ಬುಧವಾರ, ಮಾರ್ಚ್ 28, 2018

40 ವರ್ಷಗಳಲ್ಲಿ ಅವಧಿ ಪೂರ್ಣಗೊಳಿಸಿದ ಕರ್ನಾಟಕದ ಮೊದಲ ಸಿಎಂ

============
ಬೆಂಗಳೂರು, ಮಾ. 28: ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದ ರಾಜ್ಯದ ಕೊನೆಯ ಮುಖ್ಯಮಂತ್ರಿ ಡಿ. ದೇವರಾಜು ಅರಸು. ಅವರ ಬಳಿಕ 40 ವರ್ಷಗಳಲ್ಲಿ ಐದು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸುತ್ತಿರುವವರು ಸಿದ್ದರಾಮಯ್ಯ. ಕರ್ನಾಟಕದ ವಿಧಾನ ಸಭಾ ಚುನಾವಣೆ ಮೇ 12ಕ್ಕೆ ನಡೆಯಲಿದ್ದು, ಸಿದ್ದರಾಮಯ್ಯ ಅವರ 5 ವರ್ಷಗಳ ಅಧಿಕಾರ ಅವಧಿ ಮೇ 28ರಂದು ಪೂರ್ಣಗೊಳ್ಳಲಿದೆ.
===========
ಸಿದ್ದರಾಮಯ್ಯ 2013 ಮೇಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಮೇ 28ರಂದು ಅವರು 5 ವರ್ಷದ ಅಧಿಕಾರ ಅವಧಿ ಪೂರ್ಣಗೊಳಿಸಲಿದ್ದಾರೆ. ಇದರೊಂದಿಗೆ ಕಳೆದ 40 ವರ್ಷಗಳಲ್ಲಿ 5 ವರ್ಷದ ಅಧಿಕಾರ ಅವಧಿ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.
======≠====
ಸಿದ್ದರಾಮಯ್ಯ ಅವರಂತೆ ಮೈಸೂರಿನವರೇ ಆಗಿದ್ದ ಡಿ. ದೇವರಾಜು ಅರಸು ಅವರು 5 ವರ್ಷದ ಅಧಿಕಾರ ಅವಧಿ ಪೂರ್ಣಗೊಳಿಸಿದ ರಾಜ್ಯದ ಕೊನೆಯ ಮುಖ್ಯಮಂತ್ರಿ.
===========
ಅವರು 1972ರಿಂದ 1977ರ ವರೆಗೆ ಅಧಿಕಾರ ನಡೆಸಿದ್ದರು. ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಅರಸು ಅವರು 1980ರಲ್ಲಿ ರಾಜೀನಾಮೆ ನೀಡಿದ ಕಾರಣ ಅವರ ಎರಡನೇ ಹಂತದ ಅಧಿಕಾರಾವಧಿ ಕಡಿತಗೊಂಡಿತ್ತು. ಅವರ ಉತ್ತರಾಧಿಕಾರಿಯಾಗಿ ಆರ್. ಗುಂಡುರಾವ್ ಅಧಿಕಾರ ಸ್ವೀಕರಿಸಿದ್ದರು.
===========
ಕರ್ನಾಟಕದ ಮುಖ್ಯಮಂತ್ರಿಗಳ ಹೆಸರನ್ನು ಈ ಕೆಳಗಿನ ಪಟ್ಟಿಯಲ್ಲಿ ಅನುಕ್ರಮವಾಗಿ ನೀಡಲಾಗಿದೆ. ಈ ಅವಧಿಯಲ್ಲಿ ಕರ್ನಾಟಕ 19 ಸರಕಾರಗಳನ್ನು ಕಂಡಿದೆ. ನಾಲ್ಕು ಅವಧಿಗಳಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒಳಗಾಗಿದೆ. ಈ ಪಟ್ಟಿಯಲ್ಲಿ ಹೊರಗುಳಿಯುವ ಏಕೈಕ ಮುಖ್ಯಮಂತ್ರಿ ಎಂದರೆ ಎಂಸ್.ಎಂ. ಕೃಷ್ಣ. ಅವರು ಸ್ಥಿರ ಸರಕಾರವನ್ನು (1999-2004) ಮುಂದುವರಿಸುತ್ತಿದ್ದರೂ ಆಡಳಿತ ಅವಧಿ ಮುಗಿಯುವುದಕ್ಕೆ ಐದು ತಿಂಗಳು ಮುನ್ನವೇ ಚುನಾವಣೆ ಎದುರಿಸಲು ನಿರ್ಧರಿಸಿದ್ದರು.
===============
►ಆರ್. ಗುಂಡುರಾವ್: ಜನವರಿ 1980 - ಜನವರಿ 1983
►ರಾಮಕೃಷ್ಣ ಹೆಗ್ಡೆ: 1983-1988 (ಮೂರು ಬಾರಿ)
►ಎಸ್.ಆರ್. ಬೊಮ್ಮಾಯಿ: ಆಗಸ್ಟ್ 1988 - ಎಪ್ರಿಲ್ 1989
►ವೀರೇಂದ್ರ ಪಾಟೀಲ್: ನವೆಂಬರ್ 1989 - ಅಕ್ಟೋಬರ್ 1990
►ಎಸ್. ಬಂಗಾರಪ್ಪ: ಅಕ್ಟೋಬರ್ 1990 - ನವೆಂಬರ್ 1992
►ವೀರಪ್ಪ ಮೊಯ್ಲಿ: ನವೆಂಬರ್ 1992 - ಡಿಸೆಂಬರ್ 1994
►ಎಚ್.ಡಿ. ದೇವೆಗೌಡ: ಡಿಸೆಂಬರ್ 1994 - ಮೇ 1996
►ಜೆ.ಎಚ್. ಪಟೇಲ್: ಮೇ 1996 - ಅಕ್ಟೋಬರ್ 1999
►ಎಸ್.ಎಂ. ಕೃಷ್ಣ: 1999 - 2004
►ಧರಂ ಸಿಂಗ್: ಮೇ 2004 - ಜನವರಿ 2006
►ಎಚ್.ಡಿ. ಕುಮಾರಸ್ವಾಮಿ: ಪೆಬ್ರವರಿ 2006-ಅಕ್ಟೋಬರ್ 2007
►ರಾಷ್ಟ್ರಪತಿ ಆಳ್ವಿಕೆ: ನವೆಂಬರ್ 2007 - ಮೇ 2008
►ಬಿ.ಎಸ್. ಯಡಿಯೂರಪ್ಪ: ಮೇ 2008 - ಜುಲೈ 2011
►ಡಿ.ವಿ. ಸದಾನಂದ ಗೌಡ: ಅಗಸ್ಟ್ 2011- ಜುಲೈ 2012
►ಜಗದೀಶ್ ಶೆಟ್ಟರ್: ಜುಲೈ 2012 - ಮೇ 2013

============

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ