ಗುರುವಾರ, ಮಾರ್ಚ್ 29, 2018

ಅಂಬೇಡ್ಕರ್ ಹೆಸರಿಗೆ 'ರಾಮ್ ಜೀ' ಸೇರ್ಪಡೆ ಕಡ್ಡಾಯಗೊಳಿಸಿದ ಉತ್ತರ ಪ್ರದೇಶ ಸರಕಾರ

==============
ಲಕ್ನೋ, ಮಾ.29: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಸರಕಾರಿ ದಾಖಲೆ ಮತ್ತು ಕಡತಗಳಲ್ಲಿ ಉಲ್ಲೇಖಿಸುವಾಗ ಅವರ ಮಧ್ಯದ ಹೆಸರು 'ರಾಮ್ ಜೀ'ಯನ್ನೂ ನಮೂದಿಸಬೇಕೆಂದು ಉತ್ತರ ಪ್ರದೇಶ ಸರಕಾರ ತನ್ನ ಎಲ್ಲಾ ಇಲಾಖೆಗಳಿಗೆ ಹಾಗೂ ಅಲಹಾಬಾದ್ ಮತ್ತು ಲಕ್ನೋದಲ್ಲಿನ ಹೈಕೋರ್ಟ್ ಪೀಠಗಳಿಗೆ ತಿಳಿಸಿದೆ. ಸಂವಿಧಾನಕ್ಕೆ ತಮ್ಮ ಸಹಿ ಹಾಕುವಾಗ ಅಂಬೇಡ್ಕರ್ ತಮ್ಮ ಪೂರ್ಣ ಹೆಸರನ್ನು ಉಪಯೋಗಿಸಿದ್ದರು.
=======
ಅಂಬೇಡ್ಕರ್ ಅವರ ಹೆಸರಿನ ಸ್ಪೆಲ್ಲಿಂಗ್ ಅನ್ನೂ ಹಿಂದಿಯಲ್ಲಿ ಅಲ್ಪ ಮಾರ್ಪಾಟು ಮಾಡಿ `ಆಂಬೇಡ್ಕರ್' ಎಂದು ಉಚ್ಚರಿಸುವಂತೆ ಮಾಡಲಾಗುವುದು ಎಂದು ಸರಕಾರದ ಸಾಮಾನ್ಯ ಆಡಳಿತ ವಿಭಾಗದ ಮುಖ್ಯ ಕಾರ್ಯದರ್ಶಿಯ ಆದೇಶ ತಿಳಿಸಿದೆ.
========
ಈ ಬದಲಾವಣೆಗಳನ್ನು ಉತ್ತರ ಪ್ರದೇಶ ರಾಜ್ಯಪಾಲ ರಾಮ ನಾಯ್ಕ್ ಅವರು ಡಿಸೆಂಬರ್ 2017ರಲ್ಲಿಯೇ ಸೂಚಿಸಿದ್ದರೆಂದು ಬಾಬಾಸಾಹೇಬ್ ಡಾ.
=======
ಭೀಮರಾವ್ ಅಂಬೇಡ್ಕರ್ ಮಹಾಸಭಾ ಇದರ ನಿರ್ದೇಶಕ ಡಾ ಲಾಲಜಿ ಪ್ರಸಾದ್ ನಿರ್ಮಲ್ ಹೇಳಿದ್ದಾರೆ.
==========
"ಇಲ್ಲಿ ಅವರ ಹೆಸರನ್ನು ಹೇಗೆ ಉಚ್ಛರಿಸಬೇಕೆಂಬುದು ಪ್ರಮುಖವಾಗಿದೆ. ಆಂಗ್ಲ ಭಾಷೆಯಲ್ಲಿ ಸ್ಪೆಲ್ಲಿಂಗ್ ಸರಿಯಾಗಿಯೇ ಇದ್ದರೂ ಹಿಂದಿಯಲ್ಲಿ ಅದರ ಉಚ್ಛಾರಣೆ ಬದಲಾಗಬೇಕಿದೆ. ರಾಮ್ ಜಿ ಅವರ ತಂದೆಯ ಹೆಸರು. ಮಹಾರಾಷ್ಟ್ರದ ಪದ್ಧತಿಯಂತೆ ತಂದೆಯ ಹೆಸರು ಮಕ್ಕಳ ಮಧ್ಯದ ಹೆಸರಾಗುತ್ತದೆ'' ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ