ಶುಕ್ರವಾರ, ಮಾರ್ಚ್ 30, 2018

ಚೀನಾದಲ್ಲಿರೋ ಜಗತ್ತಿನ ಅತಿ ದೊಡ್ಡ ಸೇತುವೆಯ ವಿಶೇಷತೆ ಗೊತ್ತಾ?

===========
ಚೀನಾದಲ್ಲಿ ಒಂದಿಲ್ಲೊಂದು ಅದ್ಭುತಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಇದೀಗ ಜಗತ್ತಿನ ಅತಿ ದೊಡ್ಡ ಸೇತುವೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಒಂಭತ್ತು ವರ್ಷಗಳ ಹಿಂದೆಯೇ ಈ ಬ್ರಿಡ್ಜ್ ನಿರ್ಮಾಣ ಕಾರ್ಯ ಆರಂಭವಾಗಿತ್ತು.
========
ಈ ಸೇತುವೆಯ ಉದ್ದ ಬರೋಬ್ಬರಿ 55 ಕಿಮೀ. ಪರ್ಲ್ ರಿವರ್ ಈಸ್ಟರಿಗೆ ಅಡ್ಡಲಾಗಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕೆ ಬಳಸಿರೋ ಸ್ಟೀಲ್ ಪ್ರಮಾಣ 60 ಐಫೆಲ್ ಟವರ್ ಗಳಿಗೆ ಸರಿಸಮನಾಗಿದೆಯಂತೆ.
===========
ಇನ್ನು 120 ವರ್ಷಗಳ ಕಾಲ ಈ ಸೇತುವೆ ಗಟ್ಟಿಮುಟ್ಟಾಗಿರಲಿದೆ ಅಂತಾ ಚೀನಾ ಭರವಸೆ ನೀಡಿದೆ. ಸೇತುವೆ ಮೂಲಕ ಸಾಗಿದರೆ ಶೇ.60ರಷ್ಟು ಪ್ರಯಾಣದ ಸಮಯ ಸಹ ಉಳಿತಾಯವಾಗಲಿದೆ. ಈ ಮೆಗಾ ಪ್ರಾಜೆಕ್ಟ್ ಗೆ 420,000 ಟನ್ ಸ್ಟೀಲ್ ಬಳಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ