=================
ದಕ್ಷಿಣ ಚೀನ ಸಮುದ್ರ ವ್ಯಾಪ್ತಿ ಪ್ರದೇಶದಲ್ಲಿ ಚೀನ ತನ್ನ ಹಿಡಿತ ಭದ್ರ ಮಾಡಿಕೊಳ್ಳುತ್ತಿದೆ. ಅದನ್ನು ತಡೆಯಲು ಅಮೆರಿಕ, ಭಾರತ ಪ್ರಯತ್ನ ಮಾಡುತ್ತಿವೆ. ಇತ್ತ, ಭಾರತ, ದಕ್ಷಿಣ ಆಫ್ರಿಕಾದ ದ್ವೀಪರಾಷ್ಟ್ರ ಸೆಷೆಲ್ಸ್ ಜತೆಗೂಡಿ ಹಿಂದೂ ಮಹಾಸಾಗರ ದ್ವೀಪಸಮೂಹದಲ್ಲಿ ಮುಕ್ತ ಸೇನಾ ನೆಲೆ (ಓಪನ್ ಮಿಲಿಟರಿ ಬೇಸ್) ಸ್ಥಾಪಿಸಲು ಮುಂದಾಗಿದೆ.
===========
ಓಪನ್ ಮಿಲಿಟರಿ ಬೇಸ್ ಎಂದರೇನು?
========°======
ನಿಗದಿತ ರಾಷ್ಟ್ರವೊಂದರ ಜತೆ ನೆರವಿ ನಿಂದ ಸ್ಥಾಪನೆ ಮಾಡುವ ಅಥವಾ ಆ ದೇಶ ಹೊಂದಿರುವ ಸೇನಾ ನೆಲೆಯಲ್ಲಿಯೇ ಮತ್ತೂಂದು ಸ್ನೇಹಿರಾಷ್ಟ್ರ ನೆಲೆಯನ್ನು ಹೊಂದಿರುತ್ತದೆ. ಎರಡೂ ರಾಷ್ಟ್ರಗಳು ಅಲ್ಲಿರುವ ಮಿಲಿಟರಿ ಉಪಕರಣಗಳನ್ನು, ಶಸ್ತ್ರಾಸ್ತ್ರಗಳನ್ನು ತರಬೇತಿ, ಸಮರಾಭ್ಯಾಸಕ್ಕೆ ಬಳಕೆ ಮಾಡಲು ಅವಕಾಶ ಉಂಟು.
==========
ಉದ್ದೇಶ
=======
• 5 ಲಕ್ಷ ಚದರ ಮೈಲು ಉದ್ದದ ಕಡಲು ಪ್ರದೇಶವನ್ನು ರಕ್ಷಣೆ ಮಾಡುವುದು
• ಅಕ್ರಮ ಮೀನುಗಾರಿಕೆ, ಮಾದಕ ವಸ್ತು ಸಾಗಣೆಗೆ ತಡೆ
• ಸೆಷಲ್ಸ್‌ನ ಸೇನಾಪಡೆಗೆ ಭಾರತದ ಸೇನಾ ಪಡೆಯಿಂದ ತರಬೇತಿ.
ಹಿನ್ನೆಲೆ
====
ಪಿಎಂ ಮೋದಿ 2015ರಲ್ಲಿ ಸೆಷೆಲ್ಸ್‌ಗೆ ಭೇಟಿ ನೀಡಿದ್ದಾಗ ಒಪ್ಪಂದಕ್ಕೆ ಸಹಿ.
=======
> ಇದಾದ ಬಳಿಕ ಅದರ ಜಾರಿಯಲ್ಲಿ ಕೊಂಚ ಹಿನ್ನಡೆ ಉಂಟಾಗಿತ್ತು.
> ಸೆಷೆಲ್ಸ್ ಸರಕಾರದ ಜತೆಗೆ ವಿಪಕ್ಷಗಳೂ ಕೂಡ ಮುಕ್ತ ಸೇನಾ ನೆಲೆಗೆ ಸಹಮತ ಹೊಂದಿವೆ.
> 2003ರಲ್ಲಿಯೇ ಆ ದೇಶದ ಜತೆಗೆ 30 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು
ಅಂಕಿಗಳಲ್ಲಿ ಸೆಷೆಲ್ಸ್
===============
> 30 ಮೀಟರ್: ಸಮುದ್ರ ಮಟ್ಟದಿಂದ ದ್ವೀಪ ಇರುವ ಎತ್ತರ
> 07ಕಿಮೀ: ದ್ವೀಪದ ಉದ್ದ
> ಅಲ್ಲೊಂದು ವಿಮಾನ ಇಳಿದಾಣ, ವಿಶೇಷವಾಗಿ ಸೇನೆಗೆ ಸಂಬಂಧಿಸಿದ ವಿಮಾನ ಇಳಿಕೆ, ಅಂಚೆ ಕಚೇರಿ
••••••••
> ಇಲ್ಲಿ ಹವಳ ಹೆಚ್ಚಾಗಿರುವುದರಿಂದ ಅದನ್ನು ಯುನೆಸ್ಕೋದಿಂದ ರಕ್ಷಣಾತ್ಮಕ ಸ್ಥಳವೆಂದು ಘೋಷಣೆಯಾಗಿದೆ.
> 1,135 ಕಿ.ಮೀ.: ಸೆಷೆಲ್ಸ್ ರಾಜಧಾನಿ ವಿಕ್ಟೋರಿಯಾದಿಂದ ದೂರದ ದ್ವೀಪಸಮೂಹ
> 3,586 ಕೋಟಿ ರೂ.: ಸೇನಾ ನೆಲೆಯ ವೆಚ್ಚ
==========
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ