ಮಂಗಳವಾರ, ಫೆಬ್ರವರಿ 13, 2018

ಫೇಸ್​ಬುಕ್ ಬಣ್ಣ ನೀಲಿ ಏಕೆ?

ಫೇಸ್​ಬುಕ್ ಬಣ್ಣ ನೀಲಿ ಏಕೆ?
=================
ಫೇಸ್​ಬುಕ್​ನ ರೂವಾರಿ ಮಾರ್ಕ್ ಎಲ್ಲಿಯೆಟ್ ಜುಕರ್​ಬರ್ಗ್ ಬಳಿ ಸಂಪತ್ತಿನ ಸಮುದ್ರವೇ ಇದೆ. ಆದರೂ ಅವರು ಅತಿ ಸರಳ ವ್ಯಕ್ತಿ. ಈಗಲೂ ಅವರು ದುಬಾರಿ ಕಾರುಗಳನ್ನು ಬಳಸುವುದಿಲ್ಲ
================
2017ರಲ್ಲಿ ವಿಶ್ವಜನಸಂಖ್ಯೆಯ ಸುಮಾರು 7.6 ಬಿಲಿಯ ಜನರಲ್ಲಿ, ಶೇ.17 ಜನರು, ಎಂದರೆ ಸುಮಾರು 1,3 ಮಿಲಿಯ ಜನರು ಫೇಸ್​ಬುಕ್ ಬಳಸುತ್ತಾರೆ, ಮತ್ತು ಸುಮಾರಾಗಿ ಅವರಲ್ಲಿ ಹೆಚ್ಚಿನವರು ಪ್ರತಿದಿನವೂ ಫೇಸ್​ಬುಕ್ ನೋಡುತ್ತಾರೆ. 2012-2017ರ 5 ವರ್ಷಗಳ ಕಾಲಾವಧಿಯಲ್ಲಿ ಫೇಸ್​ಬುಕ್ ಬಳಕೆದಾರರ ಸಂಖ್ಯೆ ದುಪ್ಪಟ್ಟಾಯಿತು.

ಮಾರ್ಕ್ ಎಲ್ಲಿಯೆಟ್ ಜುಕರ್​ಬರ್ಗ್ ತಾನೇ ಅಪೇಕ್ಷೆಪಟ್ಟು 2013ರಿಂದ ತನ್ನ 500,000 ಡಾಲರು ಸಂಬಳದಲ್ಲಿ ಒಂದು ಡಾಲರ್ ಕಡಿತ ಮಾಡಿಕೊಂಡಿದ್ದಾರೆ ಮತ್ತು ತನಗೆ ಯಾವುದೇ ಬೋನಸ್ ಕೊಡಬಾರದು ಎಂದು ಕೂಡ ತಮ್ಮ ಸಂಸ್ಥೆಗೆ ಸೂಚಿಸಿದ್ದಾರೆ. ಪ್ರತಿವರ್ಷ ಫೇಸ್​ಬುಕ್​ನಿಂದ ಮಾರ್ಕ್ ಗಳಿಸುವುದು 9 ಬಿಲಿಯನ್ ಡಾಲರ್
================
ವೈಯಕ್ತಿಕ ವೈಶಿಷ್ಟ್ಯ: 
==========
ಮಾರ್ಕ್ ಅವರಿಗೆ ಕೆಂಪು ಮತ್ತು ಹಸಿರು ಬಣ್ಣಗಳ ವರ್ಣಾಂಧತೆಯಿದೆ. ಹಾಗಾಗಿ ಅವರು ಮುಖ್ಯವಾಗಿ ಕಾಣುವುದು ನೀಲವರ್ಣವಾದ್ದರಿಂದ ಅವರ ಮೆಚ್ಚಿನ ಬಣ್ಣ ನೀಲಿ. ಫೇಸ್​ಬುಕ್ಕಿನ ಮುಖ್ಯ ಬಣ್ಣ ಕೂಡ ನೀಲ. ಇತರ ಬಿಲಿಯಧೀಶರು ಬಳಸುವಂತೆ ದುಬಾರಿ ಬೆಲೆಯ ಕಾರುಗಳನ್ನು ಮಾರ್ಕ್ ಬಳಸುವುದಿಲ್ಲ. ಅವರು ಹೋಂಡಾ, ಅಕುರಾ, ಮತ್ತು ವೋಕ್ಸ್ ವೇಗನ್​ಗಳಂತಹ ಕಾರುಗಳನ್ನು ಬಳಸುತ್ತಾರೆೆ. ಆರೋಗ್ಯ ಮತ್ತು ಅದನ್ನು ಕಾಪಾಡುವ ವ್ಯಾಯಾಮಗಳಿಗೆ ಮಾರ್ಕ್ ಬಹಳ ಮಹತ್ವ ಕೊಡುತ್ತಾರೆ. 2016ರಲ್ಲಿ ಅವರ ಹೊಸ ವರ್ಷದ ಸಂಕಲ್ಪವು 365 ಮೈಲುಗಳನ್ನು ಓಡುವುದಾಗಿತ್ತು. ಅದನ್ನವರು ಏಳೇ ತಿಂಗಳುಗಳಲ್ಲಿ ಸಾಧಿಸಿದರು. ಅವರನ್ನು ಮಿತ್ರರು ಜಾಕ್ ಎಂದೇ ಕರೆಯುತ್ತಾರೆ. ಚಿಕ್ಕಂದಿನಲ್ಲಿ ಅವರನ್ನು ಪ್ರಿನ್ಸ್​ಲೀ ಎಂದು ಮನೆಯಲ್ಲಿ ಕರೆಯುತ್ತಿದ್ದರು. ಕಾಲೇಜಿನಲ್ಲಿ ಅವರನ್ನು ಸ್ಲೇಯರ್ ಎನ್ನುತ್ತಿದ್ದರು.
============
ಗೃಹಸ್ಥ ಜೀವನ: 
==========
ಮಾರ್ಕ್ ಮತ್ತು ಅವರ ಪತ್ನಿ ಪ್ರಿಸಿಲ್ಲಾರ ಪ್ರಥಮ ಭೇಟಿ ರಸಮಯ ಸಮಯದಲ್ಲಿ ನಡೆಯದೆ ಬಾತ್​ರೂಮಿಗಾಗಿ ಕಾಯುತ್ತಿದ್ದಾಗ ನಡೆಯಿತು. ಅವನೊಬ್ಬ ಯಾವುದೇ ಗುರಿಯಿಲ್ಲದ ನೀರಸ ವ್ಯಕ್ತಿ ಎಂಬುದು ಪ್ರಿಸಿಲ್ಲಾಳ ಪ್ರಥಮ ಅನಿಸಿಕೆಯಾಗಿತ್ತು. ಅವರ ಮದುವೆ ಸರಳ ಮತ್ತು ಅನಿರೀಕ್ಷಿತವೋ ಎಂದು ಭಾಸವಾಗುವಂತೆ ನಡೆಯಿತು. ಪ್ರಿಸಿಲ್ಲಾ ವೈದ್ಯಕೀಯದಲ್ಲಿ ಸ್ನಾತಕ ಪದವಿ ಪಡೆದಾಗ 100 ಆಪ್ತರು ಆಹ್ವಾನಿತರಾಗಿದ್ದರು. ಬಂದ ಬಳಿಕವೇ ಅತಿಥಿಗಳಿಗೆ ತಿಳಿದದ್ದು ಅದು ಮದುವೆ ಸಮಾರಂಭ ಎಂಬುದು. 9 ವರ್ಷಗಳ ಡೇಟಿಂಗ್ ಬಳಿಕ ಅವರು ಮದುವೆಯಾದದ್ದು ಮೇ 2012ರಲ್ಲಿ. ಅವರ ಮಗಳು ಮೇಕ್ಷಿಯ ಜನನ 2015ರಲ್ಲಿ ಆಯಿತು. 2011ರಲ್ಲಿ ಕ್ಯಾಲಿಫೋರ್ನಿಯಾದ ಪಾಲ್​ಆಲ್ಟೋದಲ್ಲಿ 7 ಮಿಲಿಯನ್ ಡಾಲರುಗಳ ಒಂದು ಮನೆಯನ್ನು ಕೊಂಡುಕೊಂಡರು. ನಂತರ ತನ್ನ ಮನೆಯ ಸುತ್ತಲಿರುವ ಎಲ್ಲ ಮನೆಗಳನ್ನೂ ಮಾರ್ಕ್ 44 ಮಿಲಿಯನ್ ಡಾಲರುಗಳಿಗೆ ಕೊಂಡು ಕೊಂಡಿದ್ದಾರೆ. ಇದು ಗೌಪ್ಯತೆ, ಭದ್ರತೆ ಮತ್ತು ಮುಂದಿನ ಮಾರಾಟದ ಸಾಧ್ಯತೆಯ ಹೆಚ್ಚಳಕ್ಕೆಂದು ಹೇಳಿಕೊಂಡಿದ್ದಾರೆ. ಅಲ್ಲದೆ ಹವಾಯಿಯಲ್ಲಿ ಅವರಿಗೆ 750 ಎಕರೆ ಜಮೀನಿದೆ
============
ಮಹಾದಾನಿ ದಂಪತಿ: 
============
ಮನುಕುಲದ ಸಾಮರ್ಥ್ಯ ವನ್ನು ಮುನ್ನಡೆಸುವ ಮತ್ತು ಸಮಾನತೆಗೆ ಒತ್ತುಕೊಡುವ ಸಾಮಾಜಿಕ ಕಾರ್ಯಗಳಿಗಾಗಿ ತಮ್ಮ ಐಶ್ವರ್ಯದ ಬಹುಭಾಗವನ್ನು ಮುಂದಿನ ದಿನಗಳಲ್ಲಿ ನೀಡುತ್ತಾ ಬರುವುದಾಗಿ ಮಾರ್ಕ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಡಿಸೆಂಬರ್ 2012ರಲ್ಲಿ ಪ್ರಕಟಿಸಿದರು. ಡಿಸೆಂಬರ್ 2015ರಲ್ಲಿ ಅವರ ಮಗಳು ಮೇಕ್ಸ್ ಹುಟ್ಟಿದಾಗ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಐಶ್ವರ್ಯದ ಶೇ.99 ಭಾಗವನ್ನು (ಆಗಿನ ಲೆಕ್ಕದಲ್ಲಿ 45 ಬಿಲಿಯನ್ ಡಾಲರುಗಳು) ಚಾನ್- ಜುಕೆರ್​ಬರ್ಗ್ ಸೇವಾ ಸಂಸ್ಥೆಗೆ ನೀಡುವುದಾಗಿ ಮುಕ್ತಪತ್ರದ ಮೂಲಕ ಪ್ರಕಟಿಸಿದರು. ಅವರು ಈಗಾಗಲೇ 10 ವರ್ಷಗಳ ಅವಧಿಯಲ್ಲಿ 1.6 ಬಿಲಿಯನ್ ಡಾಲರುಗಳನ್ನು ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ದಾನವಾಗಿ ನೀಡಿದ್ದಾರೆ.
===========
ಜುಕರ್​ಬರ್ಗ್ ಕಿವಿಮಾತು
================
ಸಮಯ: 
********
ನೀವು ಯಾವುದಕ್ಕಾಗಿ ಅಧಿಕ ಸಮಯ ವ್ಯಯ ಮಾಡುತ್ತೀರೋ ಅದೇ ನಿಮಗೆ ದೊರೆಯುತ್ತದೆ. ನೀವು ನಿಮ್ಮ ಸಂಸ್ಥೆಯನ್ನು ಮುಂದೆ ಒಯ್ಯುವ ಕುರಿತು ಸಹೋದ್ಯೋಗಿಗಳ ಜತೆ ವಿಚಾರ ವಿನಿಮಯ ಮಾಡಲು ಸಮಯ ಕೊಡುತ್ತಿದ್ದರೆ ವಿಶೇಷ ಕಾರ್ಯಗಳಿಗೆ ಸೂಕ್ತರಾದವರನ್ನು ಆರಿಸಲು ಮತ್ತು ಸಹೋದ್ಯೋಗಿಗಳ ಕೌಶಲ್ಯವರ್ಧನೆಗೆ ಸಮಯದ ಸದುಪಯೋಗ ಮಾಡುತ್ತಿದ್ದರೆ, ಹಾಗೆ ಬಳಸಿದ ಸಮಯಕ್ಕೆ ಸೂಕ್ತ ಪ್ರತಿಫಲ ದೊರೆಯುತ್ತದೆ
================
ಪ್ರತ್ಯಾದಾನ(ಫೀಡ್​ಬ್ಯಾಕ್): 
===============
ಒಂದು ಸಂಸ್ಥೆಯ ಅತ್ಯಂತ ಕೆಳಮಟ್ಟದ ವ್ಯಕ್ತಿಯೂ ಮುಖ್ಯಸ್ಥನೊಡನೆ ಮುಕ್ತವಾಗಿ ವಿಚಾರ ವಿನಿಮಯ ಮಾಡುವುದು, ಬಳಕೆದಾರರಿಂದ ಸಂಸ್ಥೆಯ ಕುರಿತಾಗಿ ಒಳಿತು-ಕೆಡುಕುಗಳನ್ನು ಪ್ರತ್ಯಾದಾನ ಮಾಡುವುದು- ಇವುಗಳಿಂದ ಸಂಸ್ಥೆಯ ಗುಣಮಟ್ಟವನ್ನು ಉತ್ಥಾನ ಮಾಡುವುದು ಸಾಧ್ಯವಾಗುತ್ತದೆ.
=============
ತಪ್ಪು ಮಾಡಿ ಕಲಿಯಿರಿ:
============
 ಒಂದು ಸಂಸ್ಥೆ ಕಟ್ಟುವಾಗ ಮತ್ತು ನಡೆಸುವಾಗ ತಪ್ಪುಗಳಾಗುವುದು ಸಹಜ. ತಪ್ಪಿಲ್ಲದೆ ಏನನ್ನೂ ಮಾಡಲಾಗದು. ಅತ್ಯಂತ ಮುಖ್ಯವಾದುದೆಂದರೆ, ಮಾಡಿದ ತಪ್ಪುಗಳಿಂದ ಅಮೂಲ್ಯ ಪಾಠಗಳನ್ನು ಕಲಿತು ಅವುಗಳ ಪುನರಾವರ್ತನೆ ಮಾಡದೆ, ಮುಂದಿನ ಕಾರ್ಯಗಳನ್ನು ಕೈಗೊಳ್ಳುತ್ತಾ ಹೋಗುವುದು.
===========
ಸರಿಯಾದವರ ಆಯ್ಕೆ:
=============
 ನೀವು ಯಾರ ಕೈಕೆಳಗೆ ಕೆಲಸ ಮಾಡುವುದು ಅಸಾಧ್ಯವೆಂದು ಭಾವಿಸುವಿರೋ ಅಂಥವರನ್ನು ನಿಮ್ಮ ಸಂಸ್ಥೆಗೆ ಎಂದೂ ಆಯ್ಕೆ ಮಾಡದಿರಿ.
===========
ವಿಶ್ವದಲ್ಲೊಂದು ಬದಲಾವಣೆ:
===============
ಯಾವುದಾದರೊಂದು ಸಂಸ್ಥೆ ಸ್ಥಾಪಿಸುವಾಗ ಹಣ ಮಾಡುವುದು ನಿಮ್ಮ ಪ್ರಮುಖ ಗುರಿಯಾಗದಿರಲಿ. ನೀವು ಸ್ಥಾಪಿಸುವ ಸಂಸ್ಥೆಯ ಸಹಾಯದಿಂದ ವಿಶ್ವದಲ್ಲೊಂದು ಬದಲಾವಣೆ ತರುವ ಉದಾತ್ತ ಉದ್ದೇಶದಿಂದ ಪ್ರೇರಿತರಾಗಿ. ಆಗ ಸಮರ್ಥರಾದ ಜನರು ಮತ್ತು ಸಾಧನಗಳು ತಾವಾಗಿಯೇ ಒದಗಿಬರುತ್ತವೆ.
==============
ಸುತ್ತಲಿಂದ ಕಲಿಯಿರಿ: 
=============
ಯಾವುದೇ ನಿರ್ಧಾರವನ್ನು ಒಬ್ಬನೇ ತೆಗೆದುಕೊಳ್ಳುವ ಬದಲು ಮೇಲ್ಮಟ್ಟದ ಒಂದು ತಂಡದ ಇತರ ಸದಸ್ಯರ ಜತೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ, ಹೊಸತನ್ನು ಕಲಿಯುತ್ತಾ ಮುಂದುವರಿದಾಗ, ಸರಿಯಾದ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತದೆ.
=========
ಉತ್ತಮ ತಂಡವನ್ನು ಕಟ್ಟಿ: 
=============
ನಾನು ದಿನದಲ್ಲಿ ಸುಮಾರು 3 ಗಂಟೆಯ ಸಮಯವನ್ನು ನಮ್ಮ ಸಂಸ್ಥೆಯ ಪ್ರಮುಖ ತಂಡದೊಡನೆ ವಿಚಾರ ವಿನಿಮಯ ಮಾಡಲು ವಿನಿಯೋಗಿಸುತ್ತೇನೆ. ನನ್ನ ಶೇ.25 ಸಮಯವನ್ನು ನಮ್ಮ ಸಂಸ್ಥೆಗೆ ಉತ್ತಮ ತಜ್ಞರು ಮತ್ತು ಕುಶಲಿಗಳನ್ನು ಆಯ್ಕೆ ಮಾಡಲು ಬಳಸುತ್ತೇನೆ.
===========
ಅತ್ಯುತ್ತಮವಾದುದನ್ನೇ ನೀಡಿ:
============
 ಸಾಮಾನ್ಯ ಜನರಿಗೆ ಏನು ಬೇಕೋ ಅದನ್ನು, ವ್ಯಾಪಾರಿಗಳಿಗೆ ಏನು ಬೇಕೋ ಅದನ್ನು- ಹೀಗೆ ಬಳಕೆದಾರರನ್ನು ಗುರಿಯಾಗಿರಿಸಿಕೊಂಡು ಅವರಿಗಾಗಿ ಸಂಸ್ಥೆಯನ್ನು ಕಟ್ಟಿ, ಬೆಳೆಸಬೇಕು.
===========
ಗುರಿಯಿರಲಿ ಹೃದಯದಲಿ: 
============
ನೀವು ಏನು ಮಾಡಬೇಕೆಂದಿರುವಿರೋ ಅದರಲ್ಲಿ ನಿಮಗೆ ಪೂರ್ಣ ನಂಬಿಕೆಯಿರಬೇಕು ಮತ್ತು ನೀವು ಮಾಡುವುದನ್ನು ಅತ್ಯಂತ ಶ್ರದ್ಧೆಯಿಂದ, ಪ್ರೀತಿ ಯಿಂದ ಮತ್ತು ಮನಸ್ಸುಕೊಟ್ಟು ಮಾಡಬೇಕು.
============
ಸಾಮಾಜಿಕ ಸಂಬಂಧಗಳು: ಕಾಲೇಜಿನಲ್ಲಿ, ಸಂಸ್ಥೆಯಲ್ಲಿ ಮತ್ತು ಬಳಕೆದಾರರ ನಡುವೆ ಉತ್ತಮ ಸಾಮಾಜಿಕ ಸಂಬಂಧಗಳನ್ನು ಏರ್ಪಡಿಸಿಕೊಳ್ಳುವುದು ಎಲ್ಲ ರೀತಿಯ ಯೋಜನೆಗಳ ಯಶಸ್ಸಿಗೆ ಅತ್ಯಗತ್ಯ.

================

  ಮಾಹಿತಿ ವೇದಿಕೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ