ಸೇನೆಗೆ ಸೇರಿದ ಹುತಾತ್ಮ ಯೋಧನ ಪತ್ನಿ
============
ನವದೆಹಲಿ: 2015ರ ಸೆಪ್ಟಂಬರ್ 2ರಂದು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ವಿರುದ್ಧ ರಕ್ಷಕ್ ಆಪರೇಶನ್‌ನಲ್ಲಿ ತೊಡಗಿದ್ದ ವೇಳೆ ಹುತಾತ್ಮರಾದ ಯೋಧ ಶಿಶಿರ್ ಮಲ್ ಅವರ ಪತ್ನಿ ಸಂಗೀತ ಇದೀಗ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯನ್ನು ಸೇರಿದ್ದಾರೆ.
===========
ಪತಿಯ ನಿಧನದ ಬಳಿಕ ಖಿನ್ನತೆಗೆ ಒಳಗಾಗಿದ್ದ ಸಂಗೀತ ಅವರಿಗೆ ಅವರ ಕುಟುಂಬಿಕರು ಸಾಕಷ್ಟು ಪ್ರೇರಣೆ ನೀಡಿ ಜೀವನೋತ್ಸಾಹ ತುಂಬಿದ್ದರು. ಬಳಿಕ ಅವರು ಬ್ಯಾಂಕ್ ಎಕ್ಸಾಂ ಕಟ್ಟಿ ಅದರಲ್ಲಿ ಉತ್ತೀರ್ಣರೂ ಆಗಿದ್ದರು.
==========
ಇದೀಗ ಪತಿಯ ಸಹೋದ್ಯೋಗಿಗಳ ಸಲಹೆಯಂತೆ ರಕ್ಷಣಾ ಪಡೆಗೆ ಸೇರುವ ಮನಸ್ಸು ಮಾಡಿದ್ದಾರೆ. ಅದರಂತೆ ಶಾರ್ಟ್ ಸರ್ವಿಸ್ ಕಮಿಷನ್ ಎಕ್ಸಾಂ ಬರೆದು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯನ್ನು ಸೇರಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಮಂಗಳವಾರ, ಫೆಬ್ರವರಿ 13, 2018
ಸೇನೆಗೆ ಸೇರಿದ ಹುತಾತ್ಮ ಯೋಧನ ಪತ್ನಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ