ಭಾನುವಾರ, ಏಪ್ರಿಲ್ 1, 2018

ಕರಾವಳಿ ಕಾವಲು ಪಡೆಗೆ ಸಿ-437 ಇಂಟರ್‍ಸೆಪ್ಟರ್ ದೋಣಿ ಸೇರ್ಪಡೆ 


ಭಾರತದ ಕರಾವಳಿ ಕಾವಲು ಪಡೆ (ಐಸಿಜಿ) ಹೊಸದಾಗಿ ಇಂಟರ್‍ಸೆಪ್ಟರ್ ದೋಣಿ ICGS C-437 ಅನ್ನು ಗುಜರಾತ್‍ನ ಪೋರಬಂದರ್‍ನಲ್ಲಿ ಸೇವೆಗೆ ನಿಯೋಜಿಸಿಕೊಂಡಿದೆ. ಕರಾವಳಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಈ ಅತ್ಯಾಧುನಿಕ ನಾವೆಯನ್ನು ಸೇರಿಸಿಕೊಳ್ಳಲಾಗಿದೆ. ಐಸಿಜಿಎಸ್ ಸಿ-437 ನಾವೆಯನ್ನು ಜಖಾವು ಎಂಬಲ್ಲಿರುವ ಭಾರತೀಯ ಕರಾವಳಿ ಕಾವಲು ಪಡೆಯ ವಾಯವ್ಯ ಪ್ರದೇಶದದ ಆಡಳಿತಾತ್ಮಕ ಮತ್ತು ಕಾರ್ಯಾಚರಣೆ ನಿಯಂತ್ರಣ ವಿಭಾಗದಲ್ಲಿ ನಿಯೋಜಿಸಲಾಗಿದೆ. 

ICGS C-437 ಕುರಿತು 

ಈ ಇಂಟರ್‍ಸೆಪ್ಟರ್ ನಾವೆಯು 27.8 ಮೀಟರ್ ಉದ್ದವಿದ್ದು, 106 ಟನ್ ಭಾರವನ್ನು ಹೊರುವ ಸಾಮಥ್ರ್ಯ ಹೊಂದಿದೆ. ಇದು ಗರಿಷ್ಠ 45 ನಾಟ್ ವೇಗದಲ್ಲಿ ಚಲಿಸಬಲ್ಲದು. ಇದು ಸರ್ವೇಕ್ಷಣೆ, ಶೋಧ ಮತ್ತು ಪರಿಹಾರ, ನಿಷೇಧ ಜಾರಿ ಕಾರ್ಯಾಚರಣೆ ಮತ್ತು ನಾವೆಗಳಿಗೆ ನೆರವು ನೀಡುವ ಕಾರ್ಯಾಚರಣೆ, ಸಮುದ್ರದಲ್ಲಿ ಸಂಕಷ್ಟದಲ್ಲಿರುವ ಹಡಗು ಮತ್ತು ನಾವೆಗಳಿಗೆ ನೆರವು ನೀಡುವ ಕಾರ್ಯಾಚರಣೆಗೆ ಇದು ಸಹಕಾರಿಯಾಗಿದೆ. ಈ ನಾವೆಯು ಅತ್ಯಾಧುನಿಕ ಪಥದರ್ಶಕ ಮತ್ತು ಸಂವಹನ ಸಾಧನವನ್ನು ಒಳಗೊಂಡಿದ್ದು, ಯಾವುದೇ ಸಾಗರ ಪರಿಸ್ಥಿತಿಗೆ ತಕ್ಷಣ ಸ್ಪಂದಿಸುವ ಸಾಮಥ್ರ್ಯ ಹೊಂದಿದೆ. ಇದನ್ನು ಸೇರ್ಪಡೆಗೊಳಿಸಿರುವುದರಿಂದ ಪಶ್ಚಿಮ ಕರಾವಳಿಯ ಭದ್ರತಾ ಛತ್ರಿ ಮತ್ತಷ್ಟು ಭದ್ರವಾದಂತಾಗಿದೆ. ಇದು ಗಸ್ತು ಕಾರ್ಯಾಚರಣೆಯನ್ನು ಸಮನ್ವಯಗೊಳಿಸುವಲ್ಲಿ ಮತ್ತು ಗಡಿ ನುಸುಳುವಿಕೆ, ಕಳ್ಳಸಾಗಾಣಿಕೆ ಮತ್ತು ಅಕ್ರಮ ಮೀನುಗಾರಿಕೆ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ನೆರವಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ