ಮಂಗಳವಾರ, ಫೆಬ್ರವರಿ 13, 2018

ಕೇಂದ್ರ ಸಾಹಿತ್ಯ ಅಕಾಡೆಮಿ ಆಯ್ಕೆ ಪ್ರಕ್ರಿಯೆ ಹೇಗೆ ?

ಕೇಂದ್ರ ಸಾಹಿತ್ಯ ಅಕಾಡೆಮಿ
=============
ಆಯ್ಕೆ ಪ್ರಕ್ರಿಯೆ ಹೇಗೆ ?

ಅಕಾಡೆಮಿ ಕಾರ್ಯಕಾರಿ ಸಮಿತಿ ತನ್ನ ಅವಧಿ ಮುಗಿಸುವ ಎರಡು ತಿಂಗಳ ಮುನ್ನ ಹೊಸ ಗೌರ್ನಿಂಗ್ ಕೌನ್ಸಿಲ್ ಮತ್ತು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುತ್ತದೆ. ದೇಶದ 20 ವಿಶ್ವವಿದ್ಯಾಲಯಗಳಿಂದ ತಲಾ ಮೂವರ ಹೆಸರನ್ನು ಕಳುಹಿಸಲಾಗುತ್ತದೆ. ಅದೇ ರೀತಿ ರಾಜ್ಯಗಳ ಸಾಹಿತ್ಯ ಪರಿಷತ್, ಅಕಾಡೆಮಿ ಸೇರಿ ಮೂರು ಸಾಹಿತ್ಯಿಕ ಸಂಸ್ಥೆಗಳಿಂದ ತಲಾ ಮೂವರು ಸಾಹಿತಿಗಳ ಹೆಸರನ್ನು ಕಳುಹಿಸಲಾಗುತ್ತದೆ. ವಿಶ್ವವಿದ್ಯಾಲಯ ಹಾಗೂ ಸಾಹಿತ್ಯ ಚಟುವಟಿಕೆ ಕೇಂದ್ರದಿಂದ ಬಂದ ಹೆಸರುಗಳಲ್ಲಿ ತಲಾ ಒಂದು ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಆದವರೇ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿ ಹೊಸ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತಾರೆ. 2018 ರಿಂದ 2023ರ ಅವಧಿಗೆ ಆಯ್ಕೆ ಆಗಿರುವ 95 ಮಂದಿ ಸದಸ್ಯ ಪ್ರತಿನಿಧಿಗಳಲ್ಲಿ 89 ಸದಸ್ಯರು ಮತಚಲಾಯಿಸಿದ್ದಾರೆ
============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ