ಮಂಗಳವಾರ, ಫೆಬ್ರವರಿ 13, 2018

ರೆವಿನ್ಯೂ ಹೈಯರ್ ಪರೀಕ್ಷೆಗೆ ಸಿದ್ಧತೆ ಹೇಗೆ?

ರೆವಿನ್ಯೂ ಹೈಯರ್ ಪರೀಕ್ಷೆಗೆ ಸಿದ್ಧತೆ ಹೇಗೆ?
=================
ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಕಂದಾಯ ಇಲಾಖೆಯ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಗೆ ನಿಗದಿಪಡಿಸಲಾಗಿರುತ್ತದೆ. ಈ ಪರೀಕ್ಷೆಯೂ ವಸ್ತುನಿಷ್ಠ ಮಾದರಿಯಲ್ಲಿದ್ದು ಕೆಳಗೆ ತಿಳಿಸಿದ ರೀತಿಯಲ್ಲಿ ಪುಸ್ತಕಗಳನ್ನು ಅಧ್ಯಯನ ಮಾಡಿ ಸಿದ್ಧತೆಗೊಂಡರೆ ಯಶಸ್ವಿ ಸುಲಭವಾಗುತ್ತದೆ.
===================
ಕರ್ನಾಟಕ ಸರ್ಕಾರಿ ಸೇವಾ(ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗೆ ನಿಯಮಗಳು 1974ರ ಮೇರೆಗೆ ರೆವಿನ್ಯೂ ಹೈಯರ್ ಭಾಗ 1ರ ಪತ್ರಿಕೆ 1ಕ್ಕೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1961, ಕರ್ನಾಟಕ ಭೂಕಂದಾಯ ಅಧಿನಿಯಮಗಳು 1966, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ನ್ನು ನಿಗದಿಪಡಿಸಲಾಗಿದೆ. ಈ ಪತ್ರಿಕೆಗೆ 200 ಅಂಕಗಳಿಗೆ 50 ವಸ್ತುನಿಷ್ಠ ಪ್ರಶ್ನೆಗಳನ್ನು 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗುತ್ತದೆ. ಪತ್ರಿಕೆ 2ರಲ್ಲಿ ಭೂಸ್ವಾದೀನ ಪ್ರಕ್ರಿಯೆಯಲ್ಲಿ, ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರಕ್ಕೆ ಹಕ್ಕು, ಪುನರ್​ವಸತಿ ಮತ್ತು ಪುನರ್ ವ್ಯವಸ್ಥೆ ಅಧಿನಿಯಮ 2013 (2013ರ ಕೇಂದ್ರ ಅಧಿನಿಯಮ 30) ಮತ್ತು (ಕರ್ನಾಟಕ) ನಿಯಮಗಳು 2014, ಕರ್ನಾಟಕ ನೀರಾವರಿ (ಶುಲ್ಕ ಸುಧಾರಣೆ ವಂತಿಕೆ ಮತ್ತು ನೀರು ದರ) ಅಧಿನಿಯಮ 1957, ಕರ್ನಾಟಕ ಭೂಸುಧಾರಣಾ ಅಧಿನಿಯಮ 1961 ಮತ್ತು ನಿಯಮಗಳು 1965, ಭಾರತದ ನೋಂದಣಿ ಅಧಿನಿಯಮ, ಭಾರತದ ಸ್ಟಾಂಪ್ ಅಧಿನಿಯಮ, ಕರ್ನಾಟಕ ಸ್ಟಾಂಪ್ ಅಧಿನಿಯಮ ಹಾಗೂ ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿ ರದ್ಧತಿ ಅಧಿನಿಯಮ, 1965 ನಿಗದಿಪಡಿಸಲಾಗಿದೆ.
====================
ಪತ್ರಿಕೆ 2ರಲ್ಲಿ ಕರ್ನಾಟಕ ಧಾರ್ವಿುಕ ದತ್ತಿ ಮತ್ತು ಧರ್ವದಾಯಗಳ ಅಧಿನಿಯಮ 1969 ಮತ್ತು ನಿಯಮಗಳು 2002 ಹಾಗೂ ವಕ್ಪ ಅಧಿನಿಯಮ 1995 ಮತ್ತು ಕರ್ನಾಟಕ ವಕ್ಪ ನಿಯಮಗಳು 1997 ಎಂದು ನಿಗದಿಪಡಿಸಲಾಗಿದೆ. 100 ಅಂಕಗಳಿಗೆ 50 ಪ್ರಶ್ನೆಗಳನ್ನು 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗುತ್ತದೆ.
====
ರೆವಿನ್ಯೂ ಲೋಯರ್ ಪರೀಕ್ಷೆಗೆ ಸಿದ್ಧತೆ ಹೇಗೆ?: 
========================
ಈ ರೆವಿನ್ಯೂ ಲೋಯರ್ ಪರೀಕ್ಷೆಯನ್ನು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ, ದ್ವಿತೀಯ ದರ್ಜೆ ಸಹಾಯಕರು ಮುಂತಾದ ಹುದ್ದೆಗಳಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಗ್ರಾಪಂ ಕಾರ್ಯದರ್ಶಿ (ಗ್ರೇಡ್ 2) ಹಾಗೂ ಲೆಕ್ಕ ಸಹಾಯಕರು ಮುಂತಾದ ಹುದ್ದೆಗಳಿಗೆ ನಿಗದಿಗೊಳಿಸಲಾಗಿದೆ. ರೆವಿನ್ಯೂ ಹೈಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.
==================
ರೆವಿನ್ಯೂ ಲೋಯರ್ ಪರೀಕ್ಷೆಯಲ್ಲಿ 3 ಪತ್ರಿಕೆಗಳಿದ್ದು ಪತ್ರಿಕೆ 1 ಕರ್ನಾಟಕ ಭೂಕಂದಾಯ ಅಧಿನಿಯಮ 1964 ಮತ್ತು ನಿಯಮಗಳು 1966, ಕರ್ನಾಟಕ ಭೂಮಂಜೂರಾತಿ ನಿಯಮಗಳು 1969 ಪತ್ರಿಕೆ 2ರಲ್ಲಿ ಭಾರತದ ನೋಂದಣಿ ಅಧಿನಿಯಮ, ಕರ್ನಾಟಕ ಸ್ಟಾಂಪ್ ಅಧಿನಿಯಮ 1957, ಭೂಸ್ವಾದೀನ ಪ್ರಕ್ರಿಯೆಯಲ್ಲಿ, ಪಾರದರ್ಶಕತೆ ಮತ್ತು ನ್ಯಾಯೋಚಿತ ಪರಿಹಾರಕ್ಕೆ ಹಕ್ಕು, ಪುನರ್​ವಸತಿ ಮತ್ತು ಪುನರ್ ವ್ಯವಸ್ಥೆ ಅಧಿನಿಯಮ 2013 (2013ರ ಕೇಂದ್ರ ಅಧಿನಿಯಮ 30) ಮತ್ತು (ಕರ್ನಾಟಕ) ನಿಯಮಗಳು 2014, ಭೂಸುಧಾರಣಾ ಅಧಿನಿಯಮ 1961, ಕರ್ನಾಟಕ ನೀರಾವರಿ (ಶುಲ್ಕವಂತಿಕೆ ಮತ್ತು ನೀರು ದರ) ಅಧಿನಿಯಮ 1952, ಗ್ರಾಮಾಧಿಕಾರಿಗಳ ರದ್ಧತಿ ಅಧಿನಿಯಮ ನಿಗದಿಪಡಿಸಲಾಗಿದೆ. ಪತ್ರಿಕೆ 3ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ, 1961 ಮತ್ತು ನಿಯಮಗಳು 1965, ಕರ್ನಾಟಕ ಗಿರವಿದಾರರ ಅಧಿನಿಯಮ 1961, ನಿಯಮಗಳು 1966ನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಯು 50 ಪ್ರಶ್ನೆಗಳಿಗೆ 2 ಗಂಟೆ ಕಾಲಾವಧಿಯಲ್ಲಿ ಉತ್ತರಿಸಬೇಕಾಗುತ್ತದೆ.
====================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ