ಶುಕ್ರವಾರ, ಮಾರ್ಚ್ 23, 2018

ಬ್ಯಾಂಕಿಂಗ್ ಪರೀಕ್ಷೆ ಬಗ್ಗೆ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ... ಬ್ಯಾಂಕ್‌ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸುವುದು ಹೇಗೆ?
==================
ದೇಶದ ಉನ್ನತ ಬ್ಯಾಂಕ್‌ಗಳಲ್ಲಿ ದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಒಂದು. ಈ ವರ್ಷ ಸಾಲು ಸಾಲಾಗಿ ನೇಮಕಾತಿಯ ಪ್ರಕಟಣೆ ಹೊರಡಿಸುತ್ತಿದೆ ಈ ಸಂಸ್ಥೆ. ಜನವರಿ ತಿಂಗಳಿನಲ್ಲಿ ಎಸ್‌ಬಿಐ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಯ ಪ್ರಕಟಣೆ ಹೊರಡಿಸಿತ್ತು. ಅದರ ಬೆನ್ನಲ್ಲೇ ವಿಶೇಷ ಕೆಡರ್ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಈ ವಿಭಾಗದಲ್ಲಿ ಸ್ಪೇಶಲ್ ಮ್ಯಾನೇಜ್‌ಮೆಂಟ್ ಎಕ್ಸ್‌ಕ್ಯುಟೀವ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಹಾಗೂ ಡೆಪ್ಯುಟಿ ಮ್ಯಾನೇಜರ್ ಹುದ್ದೆ ಬಗ್ಗೆ ನೇಮಕಾತಿ ಪ್ರಕಟಣೆ ಹೊರಡಿಸಿತ್ತು
===========
ಸ್ಪೇಶಲ್ ಮ್ಯಾನೇಜ್‌ಮೆಂಟ್ ಎಕ್ಸ್‌ಕ್ಯುಟೀವ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಯ ಆಯ್ಕೆ ಹೇಗೆ ಮಾಡಲಾಗುತ್ತದೆ ಎಂದ್ರೆ ಮೊದಲಿಗೆ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಸಂದರ್ಶನಕ್ಕೆ ಆಹ್ವಾನ ನೀಡಲಾಗುತ್ತದೆ. ಆದ್ರೆ ಯಾರು ಡೆಪ್ಯುಟಿ ಮ್ಯಾನೇಜರ್ (ಕಾನೂನು) ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೋ ಅವರು ಆನ್‌ಲೈನ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಾಲ್ಗೊಳ್ಲಬೇಕಾಗುತ್ತದೆ
==============
ಡೆಪ್ಯುಟಿ ಮ್ಯಾನೇಜರ್ (ಕಾನೂನು) ಇದರಲ್ಲಿ ಒಟ್ಟು ೮೨ ಹುದ್ದೆಗಳಿವೆ. ಸಾಮಾನ್ಯ ಕೆಟಗರಿಯಿಂದ 42 ಮಂದಿ, ಒಬಿಸಿ ಯಿಂದ 22, ಎಸ್‌ಸಿ ಯಿಂದ 12 ಹಾಗೂ ಎಸ್‌ಟಿ ಯಿಂದ 6 ಹುದ್ದೆಗಳನ್ನ ಹಂಚಿಕೆಮಾಡಲಾಗಿದೆ. ಇನ್ನು ಡೆಪ್ಯುಟಿ ಮ್ಯಾನೇಜರ್ (ಕಾನೂನು) ಹುದ್ದೆಯ ಆಯ್ಕೆ ಕಂಪ್ಲೀಟ್ ಡಿಫರೆಂಟ್ ಆಗಿದೆ. ಹಾಗಾಗಿ ಈ ಪರೀಕ್ಷೆಗೆ ತಯಾರಿಗಾಗಿ ಕೆರಿಯರ್ ಇಂಡಿಯಾ ಕಡೆಯಿಂದ ನಿಮಗೆ ಒಂದಿಷ್ಟು ಟಿಪ್ಸ್
============
ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಡೆಪ್ಯುಟಿ ಮ್ಯಾನೇಜರ್ (ಕಾನೂನು) ಹುದ್ದೆಗೆ ಅಭ್ಯರ್ಥಿಯ ಆಯ್ಕೆ ಆನ್‌ಲೈನ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ವಿಧಾನದ ಮೂಲಕ ನಡೆಯುತ್ತದೆ ಮೇ.6, 2018 ರಂದು ಆನ್‌ಲೈನ್ ಲಿಖಿತ ಪರೀಕ್ಷೆ ನಡೆಯವ ಸಾಧ್ಯತೆಯಿದೆ ಆನ್‌ಲೈನ್ ಪರೀಕ್ಷೆ ಬಳಿಕ ಅಭ್ಯರ್ಥಿಗಳ ಹೆಸರನ್ನ ಅಂಕದ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಲಾಗುವುದು ಇಂಗ್ಲೀಷ್ ಹಾಗೂ ರೀಸನಿಂಗ್ ಆನ್‌ಲೈನ್ ಲಿಖಿತ ಪರೀಕ್ಷೆ ಅವಧಿ 90 ನಿಮಿಷ. ಪ್ರೊಫೆಶನಲ್ ಜ್ಞಾನ ಸಬ್‌ಜೆಕ್ಟ್ ಗೆ 45 ನಿಮಿಷ. ಅಷ್ಟೇ ಅಲ್ಲ ಸಂದರ್ಶನದ ವೇಳೆ 50 ಅಂಕಗಳ ಇಂಟರ್ವ್ಯೂ ನಡೆಯಲಿದೆ ಕೊನೆಯಲ್ಲಿ ಸಂದರ್ಶನ ಒಳಗೊಂಡಂತೆ ಎಲ್ಲಾ ಹಂತದ ಪರೀಕ್ಷೆಯ ಅಂಕ ಒಟ್ಟುಗೂಡಿಸಿ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ 
================
ಡೆಪ್ಯುಟಿ ಮ್ಯಾನೇಜರ್ (ಕಾನೂನು) ಹುದ್ದೆ ಪರೀಕ್ಷೆಗೆ ತಯಾರಿ ಹೀಗಿರಲಿ 90 ನಿಮಿಷ ಶಾಂತ ಹಾಗೂ ತಾಳ್ಮೆಯಿಂದಿರಿ. ರೀಸನಿಂಗ್ ನಲ್ಲಿ 50 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ಪ್ರಯತ್ನಿಸಿ. ವೃತ್ತಿಪರ ಜ್ಞಾನ ಸಬ್‌ಜೆಕ್ಟ್ ವಿಷಯದಲ್ಲಿ ಪ್ರತೀ ಪ್ರಶ್ನೆಗೆ 54 ಸೆಕೆಂಡ್ ನೀಡಲಾಗುತ್ತದೆ. ಆದ್ದರಿಂದ ಪ್ರಶ್ನೆ ಓದುವ ಹಾಗೂ ಉತ್ತರ ಬರೆಯುವ ಸ್ಪೀಡ್ ಹೆಚ್ಚಿಸಿಕೊಳ್ಳಿ ಟೈಂ ಹೊಂದಾಣಿಕೆ ಮಾಡಿಕೊಂಡು ಸರಿಯಾದ ಉತ್ತರ ಬರೆಯುತ್ತಾ ಹೋಗಿ ಪರೀಕ್ಷೆ ಕೊನೆಯಲ್ಲಿ 3 ರಿಂದ 5 ನಿಮಿಷ ಮತ್ತೊಮ್ಮೆ ನೀವು ಬರೆದಿರುವಂತದದ್ದನ್ನು ಚೆಕ್ ಮಾಡಿಕೊಳ್ಳಿ ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
==================

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ