*##ಮಾಹಿತಿ ವೇದಿಕೆ##*
*ರೈಲ್ವೆ ಇಲಾಖೆ ಶುರು ಮಾಡಿದೆ `ನೋ ಬಿಲ್ ಫ್ರೀ ಫುಡ್' ಯೋಜನೆ*
##############
*ಭಾರತೀಯ ರೈಲ್ವೆ ಇಲಾಖೆ ನೋ ಬಿಲ್ ಫ್ರೀ ಫುಡ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಬಿಲ್ ಸಿಕ್ಕಿಲ್ಲವೆಂದ್ರೆ ನೀವು ಹಣ ನೀಡದೆ ಉಚಿತವಾಗಿ ಆಹಾರ ಸೇವನೆ ಮಾಡಬಹುದಾಗಿದೆ. ಅನೇಕ ಬಾರಿ ಭಾರತೀಯ ರೈಲಿನಲ್ಲಿ ಬಿಲ್ ನೀಡದೆ ಆಹಾರ ನೀಡಲಾಗುತ್ತದೆ. ಜೊತೆಗೆ ಆಹಾರಕ್ಕೆ ನಿಗದಿಯಾಗಿರುವ ಬೆಲೆಗಿಂತ ಹೆಚ್ಚು ಹಣವನ್ನು ವಸೂಲಿ ಮಾಡಲಾಗ್ತಿದೆ. ಇದಕ್ಕೆಲ್ಲ ಬ್ರೇಕ್ ನೀಡಲು ರೈಲ್ವೆ ಇಲಾಖೆ ಈ ಹೊಸ ಯೋಜನೆ ಶುರು ಮಾಡಿದೆ.*
##############
*ರೈಲಿನಲ್ಲಿ ಆಹಾರ ಪಡೆದ ನಂತ್ರ ವೇಟರ್ ಬಳಿ ಬಿಲ್ ಕೇಳಿ. ಒಂದು ವೇಳೆ ವೇಟರ್ ಬಿಲ್ ನೀಡಿಲ್ಲವೆಂದಾದ್ರೆ ಆಹಾರಕ್ಕೆ ಹಣ ನೀಡಬೇಡಿ ಎಂದು ರೈಲ್ವೆ ಇಲಾಖೆ ಹೇಳಿದೆ. ವೇಟರ್ ಗಳ ವಸೂಲಿ ಇದ್ರಿಂದ ತಪ್ಪಬಹುದೆಂಬ ಆಶಯವನ್ನು ರೈಲ್ವೆ ಇಲಾಖೆ ವ್ಯಕ್ತಪಡಿಸಿದೆ.*
################
*ಎಲ್ಲ ರೈಲಿನಲ್ಲಿ ಹೊಸ ಯೋಜನೆಯ ನೊಟೀಸ್ ಮಾರ್ಚ್ 31ರಿಂದ ಕಾಣಸಿಗಲಿದೆ.*
=============
*ಯೋಜನೆ ಸರಿಯಾಗಿ ಜಾರಿಗೆ ಬಂದಿದ್ಯಾ ಇಲ್ಲವಾ ಎನ್ನುವ ಬಗ್ಗೆ ಇನ್ಸ್ಪೆಕ್ಟರ್ ಮೇಲ್ವಿಚಾರಣೆ ನಡೆಸಲಿದ್ದಾರೆ. ಈ ಬಗ್ಗೆ ಕಳೆದ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಸುಮಾರು 7000ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ