ಹೊಸದಿಲ್ಲಿ, ಮಾ.27: ಮನು ಭಾಕರ್ ಹಾಗೂ ಅನ್ಮೋಲ್ ಜೈನ್ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಮಿಕ್ಸೆಡ್ 10 ಮೀ. ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.
===========
ಮಂಗಳವಾರ ನಡೆದ ಸ್ಪರ್ಧೆಯಲ್ಲಿ 17ರ ಹರೆಯದ ಶ್ರೇಯಾ ಅಗರ್ವಾಲ್ ಹಾಗೂ 19ರ ಹರೆಯದ ಅರ್ಜುನ್ ಬಾಬುಟಾ 10 ಮೀ. ಏರ್ ರೈಫಲ್ ಇವೆಂಟ್‌ನ ಮಿಶ್ರ ವಿಭಾಗದಲ್ಲಿ 432.8 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು. ಭಾರತದ ಇನ್ನಿಬ್ಬರು ಶೂಟರ್‌ಗಳಾದ ಇಳವೇನಿಲ್ ವಲಾರಿಯನ್ ಹಾಗೂ ತೇಜಸ್ ಕೃಷ್ಣಾ ಪ್ರಸಾದ್ 389.1 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು.
===========
ಸ್ಪರ್ಧೆಯ ಆರಂಭದಲ್ಲೇ ಪ್ರಾಬಲ್ಯ ಸಾಧಿಸಿರುವ ಭಾಕರ್ ಹಾಗೂ ಅನ್ಮೋಲ್ ಅರ್ಹತಾ ಸುತ್ತಿನಲ್ಲಿ ಗರಿಷ್ಠ ಅಂಕ ಗಳಿಸಿ ಫೈನಲ್‌ಗೆ ಪ್ರವೇಶಿಸಿದರು. ಭಾಕರ್-ಅನ್ಮೋಲ್ ಚಿನ್ನ ಜಯಿಸಿದರೆ, ಚೀನಾದ ಲಿಯು ಜಿನಿಯಾವೊ(20) ಹಾಗೂ ಲಿ ಕ್ಸೂ(18) 473.3ಅಂಕ ಗಳಿಸಿ ಬೆಳ್ಳಿ ಹಾಗೂ ಕಂಚು ಜಯಿಸಿದರು. 7 ಚಿನ್ನ ಸಹಿತ ಒಟ್ಟು 18 ಪದಕಗಳನ್ನು ಜಯಿಸಿರುವ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
============
8 ಚಿನ್ನ ಸಹಿತ 22 ಪದಕ ಜಯಿಸಿರುವ ಚೀನಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಮಂಗಳವಾರ, ಮಾರ್ಚ್ 27, 2018
ಮನು ಭಾಕರ್ ಹಾಗೂ ಅನ್ಮೋಲ್ ಜೈನ್ ಗೆ ಚಿನ್ಮ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ