ಗುರುವಾರ, ಮಾರ್ಚ್ 8, 2018

ನಿಮಗಿದು ಗೊತ

*##ಮಾಹಿತಿ ವೇದಿಕೆ##*

    *##ನಿಮಗಿದು ಗೊತ್ತೆ##*
           ========
   *2017 ರಲ್ಲಿ ಭಾರತದಲ್ಲಿ ಸಂಭವಿಸಿದ ಪ್ರಮುಖ ಪ್ರಕೃತಿ ವಿಕೋಪಗಳು ಮತ್ತು ದುರಂತಗಳು.*
==========
*ಪಾಟ್ನಾ ದೋಣಿ ದುರಂತ.*
############
*ಬಿಹಾರದ ಪಾಟ್ನಾದಲ್ಲಿ ಸುಮಾರು 40 ಕ್ಕಿಂತಲೂ ಹೆಚ್ಚು ಪ್ರಯಾಣಿಕರನ್ನು ಹೊಂದಿದ್ದ ದೋಣಿಯು ಗಂಗಾ ನದಿಯಲ್ಲಿ ಮುಳುಗಿ 25 ಜನರು ಸಾವನ್ನಪ್ಪಿದ್ದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಹಾರ ಪ್ರವಾಸೋದ್ಯಮ ಇಲಾಖೆ ಏರ್ಪಡಿಸಿದ್ದಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.*
=============
*ಕುನೇರು ರೈಲು ದುರಂತ.*
###############
*ಆಂಧ್ರ ಪ್ರದೇಶದ ಕುನೇರು ರೈಲು ನಿಲ್ದಾಣದ ಬಳಿ ಜಗದಲಪುರ-ಭುವನೇಶ್ವರ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ 41 ಜನ ಸಾವನ್ನಪ್ಪಿ, 68 ಜನ ಗಾಯಗೊಂಡಿದ್ದರು.*
=============
*ಕಾಶ್ಮೀರ ಹಿಮಪಾತ.*
############*#
*ಶ್ರೀನಗರದಿಂದ 200 ಕಿ. ಮೀ ದೂರದ ಬಂಡಿಪೋರ ಗುರ್ಝ್ ಕಣಿವೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಗುರ್ಝ್ ಪರ್ವತ ಪ್ರದೇಶದ ಕಣಿವೆ ಮತ್ತು ಕಾಶ್ಮೀರದ ನಡುವೆ ಒಂದೇ ಒಂದು ರಸ್ತೆ ಇದ್ದು ಆ ರಸ್ತೆಯೂ ಹಿಮಾವೃತವಾಗಿತ್ತು. ಪಾಕಿಸ್ತಾನದ ಗಡಿ ಪ್ರದೇಶವಾದ ಈ ಭಾಗದಲ್ಲಿ ಸದಾ ಕಾಲ ಭಾರತೀಯ ಸೇನೆ ನಿಗಾ ಇಡುತ್ತದ.*
==========
*ಬ್ರಹ್ಮಪುತ್ರ ನದಿ*
##############
*ಬ್ರಹ್ಮಪುತ್ರ ನದಿ ಉಕ್ಕಿ ಹರಿದ ಪರಿಣಾಮ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಗಳಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಇದರ ಪರಿಣಾಂಅ ಕನಿಷ್ಟ 85 ಜನ ಸಾವನ್ನಪ್ಪಿದ್ದರು. ನಾಲ್ಕರಿಂದ ಐದು ಲಕ್ಷ ಮಂದಿ ಪ್ರವಾಹ ಪರಿಸ್ಥಿತಿಯಿಂದ ಕಂಗಾಲಾಗಿದ್ದು ಮನೆ ಮಾರುಗಳನ್ನು ಕಳೆದುಕೊಂಡಿದ್ದರು.*
===========
*ಮುಂಬೈ ಕಾಲ್ತುಳಿತ.*
########*
*ಸ್ಥಳ : ಮುಂಬೈ ನ ಎಲ್ಫಿನ್‍ಸ್ಟೋನ್ ರೈಲುನಿಲ್ದಾಣದ ಪಾದಚಾರಿ ಸಂಚಾರ ಸೇತುವೆ.*
############
*ಮುಂಬೈನಲ್ಲಿ ಸುರಿದಿದ್ದ ಭಾರಿ ಮಳೆಯ ನಂತರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು.ಪರೇಲ್ ಮತ್ತು  ಎಲ್ಫಿನ್‍ಸ್ಟೋನ್ ರೋಡ್ ಸ್ಟೇಷನ್ ನಡುವೆಯಿರುವ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆ ಮೇಲೆ ನೂಕು ನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿತ್ತು.*
============
*ಗೋರಖ್ ಪುರ ಆಸ್ಪತ್ರೆಯಲ್ಲಿ ಮಕ್ಕಳ ಸಾವು.*
#############
*ಉತ್ತರ ಪ್ರದೇಶದ ಗೋರಖ್ ಪುರದಲ್ಲಿರುವ ಬಿ.ಆರ್.ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವಿರಾರು ಮಕ್ಕಳು ಮೃತಪಟ್ಟಿದ್ದರು ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಾವಿಗೆ ಎನ್ಸೆಫಾಲಿಟಿಸ್ ಸಿಂಡ್ರೋಮ್ ಕಾರಣವೆಂದು ಹೇಳಲಾಗಿದೆ.*
==============
*ರಾಷ್ಟ್ರೀಯ ಉಷ್ಣವಿದ್ಯುತ್‌‌ ನಿಗಮ (ಎನ್‌ಟಿಪಿಸಿ) ದಲ್ಲಿ ಬಾಯ್ಲರ್ ಸ್ಪೋಟ.*
############
*ಉತ್ತರ ಪ್ರದೇಶದ ರಾಯ್‌‌ಬರೇಲಿ ಜಿಲ್ಲೆಯ ರಾಷ್ಟ್ರೀಯ ಉಷ್ಣವಿದ್ಯುತ್‌‌ ನಿಗಮದ ಸ್ಥಾವರದಲ್ಲಿ ಬಾಯ್ಲರ್‌ ಸ್ಫೋಟ ಸಂಭವಿಸಿ 32 ಜನ ಸಾವಿಗೀಡಾಗಿದ್ದರು. ಒಟ್ಟು 6 ಘಟಕಗಳನ್ನು ಹೊಂದಿರುವ ಈ ಸ್ಥಾವರದಲ್ಲಿ  1,550 ಮೆಗಾವ್ಯಾಟ್‌‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಈ ಘಟಕದಲ್ಲಿ ಉತ್ಪಾದಿಸಲಾಗುವ ವಿದ್ಯುತ್ ನ್ನು 9 ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ.*
===============
*ಓಖಿ ಚಂಡಮಾರುತ*
###############
*ಡಿಸೆಂಬರ್ ನಲ್ಲಿ ಓಖಿ ಚಂಡಮಾರುತವು ದಕ್ಷಿಣ ಭಾರತ ಕರಾವಳಿಯನ್ನಪ್ಪಳಿಸಿತ್ತು. ಸುಮಾರು ಒಂದು ವಾರ ಕಾಲ ನಿರಂತರ ಮಳೆ, ಗಾಳಿಯ ಕಾರಣ ತಮಿಳುನಾಡು, ಕೇರಳ, ಪುದುಚೇರಿ, ಕರ್ನಾಟಕ ಹಾಗೂ ಲಕ್ಷದ್ವೀಪದ ಕರಾವಳಿ ತೀರಗಳು ಅಪಾರ ಹಾನಿಗೊಳಗಾದವು. ದಕ್ಷಿಣ ರಾಜ್ಯಗಳ ಸುಮಾರು 400 ಮೀನುಗಾರರು ನಾಪತ್ತೆಯಾಗಿದ್ದು ದೇಶದಲ್ಲಿ ಈ ವರ್ಷ ಉಂಟಾದ ಭೀಕರ ಪ್ರಕೃತಿ ವಿಕೋಪವೆಂದು ಇದನ್ನು ಅಂದಾಜಿಸಲಾಗಿದೆ.*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ