ಗುರುವಾರ, ಮಾರ್ಚ್ 29, 2018

ಹರ್ಯಾಣದ ಈ ಜಿಲ್ಲೆ ದೇಶದಲ್ಲೇ ಅತಿ ಹಿಂದುಳಿದ ಪ್ರದೇಶ

===========
ಹೊಸದಿಲ್ಲಿ, ಮಾ. 29: ಹರ್ಯಾಣದ ಮೇವಾಟ್, ದೇಶದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ತೆಲಂಗಾಣದ ಆಸಿಫಾಬಾದ್,  ಸಿಂಗ್ರೌಲಿ, ನಾಗಾಲ್ಯಾಂಡ್‌ನ ಕಿಪೈರ್ ಮತ್ತು ಉತ್ತರ  ಶ್ರವಸ್ತಿ ನಂತರದ ಸ್ಥಾನಗಳಲ್ಲಿವೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿದ 101 ಮಹತ್ವಾಕಾಂಕ್ಷಿ (ಹಿಂದುಳಿದ) ಜಿಲ್ಲೆಗಳ ರ‍್ಯಾಂಕಿಂಗ್‌ನಲ್ಲಿ ಹೇಳಲಾಗಿದೆ.
=========
ಆರೋಗ್ಯ ಮತ್ತು ಪೌಷ್ಟಿಕತೆ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲ, ವಿತ್ತೀಯ ಸೇರ್ಪಡೆ ಮತ್ತು ಕೌಶಲ ಅಭಿವೃದ್ಧಿ, ಮೂಲ ಸೌಕರ್ಯ ಹೀಗೆ ಐದು ಪ್ರಮುಖ ವಲಯಗಳ 49 ಮಾನದಂಡಗಳ ಆಧಾರದಲ್ಲಿ ನೀತಿ ಆಯೋಗ, ಬೇಸ್‌ಲೈನ್ ರ‍್ಯಾಂಕಿಂಗ್‌ ಬಿಡುಗಡೆ ಮಾಡಿದೆ.
=========
ಒಡಿಶಾದ 10, ಪಶ್ಚಿಮ ಬಂಗಾಳದ ನಾಲ್ಕು ಹಾಗೂ ಕೇರಳದ ಒಂದು ಜಿಲ್ಲೆಯನ್ನು ಪಟ್ಟಿಗೆ ಸೇರಿಸಲು ಉದ್ದೇಶಿಸಿದ್ದು, ಒಟ್ಟು 116 ಜಿಲ್ಲೆಗಳ ಪಟ್ಟಿ ಸಿದ್ಧವಾಗಲಿದೆ.
========
ಅತ್ಯಧಿಕ ನಕ್ಸಲ್‌ ಪೀಡಿತ 35 ಜಿಲ್ಲೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. "ನೇಮಿಂಗ್ ಆಯಂಡ್ ಶೇಮಿಂಗ್" ಕಾರ್ಯತಂತ್ರದಲ್ಲಿ ಈ ಜಿಲ್ಲೆಗಳ ಪ್ರಗತಿಯ ಮೇಲೆ 2018ರ ಮೇ ತಿಂಗಳಿನಿಂದ ತೀವ್ರ ನಿಗಾ ವಹಿಸಲಿದೆ. ಉತ್ತರ ಪ್ರದೇಶದ  ಜಿಲ್ಲೆಗಳು, ಕನಿಷ್ಠ ಅಭಿವೃದ್ಧಿ ಹೊಂದಿದ ಹತ್ತು ಜಿಲ್ಲೆಗಳ ಪಟ್ಟಿಯಲ್ಲಿ ಸೇರಿದೆ.
======
ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿರುವ ಆಂಧ್ರಪ್ರದೇಶದ ವಿಳಿಯನಗರಂ, ಛತ್ತೀಸ್‌ಗಢದ ರಾಜನಂದಗಾಂವ್, ಮಹಾರಾಷ್ಟ್ರದ ಒಸ್ಮನಾಬಾದ್, ಆಂಧ್ರಪ್ರದೇಶದ ಕಡಪ ಮತ್ತು ತಮಿಳುನಾಡಿನ ರಾಮನಾಥಪುರಂ ಅಗ್ರ ಐದು ಜಿಲ್ಲೆಗಳಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ