ಶುಕ್ರವಾರ, ಮಾರ್ಚ್ 30, 2018

ರಸ ಪ್ರಶ್ನೆಗಳು


=============
ಬೇಲೂರು ಚೆನ್ನಕೇಶವ ದೇವಾಲಯದ ಮದನಿಕೆ ಮೂರ್ತಿಗಳ ಕೆತ್ತನೆಗೆ ಯಾವ ರಾಣಿ ಪ್ರೇರಕಳಾದಳೆಂದು ಪ್ರತೀತಿ  ಇದೆ?

೨  ಜಗತ್ತಿನ ಅತಿದೊಡ್ಡ ದ್ವೀಪ ಯಾವುದು?

೩  ಶಂಕರರ ಶಿಷ್ಯ ಸುರೇಶ್ವರಾಚಾರ್ಯರ ಸಮಾಧಿ ಎಲ್ಲಿದೆ?

೪     ಕನ್ಯಾಕುಮಾರಿಯ ತಿರುವಳ್ಳುವರ್ ಪ್ರತಿಮೆಯ ಎತ್ತರ ೧೩೩ ಅಡಿ ಇರುವುದರ ವಿಶೇಷತೆ ಏನು?

೫    ಕಮಾಂಡರ್ ಅಭಿಲಾಷ್ ಟಾಮಿ ಅವರ ಅನನ್ಯ ಸಾಧನೆ ಏನು?

೬    ಜಗತ್ತಿನ ಅತಿ ಪ್ರಾಚೀನ (ಈಗಿನ ನಮೂನೆಯ) ಸಂಸತ್ತು ಯಾವುದು?

೭  ಒಲಿಂಪಿಕ್ ಧ್ವಜದಲ್ಲಿರುವ ಐದು ವೃತ್ತಗಳು ಯಾವುದರ ಸೂಚಕ?

೮  ಚರ್ಮದ ಮೂಲಕ ಉಸಿರಾಡುವ ಪ್ರಾಣಿ ಯಾವುದು?

೯  ಅಮೆರಿಕನರ ಭಾಷೆಯಲ್ಲಿ ‘ಸ್ಕೋನ್ ಎಂದರೆ ಏನು?

೧೦  ಹರ್ ಗೋಬಿಂದ್ ಖೊರಾನಾ ಸಂಶೋಧನೆ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು?
===========

ಉತ್ತರಗಳು

೧. ವಿಷ್ಟುವರ್ಧನನ ರಾಣಿ ಶಾಂತಲಾದೇವಿ.
೨. ಆಸ್ಟ್ರೇಲಿಯ ಖಂಡ!
೩. ಶೃಂಗೇರಿಯ ನೃಸಿಂಹವನ.
೪. ತಿರುವಳ್ಳುವರ್ ರಚಿಸಿರುವ ‘ಕುರಲ್’ನಲ್ಲಿ ೧೩೩ ಅಧ್ಯಾಯಗಳಿವೆ.
೫. ಏಕಾಕಿಯಾಗಿ ಮತ್ತು ಎಲ್ಲಿಯೂ ವಿಶ್ರಮಿಸದೆ ಭೂಪ್ರದಕ್ಷಿಣೆ ಮಾಡಿದುದು (೨೦೧೩).
೬. ಐಸ್ಲೆಂಡಿನದು (ಕ್ರಿ.ಶ. ೧೦ನೇ ಶತಮಾನ).
೭. ಐದು ಭೂಖಂಡಗಳು.
೮. ಕಪ್ಪೆ.
೯. ಬಿಸ್ಕತ್ತು.
೧೦. ಪ್ರಯೋಗಾಲಯದಲ್ಲಿ ಕೃತಕ ‘ಜೀನ್’ ನಿರ್ಮಾಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ