ಗುರುವಾರ, ಮಾರ್ಚ್ 29, 2018

ಟಾಪ್ 5 ನೌಕಾಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆ ಖಾಲಿ-ಸುಭಾಶ್ ಭಾಮ್ರೆ

==========
ನವದೆಹಲಿ: ನೌಕಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರಸರ್ಕಾರ ಲೋಕಸಭೆಗೆ ಇಂದು ತಿಳಿಸಿದೆ.
==========
ಸೇನೆಯಲ್ಲಿ 794 ಪೈಲಟ್ ಹುದ್ದೆಗಳಿಗಾಗಿ ಮಂಜೂರು ಮಾಡಲಾಗಿದ್ದು, 192 ಹುದ್ದೆಗಳು ಖಾಲಿ ಇವೆ. ನೌಕಪಡೆಯಲ್ಲಿ 735 ಪೈಲಟ್ ಹುದ್ದೆಗಳು ಮಂಜೂರಾಗಿದ್ದು, 82 ಹುದ್ದೆಗಳಿಗೆ ಖಾಲಿ ಇವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಶ್ ಭಾಮ್ರೆ ಲಿಖಿತ ಉತ್ತರದಲ್ಲಿ ಪ್ರತಿಕ್ರಿಯಿಸಿದ್ದಾರೆ.
=========
ಭಾರತೀಯ ವಾಯುಪಡೆಯಲ್ಲಿ ಪೈಲಟ್ ಗಳ ಕನಿಷ್ಠ ಕೊರತೆ ಎದುರಾಗಿದೆ. ಆದಾಗ್ಯೂ, ಪ್ರಸ್ತುತದಲ್ಲಿನ ಕಾರ್ಯಾಚರಣೆಗೆ ಅಗತ್ಯಕ್ಕನುಗುಣವಾಗಿ ವಾಯುಪಡೆ ಪೈಲಟ್ ಲಭ್ಯವಿರುವುದಾಗಿ ಅವರು ತಿಳಿಸಿದ್ದಾರೆ.
=========
ಇತ್ತೀಚಿನ ದಿನಗಳಲ್ಲಿ ಭಾರತೀಯ ಸಾಗರೋತ್ತರ ವಲಯದ ವ್ಯಾಪ್ತಿ ವಿಸ್ತಾರಗೊಂಡಿದ್ದು, ಭೌಗೋಳಿಕ ಕಾರ್ಯತಂತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
=======
ಕಡಲ ತೀರ ಪ್ರದೇಶದಲ್ಲಿ ನೌಕಾ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಸಾಗರೋತ್ತರ ಪ್ರದೇಶಗಳಲ್ಲಿ ಭಾರತ ನೌಕಪಡೆ ಇನ್ನಿತರ ವಿದೇಶಗಳ ಸಹಕಾರದೊಂದಿಗೆ ಜಂಟಿಯಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ ಎಂದು ಸುಭಾಶ್ ಭಾಮ್ರೆ ಸ್ಪಷ್ಪಪಡಿಸಿದ್ದಾರೆ.
========
ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಸಚಿವರು. 73 ರಸ್ತೆಗಳನ್ನು ಇಂಡೋ ಚೀನಾ ಬಾರ್ಡರ್ ರಸ್ತೆಗಳೆಂದು ಸರ್ಕಾರ ಗುರುತಿಸಿದೆ. ಈ ಪೈಕಿ 34 ರಸ್ತೆಗಳು ಪೂರ್ಣಗೊಂಡಿವೆ. ಇನ್ನುಳಿದ 39 ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
=========
ಸಿಕ್ಕಿಂ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ , ಉತ್ತರ ಪ್ರದೇಶಗಳಲ್ಲಿನ ಗಡಿ ರಸ್ತೆಗಳ ಕಾಮಗಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ.
==========
22,225,17 ಕಿಲೋ ಮೀಟರ್ ದೂರದ ರಸ್ತೆಗಳನ್ನು ಗಡಿ ರಸ್ತೆಯ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 7.122 ಕಿಲೋ ಮೀಟರ್ , ಅರುಣಾಚಲ ಪ್ರದೇಶದಲ್ಲಿ 5, 267 ಕಿಲೋ ಮೀಟರ್ ರಸ್ತೆ ಸೇರಿವೆ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ