*##ಮಾಹಿತಿ ವೇದಿಕೆ##*
*##ನಿಮಗಿದು ಗೊತ್ತಿರಲಿ##*
==========
*ಅತ್ಯಾಚಾರಿಗಳಿಗೆ ಗಲ್ಲು: ವಿಧೇಯಕ ಅಂಗೀಕರಿಸಿದ ರಾಜಸ್ಥಾನ*
###########
*ಜೈಪುರ: 12 ವರ್ಷದೊಳಗಿನ ಹೆಣ್ಮಕ್ಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಲ್ಲಿ ದೋಷಿಗೆ ಮರಣದಂಡನೆ ವಿಧಿಸುವ ವಿಧೇಯಕವನ್ನು ರಾಜಸ್ಥಾನ ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ.*
#########₹₹#
*ರಾಜ್ಯದಲ್ಲಿ ಕಾಮುಕರ ಹಾವಳಿ ಹೆಚ್ಚಾಗಿದ್ದು, ಅಪರಾಧ ತಡೆಗೆ ಕಠಿಣಾತಿ ಕಠಿಣ ಕಾನೂನು ರೂಪಿಸುವಂತೆ ಒತ್ತಡ ಕೇಳಿಬಂದಿತ್ತು. ಕಾಮುಕರಿಗೆ ಎಚ್ಚರಿಕೆ ಸಂದೇಶ ರವಾನಿಸುವ ನಿಟ್ಟಿನಲ್ಲಿ ಇಂತಹ ಉಗ್ರ ಶಿಕ್ಷೆಗೆ ಅವಕಾಶ ಮಾಡಿಕೊಡುವಂತಹ ವಿಧೇಯಕವನ್ನು ಅಂಗೀಕರಿಸಿದ ದೇಶದ ಎರಡನೇ ರಾಜ್ಯವಾಗಿ ರಾಜಸ್ಥಾನ ಈ ಮೂಲಕ ಗುರುತಿಸಿಕೊಂಡಿತು. ಈಗಾಗಲೇ ಮಧ್ಯಪ್ರದೇಶದಲ್ಲಿ ಇಂತಹ ಕಾಯಿದೆ ಜಾರಿಯಲ್ಲಿದೆ.*
#############
*12ವರ್ಷದೊಳಗಿನ ಹೆಣ್ಮಕ್ಕಳ ಮೇಲೆ ನಡೆಯುವ ರೇಪ್/ಗ್ಯಾಂಗ್ ರೇಪ್ ಪ್ರಕರಣಗಳಲ್ಲಿ ಅಪರಾಧಿಗೆ ಜೀವ ಇರುವವರೆಗೂ ಸೆರೆವಾಸ ಇಲ್ಲವೇ ಗಲ್ಲು ಶಿಕ್ಷೆ ನೀಡಿಕೆಗೆ ಅವಕಾಶ ಮಾಡಿಕೊಡುವ ಅಪರಾಧ ತಡೆ ಕಾನೂನು (ರಾಜಸ್ಥಾನ ತಿದ್ದುಪಡಿ )ವಿಧೇಯಕ-2018ವನ್ನು ವಿಧಾನಸಭೆಯಲ್ಲಿ ಗೃಹ ಸಚಿವ ಗಲಾಬ್ ಚಂದ್ ಕಟಾರಿಯಾ ಮಂಡಿಸಿದರು. ಬಳಿಕ ಧ್ವನಿಮತದ ಮೂಲಕ ಅನುಮೋದಿಸಲಾಯಿತು. ಅಂದಹಾಗೆ, 2016ರಲ್ಲಿ ರಾಜಸ್ಥಾನದಲ್ಲಿ ಮಕ್ಕಳ ಮೇಲೆ 4,034 ಅಪರಾಧಗಳ ಪ್ರಕರಣಗಳು ದಾಖಲಾಗಿದ್ದವು.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ