ಸೋಮವಾರ, ಫೆಬ್ರವರಿ 12, 2018

ಮಾಹಿಳಾ ವಿಶೇಷತೆ

    ಮಾಹಿಳಾ ವಿಶೇಷತೆ
     ===========
ಕೇರಳದ ಮೊಟ್ಟಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 1982ರಲ್ಲಿ ನೇಮಕಗೊಂಡವರು ಆರ್. ಶ್ರೀಲೇಖಾ. 1960ರ ಡಿಸೆಂಬರ್ 25ರಂದು ತಿರುವನಂತಪುರದಲ್ಲಿ ಜನಿಸಿದ ಅವರು; ಅಲ್ಲೇ ವಿದ್ಯಾಭ್ಯಾಸ ಮುಗಿಸಿದರು. ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರತಿಷ್ಠಿತ ಸ್ಕಾಲರ್​ಷಿಪ್ ಪಡೆದಿರುವ ಅವರು; ಕೇರಳ ವಿ.ವಿ.ಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಎಂಬಿಎ ಪದವೀಧರರೂ ಹೌದು. 1982ರಲ್ಲಿ ಪೊಲೀಸ್ ಸೇವೆಗೆ ಸೇರಿದ ಶ್ರೀಲೇಖಾ ಅದಕ್ಕೂ ಮೊದಲು ಉಪನ್ಯಾಸಕಿ, ರಿಸರ್ವ್ ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು. ಎಎಸ್​ಪಿ, ಮೊದಲ ಮಹಿಳಾ ಎಸ್​ಪಿಯಾಗಿ ನೇಮಕಗೊಂಡಿದ್ದ ಅವರು ಆ ರಾಜ್ಯದ ಮೊದಲ ಡಿಜಿಪಿ ಕೂಡ. ಪ್ರಸ್ತುತ ಎಡಿಜಿಪಿಯಾಗಿ (ಬಂದೀಖಾನೆ) ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ವಿಶೇಷ ಸೇವೆಗಾಗಿರುವ ರಾಷ್ಟ್ರಪತಿಯವರ ಪೊಲೀಸ್ ಪದಕ ಲಭಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ