ವ್ಯಾಲೆಂಟೈನ್ಸ್ ಡೇ ಹೇಗೆ ಬಂತು?
==================
ವ್ಯಾಲೆಂಟೈನ್ಸ್ ಡೇ ಬಂತೆಂದರೆ ಪ್ರೇಮಿಗಳಿಗೆ ಹಬ್ಬದಷ್ಟೇ ಸಂಭ್ರಮ. ಪ್ರೀತಿಪಾತ್ರರಿಗೆ ಉಡುಗೊರೆ ನೀಡಿ, ಅವರೊಡನೆ ದಿನ ಕಳೆದರೆ ಹಬ್ಬ ಆಚರಿಸಿದಷ್ಟೇ ತೃಪ್ತಿ. ಇನ್ನು ಅಂದು ತಮ್ಮ ಪ್ರೀತಿಯನ್ನು ಮೊದಲ ಬಾರಿಗೆ ನಿವೇದಿಸಲು ಹೊರಟವರಿಗೆ ಪರೀಕ್ಷೆಗೆ ಹೊರಟಷ್ಟು ಭಯ. ಗ್ರೀಟಿಂಗ್ ಕಾರ್ಡ್ ಮೇಲೆ ಹೆಸರು ಬರೆಯುವುದರವರೆಗೆ ಎಲ್ಲೂ ಏನೂ ಎಡವಟ್ಟಾಗದ ಹಾಗೆ ತಯಾರಿ ಮಾಡಿಕೊಂಡಿರುತ್ತಾರೆ. ಆದರೂ ಫಲಿತಾಂಶದ ಬಗ್ಗೆ ಚಡಪಡಿಕೆ. ಹೀಗೆ ಲೋಕವನ್ನೇ ಪ್ರೇಮಮಯವಾಗಿಸುವ ಈ ವ್ಯಾಲೆಂಟೈನ್ಸ್ ಡೇ ಶುರುವಾಗಿದ್ದು ಹೇಗೆ? ಇದು ಪ್ರೇಮಿಗಳ ದಿನವಾಗಿದ್ದು ಯಾವಾ ಗಿಂದ? ಅದಕ್ಕೆ ಕಾರಣ ರ್ಯಾರು? ಮುಂದೆ ಓದಿ..
=================
ಲವ್ ಬರ್ಡ್್ಸ ಅಲ್ಲ, ಬರ್ಡ್ ಲವರ್ಸ್:ವ್ಯಾಲೆಂಟೈನ್ಸ್ ಡೇನ ಮೂಲ ಹುಡುಕುತ್ತ ಹೋದಾಗ ನಮಗೆ ಸಿಗುವುದು ಪ್ರೇಮಿಗಳಲ್ಲ, ಬದಲಾಗಿ ಪಕ್ಷಿಪ್ರೇಮಿಗಳು. ಮಧ್ಯಪ್ರಾಚೀನ ಕಾಲದಲ್ಲಿ ಇಂಗ್ಲೆಂಡ್ ಅಥವಾ ಫ್ರಾನ್ಸ್ ನಲ್ಲಿದ್ದ ಕೆಲವು ಪಕ್ಷಿವೀಕ್ಷಕರು ಫೆಬ್ರವರಿ ತಿಂಗಳಲ್ಲಿ ಪಕ್ಷಿಗಳು ತಮ್ಮ ಸಂಗಾತಿಗಳನ್ನು ಹುಡುಕಿ ಅವುಗಳೊಡನೆ ಕೂಡುತ್ತವೆ ಎಂಬುದನ್ನು ಗಮನಿಸಿದರು. ಅದಕ್ಕೆ ಒಂದು ನಿರ್ದಿಷ್ಟ ದಿನ ಕೊಡಲು ನಿರ್ಧರಿಸಿದರು. ಅದೇ ಫೆಬ್ರವರಿ 14. ಆ ದಿನವನ್ನು ಅಂದೇ ಹುತಾತ್ಮನಾದ ವ್ಯಾಲೆಂಟೈನ್ಸ್ನ ಹೆಸರಿನಲ್ಲಿ ವ್ಯಾಲೆಂಟೈನ್ಸ್ ಡೇ ಎಂದು ಕರೆಯಲಾಗುತ್ತಿತ್ತು. ಅದಷ್ಟೇ ಅಲ್ಲದೇ ಸೋಜಿಗವೆಂಬಂತೆ ಆ ದಿನ ಇಬ್ಬಿಬ್ಬರು ವ್ಯಾಲಂಟೈನ್ಗಳು ಹುತಾತ್ಮರಾಗಿದ್ದರು. ಒಬ್ಬ ರೋಮನ್ನರನ್ನು ಕ್ರೖೆಸ್ತ ಧರ್ಮಕ್ಕೆ ಮತಾಂತರ ಮಾಡಿಸಿದ್ದಕ್ಕಾಗಿ, ಮತ್ತೊಬ್ಬ ಯುದ್ಧದ ಕಾರಣದಿಂದ ಮದುವೆಗಳು ನಿಷಿದ್ಧವಾಗಿದ್ದಾಗ ಸೈನಿಕರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದುದಕ್ಕಾಗಿ ಅಲ್ಲಿನ ದೊರೆಗಳಿಂದ ಶಿಕ್ಷೆಗೆ ಗುರಿಯಾಗಿ, ಹುತಾತ್ಮರಾಗಿದ್ದರು. (ಪ್ರತೀತಿ ಇದೆ, ಪುರಾವೆಗಳಿಲ್ಲ).
===========÷÷÷
ಆದರೆ ಇವರಿಗೂ ಪಕ್ಷಿವೀಕ್ಷಣೆಗೂ ಪ್ರೇಮಿಗಳಿಗೂ ಯಾವ ಸಂಬಂಧವೂ ಇರಲಿಲ್ಲ. ಫೆಬ್ರವರಿ 14ರಂದು ಇವರಿಬ್ಬರು ಸತ್ತಿದ್ದಕ್ಕೆ ಪಕ್ಷಿಗಳು ಸಂಗಾತಿಗಳನ್ನು ಹುಡುಕುವ ದಿನ ವ್ಯಾಲೆಂಟೈನ್ಸ್ ಡೇ ಆಯಿತು.
=================
ಪ್ರೇಮಿಗಳ ದಿನವಾಗಿ ಬದಲಾದ ಕಥೆ: 14-15ನೇ ಶತಮಾನದಲ್ಲಿದ್ದ ಜೆಫ್ರಿ ಚಾಸರನಿಂದ (ಕ್ಯಾಂಟ್ ಬರಿ ಟೇಲ್ಸ್ ರಚಿಸಿದಾತ) ಇಂಗ್ಲೆಂಡಿನ ರಾಜನ ಆಸ್ಥಾನದಲ್ಲಿದ್ದಾಗ ರಾಜನ ಮದುವೆಯ ವಾರ್ಷಿಕೋತ್ಸವದ ವೇಳೆ ರಚಿಸಿದ ಪಾರ್ಲಿಮೆಂಟ್ ಆಫ್ ಫೌಲ್ಸ್ ಎಂಬ ಕಾವ್ಯದಲ್ಲಿ ವ್ಯಾಲೆಂಟೈನ್ಸ್ ಡೇ ದಿನದಂದು ಪಕ್ಷಿಗಳೆಲ್ಲ ತಮ್ಮ ಪ್ರೇಮಿಗಳನ್ನು ಭೇಟಿ ಮಾಡಲು ಪ್ರಕೃತಿಯಲ್ಲಿ ಸೇರುತ್ತವೆಂದು ಬರೆಯುತ್ತಾನೆ. ಹೇಗಿದ್ದರೂ ಪಕ್ಷಿಗಳು ಫೆಬ್ರವರಿಯಲ್ಲಿ ತಮ್ಮ ಸಂಗಾತಿಗಳನ್ನು ಅರಸುತ್ತ ಬರುವುದು ಆ ವೇಳೆಗೆ ತಿಳಿದ ಸಂಗತಿಯಾಗಿತ್ತು. ಅದಲ್ಲದೇ ಅವುಗಳು ನಿಷ್ಕಲ್ಮಷ ಪ್ರೇಮಕ್ಕೆ ಪ್ರತಿರೂಪವಾಗಿದ್ದವು. ಹೀಗೆ ಪ್ರೇಮಿಗಳನ್ನು ಪಕ್ಷಿಗಳಿಗೆ ಹೋಲಿಸುತ್ತ ವ್ಯಾಲೆಂಟೈನ್ಸ್ ಡೇಯನ್ನು ಅಧಿಕೃತವಾಗಿ ಪ್ರೇಮಿಗಳ ದಿನವಾಗಿಸಿದ. ಸುಮಾರು 18ನೇ ಶತಮಾನದಲ್ಲಿ ಪತ್ರ ಬರವಣಿಗೆ ಹೆಚ್ಚಿತು. ಇದರಿಂದ ಗಾಳಿಸುದ್ದಿಗಳು ಹಬ್ಬಿ ತೊಂದರೆಯೂ ಆಯಿತು. ಬಹುಶಃ ಈ ಕಾರಣಕ್ಕಾಗಿಯೇ 19ನೇ ಶತಮಾನದ ದ್ವಿತೀಯಾರ್ಧದಲ್ಲಿ ವ್ಯಾಲೆಂಟೈನ್ಸ್ ಡೇ ಕುಖ್ಯಾತಿ ಪಡೆದು ಅದರ ಆಚರಣೆ ಕಡಿಮೆಯಾಗಿತ್ತು. ಆದರೆ ಅಮೆರಿಕಾದಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದರಿಂದ 2ನೇ ಮಹಾಯುದ್ಧದ ನಂತರ ಬ್ರಿಟನ್ನಿನಲ್ಲೂ ಮತ್ತೆ ಚಾಲ್ತಿಗೆ ಬಂತು. ಕಾಲ ಕಳೆದಂತೆ ಬಲೂನುಗಳು, ಕ್ಯಾಂಡಲ್ ಲೈಟ್ ಡಿನ್ನರ್ಗಳು ಹೀಗೆ ಏನೇನೋ ಸೇರಿ ರೊಮ್ಯಾಂಟಿಕ್ ಆದ ಪ್ರೇಮಿಗಳ ದಿನ ತನ್ನ ಸ್ವರೂಪವನ್ನೇ ಬದಲಿಸಿತು.
ಮಂಗಳವಾರ, ಫೆಬ್ರವರಿ 13, 2018
ವ್ಯಾಲೆಂಟೈನ್ಸ್ ಡೇ ಹೇಗೆ ಬಂತು?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ