==========
ಹೊಸದಿಲ್ಲಿ: ಖ್ಯಾತ ಬಾಲಿವುಡ್ ನಟ ಫಾರೂಖ್ ಶೇಖ್ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ಭಾನುವಾರ ವಿಶೇಷ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.
==========
ಗುಜರಾತ್‌ನ ಸಣ್ಣ ಹಳ್ಳಿಯೊಂದರಲ್ಲಿ 1948ರಲ್ಲಿ ಜನಿಸಿದ ಅವರು, ಲಾ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು. ಕೊನೆಗೆ ನಟನಾ ಲೋಕಕ್ಕೆ ಕಾಲಿಡಲು ತೀರ್ಮಾನಿಸಿದರು.
=========
1973ರಲ್ಲಿ ತೆರೆಕಂಡ ಎಂ.ಎಸ್ ಸತ್ಯು ಅವರ 'ಗರಂ ಹವಾ' ಫಾರೂಖ್ ಶೇಖ್ ಅವರು ನಟಿಸಿದ ಮೊದಲ ಚಿತ್ರ. ಇದರೊಂದಿಗೆ ಅವರ ನಟನಾ ಕೌಶಲ್ಯಕ್ಕೆ ವ್ಯಾಪಕ ಮನ್ನಣೆ ದೊರೆಯಿತು.
==========
ಚಶ್ಮೆ ಬಡ್ಡೂರ್, ನೂರೀ, ಶತರಂಜ್ ಕೆ ಖಿಲಾಡಿ ಮತ್ತು ಉಮ್ರಾವ್ ಜಾನ್ ಮತ್ತು ಇತರ ಹಲವು ಜನಪ್ರಿಯ ಚಿತ್ರಗಳಲ್ಲಿ ಅವರು ನಟಿಸಿದ್ದರು.
========
ಬೆಳ್ಳಿ ತೆರೆಯ ಹೊರತಾಗಿ ರಂಗಭೂಮಿಯಲ್ಲೂ ಅವರು ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದರು. ಶಬಾನಾ ಅಜ್ಮಿ ಜತೆ ನಟಿಸಿದ 'ತುಮಾರಿ ಅಮೃತಾ' ಎರಡು ದಶಕಗಳ ಕಾಲ ಪ್ರೇಕ್ಷಕರ ಮನಸೂರೆಗೊಂಡಿತ್ತು.
==========
ಟಿ.ವಿ ಧಾರಾವಾಹಿಗಳಲ್ಲೂ ಅವರು ನಟಿಸಿದ್ದರು. 'ಜೀನಾ ಇಸಿ ಕಾ ನಾಮ್ ಹೈ' ಮತ್ತು 'ಚಮತ್ಕಾರ್' ಅವರಿಗೆ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ತಂದುಕೊಟ್ಟವು.
=========
'ಲಾಹೋರ್' ಚಿತ್ರದಲ್ಲಿ ಅವರ ಮನೋಜ್ಞ ಅಭಿನಯಕ್ಕೆ 2010ರಲ್ಲಿ 'ಅತ್ಯುತ್ತಮ ಪೋಷಕ ನಟ' ಪ್ರಶಸ್ತಿ ಸಂದಿದೆ.
=========
2013ರಲ್ಲಿ ತಮ್ಮ ಕುಟುಂಬದೊಂದಿಗೆ ದುಬೈಗೆ ಪ್ರವಾಸ ಹೋಗಿದ್ದ ವೇಳೆ ಹೃದಯಾಘಾತದಿಂದ ನಿಧನರಾದರು. ಆಗ ಅವರಿಗೆ 65 ವರ್ಷ ವಯಸ್ಸಾಗಿತ್ತು.
=========
1970ರ ದಶಕದಲ್ಲಿ ಕೈಯಿಂದ ಬಿಡಿಸುತ್ತಿದ್ದ ವರ್ಣಚಿತ್ರಗಳ ಪೋಸ್ಟರ್‌ಗಳ ಮಾದರಿಯಲ್ಲಿ ನಿಮಿತಾ ಮಾಳವೀಯ ರಚಿಸಿದ ಚಿತ್ರವನ್ನು ಗೂಗಲ್ ತನ್ನ ಡೂಡಲ್‌ನಲ್ಲಿ ಬಳಸಿಕೊಂಡಿದೆ.
=============
ಭಾನುವಾರ, ಮಾರ್ಚ್ 25, 2018
ಬಾಲಿವುಡ್ ನಟ ಫಾರೂಖ್ ಶೇಖ್ 70ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ