ಶನಿವಾರ, ಮಾರ್ಚ್ 24, 2018

ಕನ್ಯಾಕುಮಾರಿಯಿಂದ ಲೇಹ್ ಗೆ 5 ದಿನದಲ್ಲಿ ಪ್ರಯಾಣಿಸಿ ಮಹಿಳಾ ಬೈಕರ್ ಗಳ ಲಿಮ್ಕಾ ದಾಖಲ

==================
ತನ್ನ ಮೇಲೆ ಹೇರಲ್ಪಟ್ಟ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಇಂದಿನ ಮಹಿಳೆ ತನಗೆ ಅಸಾಧ್ಯವೆನಿಸಿದ್ದನ್ನು ಸಾಧ್ಯವನ್ನಾಗಿಸುತ್ತಿದ್ದಾಳೆ.ಒಂದರ ಮೇಲೊಂದರಂತೆ ಸಾಧನೆಗಳನ್ನು
ಮಾಡುತ್ತಿದ್ದಾಳೆ .ಈ ಮೂಲಕ ಹೆಣ್ಣಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.ಅಮೃತ ಕಾಶೀನಾಥ್ ಮತ್ತು ಶುಭ್ರ ಆಚಾರ್ಯ ಎಂದು ಈ ಇಬ್ಬರು ಯುವತಿಯರು ಕೂಡ ಅಸಾಧಾರಣ ಸಾಧನೆಯನ್ನು ಮಾಡಿದ್ದಾರೆ. ತಮ್ಮ ಮೋಟಾರ್ ಸೈಕಲ್ ನಲ್ಲಿ ಕನ್ಯಾಕುಮಾರಿಯಿಂದ ಲೇಹ್ ಗೆ ಕೇವಲ5 ದಿನಗಳಲ್ಲಿ ಪ್ರಯಾಣಿಸಿದ್ದಾರೆ.ಪ್ರಯಾಣಯುದ್ದಕ್ಕೂ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಮಹತ್ವದ ಬಗ್ಗೆ ಅರಿತಿದ್ದಾರೆ.129 ಗಂಟೆಗಳ ಪ್ರಯಾಣ  ನಡೆಸಿದ ಇವರು ಪ್ರಯಾಣದುದ್ದಕ್ಕೂ ದಿನಕ್ಕೆ ಐದು ಗಂಟೆಗಳ ಕಾಲ ಮಾತ್ರ ನಿದ್ರಿಸಿದ್ದಾರೆ.ಇದೀಗ ಈ ಇಬ್ಬರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರಿಕೊಂಡಿದೆ.
================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ