ಶುಕ್ರವಾರ, ಮಾರ್ಚ್ 30, 2018

ಉದ್ಯೋಗಿನಿ ಯೋಜನೆ ಎಂದರೇನು ? ಅದರ ಲಾಭವೇನು ನಿಮಗೆ ಗೊತ್ತೇ?


ಇತ್ತೀಚಿನ ದಿನದಲ್ಲಿ ಸರ್ಕಾರಗಳು ತನ್ನ ಪ್ರಜೆಗಳಿಗಾಗಿ ಹಲವಾರು ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿವೆ. ಹೌದು ಸರ್ಕಾರ ಅಂದರೆ ಪ್ರಜೆಗಳ ಕಲ್ಯಾಣಕ್ಕಾಗಿ ಎನ್ನುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸಹ ಕಾರ್ಯ ನಿರ್ವಹಣೆ ಮಾಡುತ್ತಿವೆ.

ನಾವು ಈಗಾಗಲೇ ಹಲವಾರು ಯೋಜನೆಯ ಬಗ್ಗೆ ನಿಮಗೆ ಮಾಹಿತಿ ನೀಡಿದೆವು , ಅವುಗಳ ಲಾಭವೇನು ? ಅವುಗಳನ್ನು ಹೇಗೆ ಪಡೆಯಬೇಕು ? ಅವುಗಳನ್ನು ಪಡೆಯಲು ಏನೆಲ್ಲಾ ಮಾನದಂಡವಿದೆ? ಈ ಎಲ್ಲಾ ಮಾಹಿತಿಯನ್ನು ಸಹ ನಾವು ನಿಮಗೆ ಮಾಹಿತಿ ನೀಡಿದೆವು. ಅಂತೆಯೇ ರಾಜ್ಯ ಸರ್ಕಾರವು ಮಹಿಳೆಯರ ಪ್ರಗತಿಗಾಗಿ ಮತ್ತೊಂದು ಹೆಜ್ಜೆ ಇಟ್ಟಿದೆ.

ಹೌದು ಕೇಂದ್ರ ಸರ್ಕಾರವು ಸಹ ಈಗಾಗಲೇ ಹಲವಾರು ಯೋಜನೆಯನ್ನು ಹೆಣ್ಣು ಮಕ್ಕಳಿಗಾಗಿ ಮತ್ತು ಮಹಿಳೆಯರಿಗಾಗಿ ಪರಿಚಯ ಮಾಡಿದೆ. ಅಂತೆಯೇ ರಾಜ್ಯ ಸರ್ಕಾರ ಮಹಿಳೆಯರ ಏಳಿಗೆಗಾಗಿ , ಅವರು ಸಹ ಸಮಾಜದಲ್ಲಿ ಉದ್ಯಮ ಸ್ಥಾಪನೆ ಮಾಡಬಹುದು , ಅವರಿಗೂ ಸಹ ಎಲ್ಲವು ಸಹ ಸಾಧ್ಯ ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿ ಉದ್ಯೋಗಿನಿ ಯೋಜನೆ ನವೀಕರಣ ಮಾಡಿ ಪರಿಚಯ ಮಾಡುತ್ತಿದೆ. ಹಾಗಾದರೆ ಈ ಯೋಜನೆಯ ಲಾಭವೇನು ? ಈ ಯೋಜನೆಯನ್ನು ಪಡೆಯಲು ನೀವು ಏನು ಮಾಡಬೇಕು? ಏನೆಲ್ಲಾ ಬದಲಾವಣೆ ಆಗಿದೆ ? ಈ ಎಲ್ಲಾ ಮಾಹಿತಿ ನೋಡೋಣ ಬನ್ನಿ.

ಉದ್ಯೋಗಿನಿ ಯೋಜನೆ ಎಂದರೇನು ?

ರಾಜ್ಯ ಸರ್ಕಾರ ‘ಉದ್ಯೋಗಿನಿ’ ಯೋಜನೆಯಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, ಮೂರು ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಉದ್ಯೋಗಿನಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರ ಮೂಲಕ ಮಹಿಳೆಯರು ಅರ್ಥಿಕ ಕ್ಷೇತ್ರದಲ್ಲಿ ಮುಂದೆ ಬರಲು ಸಹ ಸಹಾಯವಾಗುತ್ತದೆ.

ಉದ್ಯೋಗಿನಿ ಯೋಜನೆ ಉದ್ದೇಶವೇನು ?

ಉದ್ಯೋಗಿನಿ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲಗಳನ್ನು ಒದಗಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕರಿಸುತ್ತದೆ.
ಇದು ವ್ಯಾಪಾರ ಚಟುವಟಿಕೆಗಳನ್ನು/ಸೂಕ್ಷ್ಮ ಉದ್ಯಮಗಳನ್ನು ಕೈಗೊಳ್ಳಲು ಸಬ್ಸಿಡಿಯನ್ನೂ ಸಹ ಒದಗಿಸುತ್ತದೆ
ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ಸ್ವಯಂ ಅವಲಂಬನೆ ಪಡೆಯುವುದರಲ್ಲಿ ನೆರವಾಗುತ್ತದೆ.

ಈ ಮೇಲಿನ ಮಾದರಿಯಲ್ಲಿ ಉದ್ಯೋಗಿನಿ ಯೋಜನೆಯು ತನ್ನ ಕಾರ್ಯ ಸಾಧನೆ ಮಾಡಲು ಹೊರಟಿದೆ , ಇದರಿಂದ ಸಾಮನ್ಯವಾಗಿ ನಮ್ಮ ಮಹಿಳೆಯರು ತಮ್ಮ ಅರ್ಥಿಕ ಕ್ಷೇತ್ರದ ನೆಲೆಯನ್ನು ಭದ್ರತೆ ಮಾಡಿಕೊಳ್ಳುವುದು ಅವರ ಕಾರ್ಯವಾಗಿದೆ. ಹೀಗೆ ಸರ್ಕಾರ ತನ್ನ ಹೊಸ ಚಿನತೆನ್ಯ ಮೂಲಕ ಮತೊಮ್ಮೆ ತನ್ನ ಪ್ರಜೆಗಳ ನೆರವಿಗೆ ನಿಂತಿದೆ , ಹಾಗಾದರೆ ಈ ಯೋಜನೆಯ ಲಾಭ ಪಡೆಯಲು ಏನೆಲ್ಲಾ ಮಾನದಂಡ ಬೇಕು ನೋಡೋಣ ಬನ್ನಿ.

ಉದ್ಯೋಗಿನಿ ಯೋಜನೆಯ ಲಾಭ ಪಡೆಯಲು ಬೇಕಾದ ಮಾನದಂಡಗಳು :-

ವಾರ್ಷಿಕ ರೂ. 1.5 ಲಕ್ಷ ಆದಾಯ ಹೊಂದಿರುವ 55 ವರ್ಷದೊಳಗಿನ ಎಲ್ಲಾ ವರ್ಗದ ಮಹಿಳೆಯರಿಗೆ ಸಾಲ ಒದಗಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ -ಟೀ ಅಂಗಡಿ, ಟೈಲರಿಂಗ್, ಎಸ್‌ಟಿಡಿ ಬೂತ್‌, ಬ್ಯೂಟಿ ಪಾರ್ಲರ್‌, ಅಗರಬತ್ತಿ, ಕ್ಲಿನಿಕ್‌, ಜಿಮ, ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ,

ಜೊತೆಗೆ ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ ಇಂತಹ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಮಾತ್ರ ಈ ಸಲ ಸೌಲಭ್ಯ ಪಡೆಯಬಹುದು. ಇದು ಸಹ ನಿಮಗೆ ಉತ್ತಮವಾದ ಲಾಭವನ್ನು ನೀಡುತ್ತವೆ , ಇದರಿಂದಲ್ಲೂ ನಿಮ್ಮ ಅರ್ಥಿಕ ಸ್ಥಿತಿ ಬೆಳವಣಿಗೆ ಆಗುತ್ತದೆ ಅದ ಕಾರಣ ಈ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ.

ಉದ್ಯೋಗಿನಿ ಯೋಜನೆಗೆ ಸಾಲ ನೀಡುವ ಬ್ಯಾಂಕ್ ಯಾವುವು?

ವಾಣಿಜ್ಯ ಬ್ಯಾಂಕುಗಳು, ಜಿಲ್ಲೆಯ ಸಹಕಾರಿ ಬ್ಯಾಂಕುಗಳು ಮತ್ತು ಆರ್ಆರ್ಬಿಗಳಂತಹ ಹಣಕಾಸು ಸಂಸ್ಥೆಗಳ ಮೂಲಕ ಸಾಲಗಳನ್ನು ಹೊಂದಿಸಲಾಗುತ್ತದೆ. ಈ ಬ್ಯಾಂಕ್ ಗಳು ನಿಮಗೆ ಸಾಲ ನೀಡಲು ಮುಂದಾಗಿದ್ದು , ಈ ಯೋಜನೆಯ ಲಾಭವನ್ನು ಈ ಬ್ಯಾಂಕ್ ಗಳ ಮೂಲಕ ನೀವು ಪಡೆಯಬಹುದು . ಇದಾದ ಬಳಿಕ ನಿಮಗೆ ಕಾಡುವ ಪ್ರಶ್ನೆ ಎಂದರೆ ಎಷ್ಟು ಹಣ ನೀಡಲಾಗುತ್ತದೆ ಎನ್ನುವುದು ಅಲ್ಲವೇ?. ಖಂಡಿತ ಆ ಪ್ರಶ್ನೆಗೂ ಕೂಡ ನಿಮಗೆ ಇಲ್ಲಿ ಉತ್ತವರವಿದೆ.
===========
ಉದ್ಯೋಗಿನಿ ಯೋಜನೆಯಲ್ಲಿ ಎಷ್ಟು ಸಾಲ ನೀಡಲಾಗುತ್ತದೆ?
===============
ವಾರ್ಷಿಕ ಆದಾಯದ ಮಿತಿಯನ್ನು 40 ಸಾವಿರದಿಂದ ರೂ. 1.5 ಲಕ್ಷಗಳಿಗೆ ಏರಿಸಲಾಗಿದೆ. ಕಳೆದ 40 ವರ್ಷಗಳಿಂದ ಉದ್ಯೋಗಿನಿ ನಿಯಮಗಳು ಬದಲಾಗಿರಲಿಲ್ಲ. ಆದರೆ ಈಗ ಬದಲಾಗಿದೆ ಜೊತೆಗೆ ಇಲ್ಲಿ ನಿಮಗೆ ರೂ. 3 ಲಕ್ಷ ಸಾಲ ಸೌಲಭ್ಯ ಒದಗಿಸಲಿದ್ದು, ರೂ. 90,000 ಸಬ್ಸಿಡಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಹಾಗಾದರೆ ನಿಮಗೆ ಈಗ ಕಾಡುವ ಪ್ರಶ್ನೆ ಎಂದರೆ ಈ ಯೋಜನೆಯನ್ನು ಹೇಗೆ ಪಡೆಯಬೇಕು ಎನ್ನುವುದು ಅಲ್ಲವೇ?. ಈ ಯೋಜನೆಯನ್ನು ಪಡೆಯುವುದು ತುಂಬ ಸುಲಭವೆ ಸರಿ ಅದು ಹೇಗೆ ಅಂದರೆ
===========
ಉದ್ಯೋಗಿನಿ ಯೋಜನೆಯ ಲಾಭ ಪಡೆಯುವುದು ಹೇಗೆ ?
==========
ಮೇಲೆ ತಿಳಿಸಿದ ಮಾನದಂಡ ಮತ್ತು ಅರ್ಹತೆಯನ್ನು ಹೊಂದಿರುವ ಮಹಿಳೆಯರು ಎಲ್ಲಾ ಜಿಲ್ಲೆಗಳಲ್ಲಿರುವ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಯೋಜನೆ ಕಾರ್ಯಗತವಾಗಲಿದೆ. ತಾಲೂಕು, ಜಿಲ್ಲಾ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಗಮದ ಮೂಲಕ ನಿರೀಕ್ಷಕರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ . ಇಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು ತದನಂತರ ನಿಮಗೆ ಈ ಲಭ ಪಡೆಯಬಹುದು.
==========
ಈ ಮೇಲಿನ ಮಾದರಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿದರೆ ನೀವು ಸಹ ಈ ಯೋಜನೆಯ ಲಾಭ ಪಡೆಯಬಹುದು. ಹೀಗಾಗಿ ನೀವು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಯೋಜನೆಗೆ ನಿಗಧಿ ಪಡಿಸಿದ ಅರ್ಹತೆ ಮತ್ತು ಮಾನದಂಡವನ್ನು ಗಮನಿಸಿ ನೀವು ಅರ್ಜಿ ಸಲ್ಲಿಕೆ ಮಾಡಬೇಕು . ತದನಂತರ ಮಾತ್ರ ನಿಮ್ಮ ಅರ್ಜಿಯು ಪ್ರಕ್ರಿಯೆಗೆ ಒಳಪಡುತ್ತದೆ. ಏನೇ ಅಗಲ್ಲಿ ಸರ್ಕಾರದ ಈ ರೀತಿಯ ಜನಪರ ಕಲ್ಯಾಣ ಯೋಜನೆಗಳು ಬರಲ್ಲಿ ಎನ್ನುವುದೇ ನಮ್ಮ ಆಶಯ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ