ಶುಕ್ರವಾರ, ಮಾರ್ಚ್ 30, 2018

ಪ.ಪೂರ್ವ ಕಾಲೇಜುಗಳ ಪರಿಷ್ಕೃತ ದರಪಟ್ಟಿ ಪ್ರಕಟ


ಬೆಂಗಳೂರು : ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಶುಲ್ಕಗಳಿಗೆ ಸಂಬಂಧಿಸಿದಂತೆ 2018-19ನೇ ಸಾಲಿನಿಂದ ಜಾರಿಗೆ ಬರುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ತೆರಿಗೆಯೇತರ ಆದಾಯದ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.
========
ಪರೀಕ್ಷಾ ಶುಲ್ಕ, ಮರು ಮೌಲ್ಯಮಾಪನ, ಅಂಕಪಟ್ಟಿ, ಅನುತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ, ಹೊಸ ಕಾಲೇಜು ತೆರೆಯಲು, ಹೊಸ ಕಾಂಬಿನೇಷನ್‌ ತೆರೆಯಲು, ವರ್ಗಾವಣೆ ಪತ್ರ, ನೋಂದಣಿ ಶುಲ್ಕ, ಪರೀಕ್ಷಾ ಕೇಂದ್ರದ ಬದಲಾವಣೆ ಸೇರಿದಂತೆ ಸುಮಾರು 46 ವಿವಿಧ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. 2013-14ರಿಂದ ಇಲ್ಲಿಯವರೆಗೆ ಇದ್ದ ಶುಲ್ಕದಲ್ಲಿ ಶೇ.30ರಿಂದ ಶೇ.60ರ ವರೆಗೆ ಹೆಚ್ಚಿಸಲಾಗಿದೆ.
========
ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳು ಪಿಯು ಇಲಾಖೆಗೆ ಪಾವತಿಸಬೇಕಾದ ವಿವಿಧ ಶುಲ್ಕ ಮತ್ತು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜಿಗೆ ವಿದ್ಯಾರ್ಥಿಗಳು ಸಲ್ಲಿಸಬೇಕಾದ ವಿವಿಧ ಶುಲ್ಕದ ದರವನ್ನು 2013-14ನೇ ಸಾಲಿನಲ್ಲಿ ಪರಿಷ್ಕರಿಸಲಾಗಿತ್ತು.
========
ಅದರ ನಂತರ ದರ ಪರಿಷ್ಕರಣೆಯಾಗಲಿರಲ್ಲ. ವಿವಿಧ ಶಿಕ್ಷಣ ಸಂಸ್ಥೆಗಳ ಒತ್ತಾಯದಂತೆ ದರ ಪರಿಷ್ಕರಣೆಗೆ ಸಮಿತಿಯನ್ನು ರಚಿಸಲಾಗಿತ್ತು.
=====
ವಿವಿಧ ಇಲಾಖೆಯ ತೆರಿಗೆಯೇತರ ಆದಾಯ ದರಗಳನ್ನು ಪರಿಷ್ಕರಣೆ ಕುರಿತು ರಚಿಸಲಾದ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಸಮಿತಿಯು ನೀಡಿರುವ ಶಿಫಾರಸಿನಂತೆ 2018-19ನೇ ಸಾಲಿನಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದಾರೆ.
====

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ