ಗುರುವಾರ, ಮಾರ್ಚ್ 29, 2018

ನಮ್ಮ ದೇಶದ ಭೂಪಟದಲ್ಲಿ 12 ಜ್ಯೋತಿರ್ಲಿಂಗಗಳ ಸ್ಥಾನಗಳನ್ನು ಒಂದುಗೂಡಿಸಿ ನೋಡಿದರೆ ಅಚ್ಚರಿಗೊಳ್ಳುತ್ತೀರ..!

=============
ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳಲ್ಲಿ ವಿಜ್ಞಾನವು ಸಮ್ಮಿಳಿತಗೊಂಡಿದೆ. ಸೂಕ್ಷವಾಗಿ ಪರಿಶೀಲಿಸಿ ನೋಡಿದರೆ… ಕಂಡು ಬರುವ ಅದ್ಭುತಗಳನ್ನು ನೋಡಿಆಶ್ಚರ್ಯಚಕಿತರಾಗುತ್ತೀರಿ. ಅಂತಹ ಅದ್ಭುತಗಳಿಗೆ ಜ್ಯೋತಿರ್ಲಿಂಗಗಳೂ ಹೊರತಾಗಿಲ್ಲ. ಶಿವನ ಪ್ರತಿರೂಪಗಳೆಂದೇ ಹೇಳಲಾಗುವ ಹನ್ನೆರಡುಜ್ಯೋತಿರ್ಲಿಂಗಗಳನ್ನು ದ್ವಾದಶ ಜ್ಯೋತಿರ್ಲಿಂಗಗಳೆಂದು ಕರೆಯುತ್ತಾರೆ. ಇವುಗಳನ್ನು ದರ್ಶಿಸಿದಲ್ಲಿ ಏಳೇಳು ಜನ್ಮಗಳ ಪಾಪಗಳು ಪರಿಹಾ ವಾಗುತ್ತವೆಂದು ಭಕ್ತರ ನಂಬಿಕೆ. ಈ ನಂಬಿಕೆಯನ್ನು ಬದಿಗಿರಿಸಿ… ಜ್ಯೋತಿರ್ಲಿಂಗಗಳ ಸ್ಥಾಪನೆಯಲ್ಲಿ ಅಡಗಿರುವ ವಿಜ್ಞಾನವನ್ನು ಒಮ್ಮೆ ಪರಿಶೀಲಿಸೋಣ.ಗಣಿತವನ್ನು ಕಲಿಯುವ ವಿದ್ಯಾರ್ಥಿಗಳಿಗೆ ‘ಫಿಬೊನಾಚಿ’ ಸರಣಿ ಕುರಿತು ತಿಳಿದೇ ಇರುತ್ತದೆ. 1,1,2,3,5,8,13,21,34,55…….. ಇವುಗಳನ್ನು ಆಧಾರವಾಗಿಸಿಕೊಂಡು ಗ್ರಾಫ್ ಎಳೆಯುತ್ತಾ ಹೋದರೆ… ಫಿಬೊನಾಚಿ ಗ್ರಾಫ್ ಉಂಟಾಗುತ್ತದೆ. ಇದು ಒಂದು ಬಿಂದುವಿನಿಂದ ಪ್ರಾರಂಭವಾಗಿ, ವೃತ್ತಾಕಾರವಾಗಿ ತಿರುಗಿ ಕೇಂದ್ರದಲ್ಲಿ ಕೊನೆಗೊಳ್ಳುತ್ತದೆ ( ಹಳೆಯ ಚಲನ ಚಿತ್ರಗಳಲ್ಲಿ , ಹಿಂದೆ ನಡೆದ ಕತೆಯನ್ನು ಹೇಳುವಾಗ ತಿರುಗುತ್ತಿರುವ ಒಂದು ಚಕ್ರವನ್ನು ತೋರಿಸುವ ರೀತಿಯಲ್ಲಿ)ಈಗ ನಾವು ಭಾರತದ ಭೂಪಟವನ್ನು ತೆಗೆದುಕೊಂಡು,ಅದರಲ್ಲಿ ನಮ್ಮ ದೇಶದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಿರುವ ಸ್ಥಾನಗಳನ್ನು ಗುರುತು ಮಾಡಿಕೊಂಡು ಒಂದೊಂದಾಗಿ ಸೇರಿಸುತ್ತಾ ಬಂದರೆ… ಉತ್ತರಾಖಂಡ್ ನಲ್ಲಿರುವ ಕೇದಾರನಾಥ ದಿಂದ ಪ್ರಾರಂಭಿಸಿ, ಪ್ರತಿಯೊಂದು ಜ್ಯೋತಿರ್ಲಿಂಗವಿರುವ ಸ್ಥಾನದ ಮೇಲೆ ವೃತ್ತಾಕಾರವಾಗಿ ಗೆರೆ ಎಳೆಯುತ್ತಾ…ಹಾಗೇ ವೈದ್ಯನಾಥ್,ರಾಮೇಶ್ವರ, ಸೋಮನಾಥ್…ಶ್ರೀಶೈಲ ಹೀಗೆ ಮಹಾರಾಷ್ಟ್ರದ ಘೃಷ್ಣೇಶ್ವರ ಜ್ಯೋತಿರ್ಲಿಂಗದಲ್ಲಿ ಕೊನೆಗೊಳ್ಳುತ್ತದೆ. ಈಗ ನಾವು ಎಳೆದ ವೃತ್ತಗಳನ್ನು ನೋಡಿದರೆ… ಕಾಣುವುದೇ ಫಿಬೊನಾಚಿ ಗ್ರಾಫ್. ಈ ಕೆಳಗೆ ತೋರಿಸಿದ ಹಾಗಿರುತ್ತದೆ.ನಮ್ಮ ಪೂರ್ವಜರು ಇದನ್ನು ತಿಳಿದು ಮಾಡಿದರೋ ಅಥವಾ ತಿಳಿಯದೇ ಮಾಡಿದರೋ ಗೊತ್ತಿಲ್ಲವಾದರೂ… ಈ ಪರಿಕಲ್ಪನೆ ಮಾತ್ರ ಗಣಿತ ವಿದ್ಯಾರ್ಥಿಯಲ್ಲಿಅಚ್ಚರಿಮೂಡಿಸುತ್ತದೆ.( Hari oAm).
================
ನಮ್ಮ ದೇಶದಲ್ಲಿರುವ ದ್ವಾದಶ ಜ್ಯೋತಿರ್ಲಿಂಗಗಳು :
=============
> ರಾಮನಾಥಸ್ವಾಮಿ ಲಿಂಗ – ರಾಮೇಶ್ವರ.
> ಶ್ರೀಶೈಲ ಮಲ್ಲಿಕಾರ್ಜುನ ಲಿಂಗ- ಶ್ರೀಶೈಲ. ಆಂಧ್ರಪ್ರದೇಶ.
> ಭೀಮಾ ಶಂಕರ ಲಿಂಗ-ಭೀಮಾ ಶಂಕರ. ಮಹಾರಾಷ್ಟ್ರ.
> ಘೃಷ್ಣೇಶ್ವರ ಲಿಂಗ- ಘುಶ್ಮೇಶ, ಮಹಾರಾಷ್ಟ್ರ.
> ತ್ರಯಂಬಕೇಶ್ವರ ಲಿಂಗ- ತ್ರಯಂಬಕೇಶ್ವರ, ಮಹಾರಾಷ್ಟ್ರ.
> ಸೋಮನಾಥ ಲಿಂಗ-ಸೋಮನಾಥ, ಗುಜರಾತ್.
> ನಾಗೇಶ್ವರ ಲಿಂಗ – ದ್ವಾರಕಾವನ, ಗುಜರಾತ್.
> ಓಂಕಾರೇಶ್ವರ ಲಿಂಗ- ಓಂಕಾರ ಕೇತ್ರ, ಮಧ್ಯ ಪ್ರದೇಶ.
> ಮಹಾಕಾಳ ಲಿಂಗ- ಉಜ್ಜಯನಿ, ಮಧ್ಯಪ್ರದೇಶ.
> ವೈದ್ಯನಾಥ ಲಿಂಗ- ಚಿತಾಭೂಮಿ, ಬಿಹಾರ.
> ವಿಶ್ವೇಶ್ವರ ಲಿಂಗ- ವಾರಣಾಸಿ, ಉತ್ತರ ಪ್ರದೇಶ.
> ಕೇದಾರೆಶ್ವರ ಲಿಂಗ-ಕೇದಾರನಾಥ್,ಉತ್ತರಾಂಚಲ.
===============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ