಆಮ್ಲಜನಕ ಸಹಿತ ಶ್ವಾಸಕ್ರಿಯೆ ಮತ್ತು ಆಮ್ಲಜನಕ ರಹಿತ ಶ್ವಾಸಕ್ರಿಯೆ. ಆಕ್ಸಿಜನ್‍ನಿಂದ ಸಾವಯವ ಸಂಯುಕ್ತಗಳ ವಿಭಜನೆಯಾಗಿ ಶಕ್ತಿ CO2ನೀರು ಬಿಡುಗಡೆಯಾಗುವುದನ್ನು ಆಕ್ಸಿಜನ್ ಸಹಿತ ಶ್ವಾಸಕ್ರಿಯೆ ಎನ್ನುವರು. ಇದು ಮೇಲ್ಪಟ್ಟದ ಪ್ರಾಣಿಗಳಲ್ಲಿ ನಡೆಯುತ್ತದೆ.*
C6H1206+6O2 6CO2+6H2O+ ±ÀQÛ 673 K (Calory)*
*ಸಾವಯವ ಸಂಯುಕ್ತಗಳು ಆಕ್ಸಿಜನ್ ಸಹಾಯವಿಲ್ಲದೆ ವಿಭಜನೆಯಾಗಿ ಆಲ್ಕೋಹಾಲ್, ಸ್ವಲ್ಪ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಈ ರೀತಿಯ ಶ್ವಾಸಕ್ರಿಯೆ ಕೆಳಮಟ್ಟದ ಜೀವಿಗಳಾದ ಬ್ಯಾಕ್ಟೀರಿಯಾ ಮತ್ತು ಯೀಸ್ಟಗಳಲ್ಲಿ ಕಂಡುಬರುತ್ತದೆ. *
C6H1206 2C2H5OH+2CO2+±ÀQÛ 56 K (Calory) *ಮಾನವನ ಶ್ವಾಸಾಂಗವ್ಯೂಹವು ಮೂಗು, ಗಂಟಲು, ಧ್ವನಿಪೆಟ್ಟಿಗೆ ಶ್ವಾಸನಾಳ, ಬ್ರಾಂಕೈ, ಬ್ರಾಕೀಯಲ್‍ಗಳು ಮತ್ತು ಆಲ್ವಿಯೋಲೈಗಳನ್ನು ಒಳಗೊಂಡಿರುತ್ತದೆ.*
# ಸಾಗಾಣಿಕ ವ್ಯೂಹ:
============
*ಭುಮಿಯಿಂದ ಬೇರು ಹೀರಲ್ಪಟ್ಟ ನಿರವಯವ ವಸ್ತುಗಳು ಗುರುತ್ವಾಕರ್ಷಣೆಯ ವಿರುದ್ದವಾಗಿ ಕ್ಸೈಲಂ ಅಂಗಾಮಶದ ಕೊಳವೆಗಳ ಮೂಲಕ ಮೇಲ್ಮುಖವಾಗಿ ಸಾಗಿಸಲ್ಪಡುವುದನ್ನು ಹಿಡರಸದ ಮೇಲೇರಿಕೆ ಎನ್ನುತ್ತಾರೆ. ಎಲೆ ತಯಾರಿಸಿದ ಆಹಾರ ಮತ್ತು ಶೇಖರಣೆಯಾದ ಆಹಾರ, ಪ್ಲೂಯಂ ಅಂಗಾಂಶದ ಮೂಲಕ ಸಸ್ಯದ ಕಾಂಡವನ್ನು ತಲುಪಿ ಅಲ್ಲಿಂದ ಆಹಾರದ ಅವಶ್ಯಕತೆ ಇರುವ ಭಾಗಗಳಿಗೆ ಅಥವಾ ಶೇಕರಣಾ ಭಾಗಗಳಿಗೆ ಸಾಗಿಸಲ್ಪಡುವುದನ್ನು ಸಾವಯವ ವಸ್ತುಗಳ ಸಾಗಾಣಿಕೆ ಎನ್ನುವರು.*
*ಮಾನವನಲ್ಲಿ ಸಾಗಾಣಿಕಾ ವ್ಯೂಹ:*
==========
*ಮಾನವನ ಸಾಗಾಣಿಕಾ ವ್ಯೂಹವು ರಕ್ತನಾಳಗಳು ಮತ್ತು ಹೃದಯವನ್ನು ಒಳಗೊಂಡಿದೆ.
ರಕ್ತ: ರಕ್ತವು ಒಂದು ದ್ರವರೂಪದ ಸಂಯೋಜಕ ಅಂಗಾಂಶವಾಗಿದೆ. ಇದು ಪ್ಲಾಸ್ಮಾ ಕೆಂಪು ರಕ್ತಕಣಗಳು ಬಿಳಿರಕ್ತಕಣಗಳು ಮತ್ತು ಕಿರಯತಟ್ಟೆಗಳನ್ನು ಒಳಗೊಂಡಿದೆ.*
ರಕ್ತನಾಳಗಳು:
==========
ಮಾನವನಲ್ಲಿ 3 ವಿಧವಾದ ರಕ್ತನಾಳಗಳಿವೆ. ಅಪಧಮನಿಗಳು, ಅಭಿಧಮನಿಗಳೂ ಮತ್ತು ಲೋಮನಾಳಗಳು ಹೃದಯದಿಂದ ರಕ್ತವನ್ನು ತೆಗೆದುಕೊಂಡು ಹೋಗುವ ರಕ್ತನಾಳಗಳಿಗೆ ಅಪಧಮನಿಗಳು ಎನ್ನುವರು. ಹೃದಯಕ್ಕೆ ರಕ್ತವನ್ನು ತರುವ ರಕ್ತನಾಳಗಳನ್ನು ಅಭಿಧಮನಿಗಳು ಎನ್ನುವರು. ಅಪದಮನಿಗಳು ಮತ್ತು ಅಭಿದಮನಿಗಳನ್ನು ಸೇರಿಸುವ ರಕ್ತನಾಳಗಳನ್ನು ಲೋಮನಾಳಗಳು ಎನ್ನುವರು. ಇವುಗಳ ಭಿತ್ತಿಯು ಒಂದು ಕೋಶದಷ್ಟು ದಪ್ಪನಾದ ಗೋಡೆಯಿಂದ ಮಾಡಲ್ಪಟ್ಟಿದೆ. ಇವು ರಕ್ತ ಮತ್ತು ದೇಹದ ಕೊಶಗಳ ನಡುವೆ ವಸ್ತುಗಳ ವಿನಿಮಯದಲ್ಲಿ ಸಹಾಯಕವಾಗಿದೆ.*
*ಹೃದಯ:*
=======
*ಇದು ರಕ್ತವನ್ನು ಪಂಪುಮಾಡುವ ಅಂಗವಾಗಿದೆ. ಮಾನವನ ಹೃದಯವು 4 ಕೋಣೆಗಳನ್ನು ಹೊಂದಿದೆ. ಹೃದಯದ ಸುತ್ತಲೂ ಪೆರೆಕಾರ್ಡಿಯಂ ಎಂಬ ಪೊರೆಯಿದೆ. ಹೃದಯದ 4 ಕೋಣೆಗಳೆಂದರೆ ಎಡಹೃತ್ಕರ್ಷ, ಎಡ ಹೃತ್ಕುರ್ಷಿ, ಬಲ ಹೃತ್ಕುರ್ಷಿ ಮೇಲಿನ ಎರಡು ಹೃತ್ಕರ್ಷಗಳು ಇವು ರಕ್ತವನ್ನು ಸ್ವೀಕರಿಸುವ ಕೋಣೆಗಳಾಗಿದ್ದು ಗಾತ್ರದಲ್ಲಿ ಚಿಕ್ಕದಾಗಿವೆ. ಕೆಳಗಿನ 2 ಕೋಣೆಗಳು ಹೃತ್ಕುರ್ಷಿಗಳು, ಇವು ರಕ್ತವನ್ನು ಪಂಪುಮಾಡುವ ಕೋಣೆಗಳಾಗಿದ್ದು ಗಾತ್ರದಲ್ಲಿ ದೊಡ್ಡದಾಗಿವೆ.*
*# ರಕ್ತ ಪರಿಚಲನೆ:*
*============*
* ಮಾನವನ ರಕ್ತಪರಿಚಲನೆಯನ್ನು ಕಂಡುಹಿಡಿದವರು ವಿಲಿಯಂ ಹಾರ್ವೆ ಎಂಬ ವಿಜ್ಞಾನಿ ಮಾನವನ ರಕ್ತ ಪರಿಚಲನೆಯನ್ನು ಇಮ್ಮಡಿ ಪರಿಚಲನೆ ಎನ್ನುವರು. ಏಕೆಂದರೆ ದೇಹದಲ್ಲಿ ಒಂದು ಸಂಪುರ್ಣ ಪರಿಚಲನೆಗೆ ರಕ್ತವು ಎರಡು ಸಲ ಹೃದಯವನ್ನು ಹಾದು ಹೋಗಬೇಕು. ಈ ಪರಿಚಲನೆಗಳೆಂದರೆ 1. ಪುಪ್ಪಸಕ ಪರಿಚಲನೆ 2. ದೈಹಿಕ ಪರಿಚಲನೆ. ಹೃದಯಕ್ಕೂ ಶ್ವಾಸಕೋಶಗಳಿಗೂ ನಡುವಿನ ರಕ್ತ ಪರಿಚಲನೆಯ ಪಥವನ್ನು ಪುಪ್ಪಸಕ ಪರಿಚಲನೆ ಎನ್ನುವರು. ಹೃದಯ ಮತ್ತು ದೇಹದ ವಿವಿಧ ಅಂಗಾಂಶಗಳ ನಡುವಿನ ರಕ್ತ ಸಂಚಾರದ ಪಥಕ್ಕೆ ದೈಹಿಕ ಪರಿಚಲನೆ ಎನ್ನುವರು.*
*ದುಗ್ದರಸ:*
===========
* (ಲಿಂಫ್) ದುಗ್ದರಸವು ಅಂಗಾಂಶ ಮತ್ತು ಕೋಶಗಳ ನಡುವಿನ ಅವಕಾಶಗಳಲ್ಲಿ ಕಂಡುಬರುವ ವರ್ನರಹಿತ ದ್ರವ ರಚನೆಯಲ್ಲಿ ರಕ್ತರಸವನ್ನು ಹೋಲುತ್ತದೆ. ಆದರೆ ಪ್ರೋಟೀನ್ ಅಂಸ ಕಡಿಮೆ ಇರುತ್ತದೆ. ಮತ್ತು ಕೆಂಪು ರಕ್ತ ಕಣಗಳಿರುವುದಿಲ್ಲ. ಇದರಲ್ಲಿ ಬಿಳಿಯ ರಕ್ತ ಕರಣಗಳು ಹೆಚ್ಚಾಗಿದ್ದು, ದೇಹದ ರಕ್ಷಣಾ ವ್ಯವಸ್ಥೇಯಲ್ಲಿ ಸಹಕರಿಸುತ್ತದೆ.*
*ವಿಸರ್ಜನೆ:*
*"""""''''''''''''''''*
*ಕೋಶದಲ್ಲಿ ಚಯಾಪಚಯ ಕ್ರಿಯೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳನ್ನು ದೇಹದಿಂದ ಹೊರಹಾಕುವ ಜೀವನ ಕ್ರಿಯೆಯನ್ನು ವಿಸರ್ಜನೆ ಎಂದು ಕರೆಯಲಾಗುತ್ತದೆ.*
*#ಸಸ್ಯಗಳಲ್ಲಿ ವಿಸರ್ಜನೆ:*
*=============*
* ಸಸ್ಯಗಳು ಪ್ರೋಟೀನ್‍ಗಳನ್ನು ಸೇವಿಸುವುದಿಲ್ಲ ಮತ್ತು ಅವುಗಳಲ್ಲಿ ಸ್ನಾಯು ಚಟುವಟಿಕೆಗಳಿಲ್ಲ. ಆದ್ದರಿಂದ ಬಿಡುಗಡೆಯಾಗುವ ತ್ಯಾಜ್ಯವಸ್ತುಗಳ ಪ್ರಮಾಣ ಕಡಿಮೆ ಸಸ್ಯಗಳಲ್ಲಿ ಬಿಡುಗಡೆಯಾಗುವ ತ್ಯಾಜ್ಯ ವಸ್ತುಗಳೆಂದರೆ, ಸಸಾರಜನಕ ವಸ್ತುಗಳು, ಟ್ಯಾನಿನ್‍ಗಳು, ಆಳ್ಕಲಾಯಿಡ್‍ಗಳು, ಗ್ಲೈ ಕೋಸೈಡ್ಸ ಮತ್ತು ಅಂಥೋಸಯಾನಿಗಳು. ಈ ತ್ಯಾಜ್ಯ ವಸ್ತುಗಳು ಅಮೋನಿಯಾ ರೂಪದಲ್ಲಿ ಪತ್ರರಂಧ್ರಗಳ ಮೂಲಕ ಹೊರಹಾಕಲ್ಪಡುತ್ತವೆ ಅಥವಾ ಸಾರಜನಕ ಲವಣಗಳ ರೂಪದಲ್ಲಿ ಬೇರುಗಳ ಮೂಲಕ ಮಣ್ಣಿಗೆ ಹೊರಹಾಕಲ್ಪಡುತ್ತವೆ. ಕೆಲವು ಸಸ್ಯಗಳಲ್ಲಿ ತ್ಯಾಜ್ಯ ವಸ್ತುಗಳು ಹರಳಿನ ರೂಪದಲ್ಲಿ ಕೋಶಗಳಲ್ಲಿ ಶೇಕರಣೆಯಾಗುತ್ತವೆ. ಸಸ್ಯಗಳಲ್ಲಿ ವಿಶೇಷವಾದ ವಿಸರ್ಜನಾಂಗಗಳಿಲ್ಲ. ಅವುಗಳ ಕೋಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳು ಎಲೆ, ತೊಗಟೆ ಹೂವಿನದಳಗಳೀಗೆ ಸಾಗಿಸುವುವು. ಅವುಗಳನ್ನು ಉದುರಿಸುವುದರ ಮೂಲಕ ತ್ಯಾಜ್ಯ ವಸ್ತುಗಳು ವಿಸರ್ಜನೆಯಾಗುತ್ತದೆ.*
*==ಮಾಹಿತಿ ವೇದಿಕೆ==*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ