ಶುಕ್ರವಾರ, ಮಾರ್ಚ್ 23, 2018

ನಿಮಗಿದು ಗೊತ್ತೆ

ರಾಜಸ್ಥಾನದ ಅಂತರ್ಜಲ ಅಭಿವೃದ್ಧಿ ವಿಶ್ವಸಂಸ್ಥೆ ವರದಿಯಲ್ಲಿ ಪ್ರಶಂಸೆ "ತರುಣ್ ಭಾರತ್ ಸಂಘ"

ಜಾಗತಿಕ ಜಲಸಮಸ್ಯೆ ಎದುರಿಸಲು ನೈಸರ್ಗಿಕ ಪರಿಹಾರಗಳ ಮಹತ್ವದ ಕುರಿತು ವಿಶ್ವಸಂಸ್ಥೆ ತಯಾರಿಸಿರುವ ವರದಿಯಲ್ಲಿ ಭಾರತದಲ್ಲಿ ಸ್ಥಳೀಯ ಸಮುದಾಯಗಳಿಂದ ನಡೆಯುತ್ತಿರುವ ಜಲ ಸಂರಕ್ಷಣೆ ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ರಾಜಸ್ಥಾನದಲ್ಲಿ ಸ್ಥಳೀಯ ನೀರಿನ ಮೂಲಗಳು ಮತ್ತು ಅಂತರ್ಜಲದ ಮರುಸ್ಥಾಪನೆಗೆ ಒತ್ತುಕೊಡುತ್ತಿರುವ ತರುಣ್ ಭಾರತ್ ಸಂಘದ ಚಟುವಟಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯ ಮಹಿಳೆಯರ ಪಾತ್ರ ಈ ನಿಟ್ಟಿನಲ್ಲಿ ಪ್ರಮುಖವಾಗಿದೆ. ಇವರ ಶ್ರಮದಿಂದ ಅಂತರ್ಜಲ 6 ಮೀ. ಏರಿಕೆಯಾಗಿದ್ದು, ಫಲವತ್ತಾದ ಕೃಷಿ ಭೂಮಿ ಶೇ. 20 ರಿಂದ ಶೇ. 80ಕ್ಕೆ ವಿಸ್ತರಿಸಿದೆ. ಅರಣ್ಯ ಪ್ರದೇಶ ಕೂಡ ಅಭಿವೃದ್ಧಿ ಕಂಡಿದ್ದು ಶೇ. 33 ಮಳೆ ನೀರು ಹಿಡಿದಿಡುತ್ತಿದೆ ಎಂದು ವಿಶ್ವಸಂಸ್ಥೆ ವರದಿ ವಿವರಿಸಿದೆ. 2050ರ ವೇಳೆಗೆ ಅಂದಾಜು 50 ಲಕ್ಷ ಜನರಿಗೆ ಅವಶ್ಯಕ ನೀರು ಸಿಗುವುದಿಲ್ಲ. ನೈಸರ್ಗಿಕ ಪರಿಹಾರವೊಂದೇ ಇದಕ್ಕೆ ಮಾರ್ಗ ಎಂದು ವಿಶ್ವಸಂಸ್ಥೆಯ ವಿಶ್ವ ಜಲ ಅಭಿವೃದ್ಧಿ ವರದಿ 2018 ಹೇಳಿದೆ. ಬ್ರೆಜಿಲ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರದಿ ಬಿಡುಗಡೆಯಾಗಿದ್ದು, ಚೀನಾದ ಸ್ಪಾಂಜ್ ನಗರದ ಮಳೆನೀರು ಮರುಬಳಕೆ ಮತ್ತು ಉಕ್ರೇನ್​ನ ಕೃತಕ ತೇವಭೂಮಿ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ