ಶುಕ್ರವಾರ, ಮಾರ್ಚ್ 30, 2018

350 ರೂ. ನಾಣ್ಯದ ವಿಶೇಷತೆ ಏನು ಗೊತ್ತಾ.?

=============
10ನೆಯ ಹಾಗೂ ಸಿಖ್ಖರ ಕೊನೆಯ ಧರ್ಮಗುರು, ಗುರು ಗೋಬಿಂದ್ ಸಿಂಗ್ ಅವರ ಸ್ಮರಣಾರ್ಥ ಕೇಂದ್ರ ಸರ್ಕಾರ 350 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಗುರು ಗೋಬಿಂದ್ ಸಿಂಗ್ ರ 350ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ.
========
ಈ ನಾಣ್ಯದ ತೂಕ 35 ಗ್ರಾಂ ಇದೆ. ಶೇ.50ರಷ್ಟು ಭಾಗ ಬೆಳ್ಳಿ, ಹಾಗೂ ಶೇ.45ರಷ್ಟು ತಾಮ್ರದಿಂದ ಮಾಡಲ್ಪಟ್ಟಿದೆ. ಶೇ.5ರಷ್ಟು ನಿಕ್ಕಲ್ ಹಾಗೂ ಸತುವನ್ನು ಬಳಸಲಾಗಿದೆ.
========
ನಾಣ್ಯದಲ್ಲಿ ರೂಪಾಯಿ ಚಿಹ್ನೆಯಿದೆ. ಜೊತೆಗೆ 350 ಎಂಬ ಮುಖಬೆಲೆಯನ್ನು ಇದು ಹೊಂದಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ 'ತಖ್ತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್' ಚಿತ್ರವಿದೆ. ನಾಣ್ಯದ ಎಡ ಮತ್ತು ಬಲಭಾಗದಲ್ಲಿ 1666 ಹಾಗೂ 2016 ಎಂದು ಚಿತ್ರಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ