*##ಮಾಹಿತಿ ವೇದಿಕೆ##*
*#ನಿಮಗಿದು ಗೊತ್ತಿರಲಿ#*
*ಸೌರ ರಾಷ್ಟ್ರಗಳ ಕೂಟ*
###############
*ಸೌರಶಕ್ತಿಯನ್ನು ಉತ್ತಮವಾಗಿ ಬಳಸಿಕೊಳ್ಳುವ ಉದ್ದೇಶದಿಂದ 121 ದೇಶಗಳನ್ನು ಒಗ್ಗೂಡಿಸಿದ ಪ್ರಧಾನಿ ನರೇಂದ್ರ ಮೋದಿ, ಒಕ್ಕೂಟದ ಮೊದಲ ಸಮ್ಮೇಳನವನ್ನು ಹೊಸದಿಲ್ಲಿಯಲ್ಲಿ ನಡೆಸಿದ್ದಾರೆ. 2015ರಲ್ಲಿ ಪ್ಯಾರಿಸ್‌ನಲ್ಲಿ ಪ್ರಸ್ತಾವವಾದ ಈ ಯೋಜನೆ ಈಗ ಕಾರ್ಯರೂಪಕ್ಕೆ ಬಂದಿದ್ದು, ಭಾರತಕ್ಕೆ ಫ್ರಾನ್ಸ್ ಕೂಡ ಹೆಗಲಾಗಿ ನಿಂತಿದೆ.*
############
*ಶುರುವಾಗಿದ್ದು ಹೇಗೆ?*
==========
*ಮೊದಲ ಬಾರಿ* *ಪ್ರಸ್ತಾವವಾಗಿದ್ದು 2015ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಭಾರತ-ಆಫ್ರಿಕಾ ಸಮ್ಮೇಳನದಲ್ಲಿ ,*
*ಪ್ಯಾರಿಸ್‌ನ ವಿಶ್ವಸಂಸ್ಥೆ ಹವಾಮಾನ ವೈಪರೀತ್ಯ ಸಮ್ಮೇಳನದಲ್ಲಿ.*
############
*ಮೊದಲ ರೂಪ*
=========
*ಈ ಕಲ್ಪನೆಗೆ ರೂಪ ಸಿಕ್ಕಿದ್ದು, 2016ರಲ್ಲಿ. ನವೆಂಬರ್‌ನಲ್ಲಿ ಮೊರಾಕ್ಕೋದಲ್ಲಿ ನಡೆದ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ರೂಪುರೇಷೆ ಸಿದ್ಧವಾಯಿತು.*
############
*ಅಂದಿನಿಂದಲೂ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಆರಂಭಿಸಿದವು*
############
*121 ರಾಷ್ಟ್ರಗಳ ವ್ಯಾಪ್ತಿ*
============
*ಈ ಒಕ್ಕೂಟದಲ್ಲಿ ಸೇರ್ಪಡೆಗೊಳ್ಳಲು ಒಟ್ಟು 121 ರಾಷ್ಟ್ರಗಳನ್ನು ಗುರುತಿಸಲಾಗಿದ್ದು, ಈಗಾಗಲೇ 90 ದೇಶಗಳು ಸಹಿ ಹಾಕಿವೆ.*
#############
*ಒಕ್ಕೂಟದ ಉದ್ದೇಶ*
===========
*ಈ ಒಕ್ಕೂಟದ ಮೂಲ ಉದ್ದೇಶವೇ ಹಣಕಾಸು ಸೌಲಭ್ಯಕ್ಕೆ ಪ್ರೋತ್ಸಾಹ ನೀಡುವುದು. ಜತೆಗೆ ತಂತ್ರಜ್ಞಾನ ವರ್ಗಾವಣೆಗೆ ಅವಕಾಶ ನೀಡುವುದಾಗಿದೆ.*
###########
*ಭಾರತದ ಗುರಿ*
=========
ಈ ಯೋಜನೆಯ ಅಡಿಯಲ್ಲಿ *ಭಾರತ 2022ರ ವೇಳೆಗೆ 175 ಗಿಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಯ ಗುರಿ ಹಾಕಿಕೊಂಡಿದೆ.*
#############
*ಸಮ್ಮೇಳನದ ವಿಶೇಷ*
===============
*ರಾಷ್ಟ್ರಪತಿ ಭವನದ ಕನ್ವೆನÒನ್ ಸೆಂಟರ್‌ನಲ್ಲಿ ನಡೆದ ಈ ಸಮ್ಮೇಳನ ಕೆಲವು ವರ್ಷಗಳ ಹಿಂದೆ ಭಾರತ-ಆಫ್ರಿಕಾ ಸಮ್ಮೇಳನದ ರೀತಿಯಲ್ಲೇ ನಡೆದಿದೆ.*
##############
*ಹಣಕಾಸು ಸೌಲಭ್ಯ*
============
*ಹಲವು ಬ್ಯಾಂಕ್‌ಗಳು ಈಗಾಗಲೇ ಹಣಕಾಸು ನೆರವು ಒದಗಿಸುವ ನಿಟ್ಟಿನಲ್ಲಿ ಉತ್ಸುಕವಾಗಿದ್ದು, ಬ್ರಿಕ್ಸ್, ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್, ಎಡಿಬಿ ಸಹಿತ ಹಲವು ಬ್ಯಾಂಕ್‌ಗಳ ಮುಖ್ಯಸ್ಥರು ಹಾಜರಾಗಿದ್ದಾರೆ.*
############
*ಪ್ರಮುಖ ದೇಶಗಳು*
===========
*ಈ ಒಕ್ಕೂಟದಲ್ಲಿನ ಇತರ ಪ್ರಮುಖ ದೇಶಗಳೆಂದರೆ ಫ್ರಾನ್ಸ್, ಆಸ್ಟ್ರೇಲಿಯಾ, ಯುಎಇ, ನಿಗರ್, ಗಬೋನ್, ಸೀಶೆಲ್ಸ್, ಘಾನಾ, ರವಾಂಡಾ, ಫಿಜಿ, ಬಾಂಗ್ಲಾದೇಶ ಮತ್ತು ಶ್ರೀಲಂಕಾ.*
###############
*24 ಯೋಜನೆಗಳ ಆರಂಭ*
==========
*ಭಾರತ ಹಲವು ದೇಶಗಳಿಗೆ ತನ್ನ ತಂತ್ರಜ್ಞಾನವನ್ನು ಹಂಚಲಿದೆ.ಈ ಪೈಕಿ ತಾಂಜಾನಿಯಾ, ಟೋಗೋ, ಬೆನಿನ್, ಕಾಂಗೋ, ಚಾಡ್ ಮತ್ತು ಸೀಶೆಲ್ಸ್ ವಿನಂತಿ ಮಾಡಿವೆ. ಇದರ ಜತೆಗೆ ಈ ಸಮ್ಮೇಳನದಲ್ಲಿ 14 ದೇಶಗಳಲ್ಲಿ 24 ಯೋಜನೆಗಳೂ ಆರಂಭವಾಗಲಿವೆ.*
############
*ಮೊದಲ ಬಾರಿಗೆ ಒಕ್ಕೂಟದ ಕೇಂದ್ರ*
============
*ಭಾರತದಲ್ಲಿ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ ಒಕ್ಕೂಟದ ಕೇಂದ್ರ ಕಚೇರಿಯಿಲ್ಲ.ಇದೇ ಮೊದಲ ಬಾರಿಗೆ ಈ ಕನಸು ಐಎಸ್‌ಎ ಮೂಲಕ ಸಾಧ್ಯವಾಗುತ್ತಿದೆ. ಇದರ ಕೇಂದ್ರ ಕಚೇರಿ ಭಾರತದಲ್ಲಿ ಸ್ಥಾಪನೆಯಾಗಲಿದ್ದು, ಗುರ್‌ಗಾಂವ್‌ನಲ್ಲಿ ಇದಕ್ಕೆ ಪ್ರತ್ಯೇಕ ಭೂಮಿ ಕಾಯ್ದಿರಿಸಲಾಗಿದೆ.*
###########
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ