ಮಂಗಳವಾರ, ಫೆಬ್ರವರಿ 13, 2018

ಚುನಾವಣೆಗೂ ಮುನ್ನವೇ ಅವಿರೋಧ ಆಯ್ಕೆಯಾದ ನಾಗಾಲ್ಯಾಂಡ್ ಮಾಜಿ ಸಿಎಂ

ಚುನಾವಣೆಗೂ ಮುನ್ನವೇ ಅವಿರೋಧ ಆಯ್ಕೆಯಾದ ನಾಗಾಲ್ಯಾಂಡ್ ಮಾಜಿ ಸಿಎಂ
====================
ನಾಗಾಲ್ಯಾಂಡ್: ಫೆ.27ರಂದು ನಾಗಾಲ್ಯಾಂಡ್ ಚುನಾವಣೆಯನ್ನು ಎದುರಿಸಲಿದೆ. ಆದರೆ ಅಲ್ಲಿನ ಮಾಜಿ ಸಿಎಂ ನೀಫಿಯು ರಿಯೋ ಅವರು ಈಗಾಗಲೇ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿದ್ದ ನಾಗಾ ಪೀಪಲ್ಸ್ ಫ್ರಂಟ್‌ನ ಅಭ್ಯರ್ಥಿ ನಾಮಪತ್ರ ವಾಪಾಸ್ ಪಡೆದ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
================
ರೊಯೋ ಅವರು ಈ ಹಿಂದೆ ನಾಗಾ ಪೀಪಲ್ಸ್ ಪಾರ್ಟಿಯಲ್ಲಿದ್ದರು. ಆದರೆ ಇತ್ತೀಚಿಗೆ ಬಿಜೆಪಿ ಮೈತ್ರಿ ಪಕ್ಷ ಎನ್‌ಡಿಪಿಪಿಗೆ ಸೇರ್ಪಡೆಯಾಗಿದ್ದರು. ಈಗಾಗಲೇ 3 ಬಾರಿ ಸಿಎಂ ಆಗಿರುವ ಅವರು 4ನೇ ಬಾರಿಗೆ ಸಿಎಂ ಪಟ್ಟ ಏರುವ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
===============
ನಾಗಾ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ನಾಮಪತ್ರ ವಾಪಾಸ್ ಪಡೆದ ಹಿನ್ನಲೆಯಲ್ಲಿ ರಿಯೋ ಅವಿರೋಧವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಮುಖ್ಯಸ್ಥ ಅಭಿಜಿತ್ ಸಿನ್ಹಾ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ