ಬುಧವಾರ, ಮಾರ್ಚ್ 28, 2018

ಭೂಮಿಯ ಗಾತ್ರದ ಕೆಂಡದಂತಹ ಹೊಸ ಗ್ರಹ ಪತ್ತೆ

=============
ಲಂಡನ್‌: ಭೂಮಿಯಿಂದ 26 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿ ಕುಬ್ಜ ನಕ್ಷತ್ರವೊಂದನ್ನು ಸುತ್ತುತ್ತಿರುವ ಭೂಮಿಯ ಗಾತ್ರದ ಸುಡುವ ಲೋಹದಂತಹ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 
===========
ಇದಕ್ಕೆ ಕೆ2-229ಬಿ ಎಂದು ಹೆಸರಿಡಲಾಗಿದೆ. ಇದು ನಮ್ಮ ಪೃಥ್ವಿಗಿಂತ ಗಾತ್ರದಲ್ಲಿ ಶೇ 20ರಷ್ಟು ದೊಡ್ಡದಾಗಿದೆ. ಈ ಗ್ರಹದ ದ್ರವ್ಯರಾಶಿ ಭೂಮಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಅಲ್ಲದೆ ಹಗಲಿನಲ್ಲಿ ಈ ಗ್ರಹದ ತಾಪಮಾನ 2000 ಡಿಗ್ರಿ ಸೆಲ್ಶಿಯಸ್‌ ದಾಟುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
==========°
ನಮ್ಮ ಭೂಮಿ ಮತ್ತು ಸೂರ್ಯನ ನಡುವಣ ದೂರಕ್ಕಿಂತ ನೂತನ ಗ್ರಹ ಮತ್ತು ಅದರ ಸೂರ್ಯನ ನಡುವಣ ಅಂತರ ನೂರನೇ ಒಂದು ಪಾಲಿನಷ್ಟಿದೆ. ಕನ್ಯಾ ರಾಶಿಯಲ್ಲಿರುವ ಈ ಕುಬ್ಜ ನಕ್ಷತ್ರ ಮಧ್ಯಮಗಾತ್ರದ್ದಾಗಿದೆ. ಕೆ2-229ಬಿ ಗ್ರಹವು ಪ್ರತಿ 14 ಗಂಟೆಗಳಿಗೊಮ್ಮೆ ಈ ನಕ್ಷತ್ರದ ಸುತ್ತ ಪರಿಭ್ರಮಣ ನಡೆಸುತ್ತದೆ. 
==========
ಫ್ರಾನ್ಸ್‌ನ ಎಐಎಕ್ಸ್‌ ಮರ್ಸಿಲ್‌ ಯುನಿವರ್ಸಿಟಿ ಹಾಗೂ ಯುಕೆಯ ಯುನಿವರ್ಸಿಟಿ ಆಫ್‌ ವಾವ್ರಿಕ್‌ನ ಸಂಶೋಧಕರ ತಂಡ ಕೆ2 ದೂರದರ್ಶಕ ಮತ್ತು ಡೋಪ್ಲರ್ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನ ಬಳಸಿ ಈ ಗ್ರಹವನ್ನು ಪತ್ತೆ ಮಾಡಿದ್ದಾರೆ. 
==========

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ