*==ಮಾಹಿತಿ ವೇದಿಕೆ==*
*ಕರ್ನಾಟಕದಲ್ಲೇ ಹೆಚ್ಚು ಹುಲಿ*✍🏾
################
*ಭಾರತದಲ್ಲಿ 2200ಕ್ಕೂ ಹೆಚ್ಚು ಹುಲಿಗಳಿವೆ. ದೇಶದಲ್ಲೇ ಅತ್ಯಧಿಕ ಹುಲಿಗಳನ್ನು ಹೊಂದಿರುವ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ನಾಗರಹೊಳೆ, ಬಂಡೀಪುರ, ದಾಂಡೇಲಿ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹೆಚ್ಚು ಹುಲಿಗಳಿವೆ. 2016ರ ಅಂಕಿಅಂಶದಂತೆ ರಾಜ್ಯದಲ್ಲಿ ಒಟ್ಟು 406 ಹುಲಿಗಳಿದ್ದು ನಾಗರಹೊಳೆಯೊಂದರಲ್ಲೇ 221 ಹುಲಿಗಳು ವಾಸವಾಗಿವೆ. ಇತ್ತೀಚೆಗೆ ಹುಲಿಗಳ ಸರಣಿ ಸಾವು ಸಂಭವಿಸುತ್ತಿವೆ. ದೆಹಲಿ ಮೂಲದ ‘ವನ್ಯಜೀವಿ ಸಂರಕ್ಷಣಾ ಸಮಾಜ’ ಎಂಬ ಸಂಸ್ಥೆಯ ಸಮೀಕ್ಷೆ ಪ್ರಕಾರ ಅತಿ ಹೆಚ್ಚು ಬೇಟೆಗೊಳಗಾಗುವ 4 ಪ್ರಾಣಿಗಳಲ್ಲಿ ಹುಲಿಯೂ ಒಂದು. ಚಿಪ್ಪು ಹಂದಿ, ಚಿರತೆ ಹಾಗೂ ಖಡ್ಗಮೃಗ ಇತರ ಮೂರು.*
==============
*ಸಂದೇಶಕ್ಕೊಂದು ಲಾಂಛನ*
###############
*2014ರಲ್ಲಿ ವನ್ಯಜೀವಿ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಇದಕ್ಕೂ ಒಂದು ತಿಂಗಳು ಮೊದಲು ಅಂದರೆ 2014ರ ಫೆಬ್ರವರಿ 3ರಂದು ಇದರ ಲಾಂಛನ ಬಿಡುಗಡೆ ಮಾಡಲಾಯಿತು. ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಾದ ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯಾ ಮತ್ತು ಸ್ಪಾ್ಯನಿಷ್ ಭಾಷೆಯಲ್ಲಿ ಲಾಂಛನ ಸಿದ್ಧಪಡಿಸಲಾಯಿತು. ಅಳಿವಿನಂಚಿನಲ್ಲಿರುವ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತನ್ನು ಕೇಂದ್ರೀಕರಿಸಿ ಲಾಂಛನ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಆನೆ, ಖಡ್ಗಮೃಗ, ಶಾರ್ಕ್, ಗೊರಿಲ್ಲಾ, ಕೃಷ್ಣಮೃಗ ಮುಂತಾದ ಅಳಿವಿನಂಚಿನಲ್ಲಿರುವ ಪ್ರಾಣಿಗಳಿವೆ.*
==========≠==
*ಚಿರತೆ: *
*ಇಂಗ್ಲಿಷ್ನಲ್ಲಿ ಲೆಪರ್ಡ್ ಎಂದು ಕರೆಯಲ್ಪಡುವ ಇದು ಆಫ್ರಿಕಾ, ಸೈಬೀರಿಯಾ, ದಕ್ಷಿಣ ಹಾಗೂ ಪಶ್ಚಿಮ ಏಷ್ಯಾದಿಂದ ಆಫ್ರಿಕಾದ ಉಪ ಸಹಾರಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಪ್ಯಾಂಥೆರಾ ಪರ್ದೂಸ್ ಇದರ ವೈಜ್ಞಾನಿಕ ಹೆಸರು. ಹಾಂಕಾಂಗ್, ಸಿಂಗಾಪುರ, ಕುವೈಟ್, ಸಿರಿಯಾ, ಲಿಬಿಯಾ ಹಾಗೂ ಟ್ಯುನೀಷಿಯಾ ಪ್ರದೇಶಗಳಲ್ಲಿ ಈಗಾಗಲೇ ಪೂರ್ಣವಾಗಿ ಕಣ್ಮರೆಯಾಗಿದೆ.*
===≠===========
*ಪೂಮಾ: *
*ಹುಲಿ ಜಾತಿಯ ಈ ಪ್ರಾಣಿ ಫೆಲಿಡೆ ವರ್ಗಕ್ಕೇ ಸೇರುತ್ತದೆ. ಇದರಲ್ಲಿ ಮೂರ್ನಾಲ್ಕು ವರ್ಗಗಳಿವೆ. ಈ ಪ್ರಾಣಿ ಯುರೇಷಿಯಾ, ಅಮೆರಿಕ, ಕೆನಡಾ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.*
================
*ಹಿಮ ಚಿರತೆ: *
*ಇದು ಮಧ್ಯಮ ಗಾತ್ರದ ದೊಡ್ಡ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿ. ಪ್ಯಾಂಥೆರಾ ಉನ್ಷಿಯಾ ಇದರ ವೈಜ್ಞಾನಿಕ ಹೆಸರು. ಹೆಚ್ಚಾಗಿ ಮಧ್ಯ ಹಾಗೂ ದಕ್ಷಿಣ ಏಷ್ಯಾದ ಬೆಟ್ಟಗಳ ಸಾಲುಗಳಲ್ಲಿ ಕಂಡುಬರುತ್ತದೆ. ಹಿಮ ಚಿರತೆಗಳು 3,000ದಿಂದ 5,500 ಮೀಟರ್ ಎತ್ತರದ ಮಧ್ಯ ಏಷ್ಯಾದ ಪರ್ವತ ಶ್ರೇಣಿಗಳಲ್ಲಿ ವಾಸಿಸುತ್ತವೆ. ಇವು ಎತ್ತರದ ಹಿಮ ಪ್ರದೇಶದಲ್ಲಿ ವಾಸಿಸುವುದರಿಂದ ಇವುಗಳ ಸಂಖ್ಯೆಯನ್ನು ನಿಖರವಾಗಿ ಹೇಳಲಾಗದು. ಇವು ಕೂಡ ಅಳಿವಿನಂಚಿನಲ್ಲಿವೆ.*
=================
*ಚೀತಾ: *
*ಭೂಮಿಯಲ್ಲಿಯೇ ಅತಿ ಹೆಚ್ಚು ವೇಗದಲ್ಲಿ ಚಲಿಸಬಲ್ಲ ಪ್ರಾಣಿ ಇದು. ಗಂಟೆಗೆ 112 ರಿಂದ 120 ಕಿ.ಮೀ ಓಡುವ ಸಾಮರ್ಥ್ಯ ಹೊಂದಿದೆ. ನಿರಂತರವಾಗಿ 460 ಕಿ.ಮೀ. ದೂರ ಕ್ರಮಿಸಬಲ್ಲದು. ಸೂಪರ್ ಕಾರ್ಗಿಂತಲೂ ಹೆಚ್ಚು ವೇಗದಲ್ಲಿ ಚಲಿಸುವ ಶಕ್ತಿ ಇದಕ್ಕಿದೆ. ಆದರೆ ಮರ ಏರಲು ಬರುವುದಿಲ್ಲ. ಅಸಿನೋನಿಕ್ಸ್ ಜುಬೆಟಸ್ ಇದರ ವೈಜ್ಞಾನಿಕ ಹೆಸರು. ಈ ಪ್ರಾಣಿ ವರ್ಗವು ಅಸಿನೋನಿಕ್ಸ್ ಎಂಬ ವಂಶವಾಹಿನಿಯಲ್ಲಿ ಬದುಕಿರುವ ಏಕೈಕ ಸದಸ್ಯ.*
===============
*ಸಿಂಹ: *
*ಉತ್ತರ ಭಾರತ, ಮಧ್ಯಭಾರತದಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಿತ್ತು. ಈಗ ಗುಜರಾತ್ನ ಗಿರ್ ಅರಣ್ಯಪ್ರದೇಶಕ್ಕೆ ಸೀಮಿತ. ಪ್ರಪಂಚದಲ್ಲಿ ಸಿಂಹಗಳು ಮುಖ್ಯವಾಗಿ ಆಫ್ರಿಕಾದ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ, ಏಷ್ಯಾದ ಕೆಲವು ಭಾಗಗಳಲ್ಲಷ್ಟೇ ಕಂಡುಬರುತ್ತವೆ. ಸಿಂಹವು ಪ್ಯಾಂಥೆರ ಕುಟುಂಬಕ್ಕೆ ಸೇರಿದ್ದು, ಪ್ಯಾಂಥೆರ ಲಿಯೋ ಇದರ ಪ್ರಾಣಿಶಾಸ್ತ್ರೀಯ ಹೆಸರು.*
===============
*ಕ್ಲೌಡೆಡ್ ಲೆಪರ್ಡ್:*
*ಹಿಮಾಲಯ ತಪ್ಪಲು, ಆಗ್ನೇಯ ಏಷ್ಯಾ ಹಾಗೂ ಚೀನಾದಲ್ಲಿ ಕಂಡುಬರುತ್ತದೆ.* *ಇದನ್ನು ಮೇಘಾಲಯದ ರಾಜ್ಯಪ್ರಾಣಿಯಾಗಿ ಘೋಷಿಸಲಾಗಿದೆ. 2008ರಿಂದ ಇದನ್ನು ವಿನಾಶದಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ. ನಿಯೋಫೆಲಿಸ್ ನೆಬ್ಯುಲೋಸಾ ಇದರ ವೈಜ್ಞಾನಿಕ ಹೆಸರು. ಮೋಡದ ಚಿರತೆಯನ್ನು ದೊಡ್ಡ ಕಾಡು ಬೆಕ್ಕುಗಳ ಮತ್ತು ಸಣ್ಣ ಕಾಡು ಬೆಕ್ಕುಗಳ ನಡುವಿನ ವಿಕಸನದ ಕೊಂಡಿ ಎಂದೆ ಪರಿಗಣಿಸಲಾಗಿದೆ. ಸಣ್ಣ ಬೆಕ್ಕುಗಳ ವರ್ಗದಲ್ಲೆ ಇದು ಅತಿದೊಡ್ಡ ಬೆಕ್ಕು. ಈ ಚಿರತೆಯ ತುಪ್ಪಳ ಕಡು ಬೂದು ಅಥವಾ ಕಂದು ಬಣ್ಣದ್ದಾಗಿದೆ. ತಲೆಯ ಮೇಲೆ ಕಪ್ಪು ಚುಕ್ಕೆಗಳಿದ್ದು, ಕಿವಿ ಕಪ್ಪಗಿರುತ್ತದೆ. ಅಲ್ಲಲ್ಲಿ ಪಟ್ಟೆಗಳಿವೆ. ಇವು ನೋಡಲು ಮೋಡಗಳಂತೆ ಕಾಣುವುದರಿಂದ ಇದಕ್ಕೆ ಕ್ಲೌಡೆಡ್ ಚಿರತೆ ಎನ್ನುತ್ತಾರೆ.*
==================
*ಹುಲಿ: *
*ಪ್ಯಾಂಥೆರಾ ಟೈಗ್ರಿಸ್ ಅರ್ಥಾತ್ ಹುಲಿ ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ್ದು. ಪ್ಯಾಂಥೆರಾ ವಂಶಕ್ಕೆ ಸೇರಿದ 4 ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ಹೆಚ್ಚು ಕಂಡುಬರುತ್ತದೆ. 4 ಮೀ. (13 ಅಡಿ) ಉದ್ದ ಇರುತ್ತದೆ. 300 ಕೆಜಿ ತೂಕ ಇರುತ್ತದೆ. ಸೈಬೀರಿಯಾ ಹುಲಿಯದೇ ಅತ್ಯಂತ ದೊಡ್ಡ ಗಾತ್ರ. ಬಂಗಾಳ ಹುಲಿ (ಪ್ಯಾಂಥೆರಾ ಟೈಗ್ರಿಸ್ ಟೈಗ್ರಿಸ್) ಭಾರತ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ಮತ್ತು ನೇಪಾಳ ಭಾಗದಲ್ಲಿ ಕಂಡುಬರುತ್ತದೆ. ಉತ್ತರ ಭಾರತ ಮತ್ತು ನೇಪಾಳದ ಹುಲಿಯು ದಕ್ಷಿಣ ಭಾರತದ ಹುಲಿಗಿಂತ ದೊಡ್ಡ ದೇಹ ಹೊಂದಿದೆ.*
===================
*ಜಾಗ್ವಾರ್: *
*ಅಮೆರಿಕ, ಮೆಕ್ಸಿಕೋ, ಪೆರುಗ್ವೆ ಹಾಗೂ ಅರ್ಜೆಂಟೀನಾದಲ್ಲಿ ಕಂಡುಬರುತ್ತದೆ. ಚಿರತೆಯಂತೆ ಕಾಣುವ ಈ ಪ್ರಾಣಿಯ ವೈಜ್ಞಾನಿಕ ಹೆಸರು ಪ್ಯಾಂಥೆರಾ ಆಂಕಾ. ಇದರ ವಾಸಸ್ಥಳ ನಶಿಸಿದ್ದು ಅಳಿವಿನಂಚಿಗೆ ಸಾಗಿದೆ.*
==================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ