ಭಾರತ- ಇಂಗ್ಲೆಂಡ್ ಜಂಟಿ ತಂಡವು ಗಂಗಾ ನದಿ ಕಣಿವೆ ಪ್ರದೇಶದಲ್ಲಿ ಅಂತರ್ಜಲ ಅರ್ಸೆನಿಕ್ ಸಂಶೋಧನೆಯನ್ನು ಕೈಗೊಳ್ಳಲಿದೆ. ಈ ಯೋಜನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕೈಗೆತ್ತಿಕೊಂಡಿದ್ದು, ಇಂಗ್ಲೆಂಡಿನ ನೈಸರ್ಗಿಕ ಪರಿಸರ ಸಂಶೋಧನಾ ಮಂಡಳಿ (NERC) ಇದಕ್ಕೆ ಸಹಭಾಗಿತ್ವ ನೀಡಿದೆ. ಇದು ವಿಷಕಾರಿ ಅಂಶಗಳಿಂದ ಹಾನಿಗೀಡಾಗಿರುವ ಗಂಗಾನದಿ ಕಣಿವೆ ಪ್ರದೇಶ ಎದುರಿಸುತ್ತಿರುವ ಜಲಸಂಬಂಧಿ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲಿದೆ.
ಪ್ರಮುಖ ಅಂಶಗಳು
===============
> ಆರ್ಸೆನಿಕ್ ಅಂಶ ಕುಡಿಯುವ ನೀರಿನಲ್ಲಿ ಸೇರಿರುವ ಕಾರಣದಿಂದ ಉದ್ಭವಿಸುವ ಆರೋಗ್ಯ ಸಮಸ್ಯೆಗಳು, ಇದರಿಂದ ಮುಂದೆ ಆಗಬಹುದಾದ ಗಂಭೀರ ಪರಿಸ್ಥಿತಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಸೂಕ್ತ ಪರಿಹಾರ ಕ್ರಮಗಳನ್ನು ಸೂಚಿಸುವ ನಿಟ್ಟಿನಲ್ಲೂ ಈ ತಂಡ ಕಾರ್ಯ ನಿರ್ವಹಿಸಲಿದೆ.
> ಆರ್ಸೆನಿಕ್ ಮಾಲಿನ್ಯವು ಗಂಗಾನದಿಯ ಮುಖಜಭೂಮಿ ಮತ್ತು ಜಲಾನಯನ ಪ್ರದೇಶಗಳಲ್ಲಿ ಅತಿದೊಡ್ಡ ಸಮಸ್ಯೆಯಾಗಿದೆ. ತೀರಾ ಆಳವಾದ ಕೊಳವೆಬಾವಿಗಳನ್ನು ಕುಡಿಯುವ ನೀರಿನ ಮತ್ತು ನೀರಾವರಿ ಉದ್ದೇಶಕ್ಕೆ ಬಳಸುವುದು ಇದಕ್ಕೆ ಮುಖ್ಯ ಕಾರಣ. ಈ ಕೊಳವೆಬಾವಿಗಳಲ್ಲಿನ ಅಂತರ್ಜಲ ಅತ್ಯಧಿಕ ಪ್ರಬಲತೆಯ ಆರ್ಸೆನಿಕ್ ಅಂಶವನ್ನು ಹೊಂದಿದ್ದು, ಆಳಕ್ಕೆ ಹೋದಷ್ಟೂ ಈ ವಿಷಕಾರಿ ಆರ್ಸೆನಿಕ್ ಅಂಶದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ.
> ಆರ್ಸೆನಿಕ್ ಎನ್ನುವುದು ಭೂಮಿಯ ಪದರದಲ್ಲಿ ಇರುವ ಸಹಜವಾದ ಅಂಶವಾಗಿದೆ. ಇದು ಇಡೀ ವಾತಾವರಣದಲ್ಲಿ ವಿಸ್ತøತವಾಗಿ ವಿತರಣೆಯಾಗಿರುತ್ತದೆ. ಮುಖ್ಯವಾಗಿ ಗಾಳಿ, ನೀರು ಮತ್ತು ಭೂಮಿಯಲ್ಲಿ ಕೂಡಾ ಆರ್ಸೆನಿಕ್ ಅಂಶ ಕಂಡುಬರುತ್ತದೆ. ಇದರ ಅಜೈವಿಕ ರೂಪದಲ್ಲಿ ಇದು ತೀರಾ ವಿಷಕಾರಿಯಾಗಿದೆ. ಆರ್ಸೆನಿಕ್ ಮಾಲಿನ್ಯಯುಕ್ತ ನೀರನ್ನು ಕುಡಿಯುವ ಉದ್ದೇಶಕ್ಕೆ, ನೀರಾವರಿಗೆ, ಆಹಾರ ಬೆಳೆಗಳಿಗೆ ಮತ್ತು ಆಹಾರ ಸಿದ್ಧಪಡಿಸಲು ಬಳಸುವುದು, ಸಾರ್ವಜನಿಕ ಆರೋಗ್ಯಕ್ಕೆ ಅತಿದೊಡ್ಡ ಅಪಾಯ ಎನಿಸಿದೆ.
> ಧೀರ್ಘಾವಧಿಯಲ್ಲಿ ಆರ್ಸೆನಿಕ್‍ಗೆ ತೆರೆದುಕೊಳ್ಳುವುದು ಅಂದರೆ ಕುಡಿಯುವ ನೀರು ಮತ್ತು ಆಹಾರದ ಮೂಲಕ ಆರ್ಸೆನಿಕ್ ಸೇವನೆಯು ತೀವ್ರ ಪ್ರಮಾಣದ ಆರ್ಸೆನಿಕ್ ವಿಷಪ್ರಾಶನಕ್ಕೆ ಕಾರಣವಾಗುತ್ತದೆ. ಇದು ಕ್ಯಾನ್ಸರ್, ಚರ್ಮದ ತುರಿಕೆ, ಅಭಿವೃದ್ಧಿಯ ಮೇಲೆ ಅಡ್ಡ ಪರಿಣಾಮ, ಹೃದ್ರೋಗ, ನರವಿಷಯುಕ್ತವಾಗುವುದು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು.
========
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ