*##ಮಾಹಿತಿ ವೇದಿಕೆ##*
🙏 *#ದಿನದ ಸುದ್ದಿ#*✍🏿
••••••••••••••••••••
*#ಕಲ್ಪನಾ ಚಾವ್ಲಾ ಜನ್ಮದಿನದ ವಿಶೇಷ#*
================
*ಕಲ್ಪನಾ ಚಾವ್ಲಾ ಅವರ ಜನ್ಮದಿನ ಮಾರ್ಚ್ 17 ಅವರು ಇಂದು ಬದುಕಿರುತ್ತಿದ್ದರೆ 56 ವರ್ಷಗಳಾಗುತ್ತಿತ್ತು.*
=============
*ಗಗನಯಾತ್ರಿ ಕಲ್ಪನಾ ಚಾವ್ಲಾರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಏನು ಗೊತ್ತೇ?*
#################
> *ಅವರಿಗೆ ಮೊದಲು ಮಾಂಟೊ ಎಂದು ಹೆಸರು ಇಡಲಾಗಿತ್ತು. ನಂತರದಲ್ಲಿ ಅವರು ಅವರೆ ಕಲ್ಪನಾ ಎಂದು ಹೆಸರು ಕೊಟ್ಟುಕೊಂಡರು. ನಂತರದಲ್ಲಿ ಮಾಂಟೊ ಎಂಬ ಹೆಸರನ್ನೇ ನಿಕ್‌ನೇಮ್ ಎಂಬಂತೆ ಬಳಸತೊಡಗಿದರು.*
===============
> *ಕಲ್ಪನಾ ಚಾವ್ಲಾ'ರವರು ಗಗನಯಾತ್ರಿ ಆಗಿರುವುದನ್ನು ನೋಡಿ ಅವರು ಶೈಕ್ಷಣಿಕವಾಗಿ ಟಾಪರ್ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ ಅವರು ಟಾಪ್ 5 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿರುತ್ತಿದ್ರು. ಅಲ್ಲದೇ ಕವಿತೆ, ನೃತ್ಯ, ಸೈಕಲಿಂಗ್, ರನ್ನಿಂಗ್‌ಗಳಲ್ಲಿ ಅತ್ಯಧಿಕ ಆಸಕ್ತಿ ಹೊಂದಿದ್ದರು. ವಿಶೇಷ ಏನಪ್ಪಾ ಅಂದ್ರೆ ಯಾವಾಗಲು ಸಹ ರನ್ನಿಂಗ್‌ನಲ್ಲಿ ಇವರೇ ಮೊದಲು ಬರುತ್ತಿದ್ದರು.*
=================
> *ಭಾರತದಲ್ಲಿ ಇಂಜಿನಿಯರಿಂಗ್ ಮುಗುಸಿ ಕಲ್ಪನಾ ಚಾವ್ಲಾ'ರವರು 1982ರಲ್ಲಿ ಅಮೇರಿಕಕ್ಕೆ ಓದರು. ಅಲ್ಲಿ ಏರಿಯೋಸ್ಪೇಸ್ ಇಂಜಿನಿಯರಿಂಗ್ ಅಧ್ಯಯನ ಮಾಡಿ ನಂತರದಲ್ಲಿ ನಾಸಾಗೆ ಸೇರಿದರು. ಗಗನಯಾತ್ರಿಯಾಗಿ ಹೊರಹೊಮ್ಮುವ ಮೊದಲು ನಾಸಾದಲ್ಲಿ ಸಂಶೋಧನಾ ಕೇಂದ್ರದ ಓವರ್‌ಸೆಟ್ ಮಾದರಿಯ ಉಪಾಧ್ಯಕ್ಷರಾಗಿ ಅಲ್ಲದೇ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ.*
=============
> *ಕಲ್ಪನಾರವರು ವಾಣಿಜ್ಯ ಪೈಲಟ್ ಆಗಿ ಅರ್ಹತೆ ಪಡೆದುದರ ಜೊತೆಗೆ, ಮಲ್ಟಿ ಇಂಜಿನಿಯರ್ ಮತತು ಸೀಪ್ಲೇನ್ ಚಾಲನೆಗೆ ಪರವಾನಗಿಯನ್ನು ಸಹ ಪಡೆದರು. ನಂತರದಲ್ಲಿ ವಿಮಾನ ಮಾರ್ಗದರ್ಶಕರಾಗಿ ಅರ್ಹತೆ ಪಡೆದುದರ ಜೊತೆಗೆ 1983 ರಲ್ಲಿ ಅಮೇರಿಕದ ವಾಯುಯಾನ ಲೇಖಕರಾದ 'ಜೀನ್ ಪಿಯರ್ ಹ್ಯಾರಿಸನ್' ಅನ್ನು ವಿವಾಹವಾದರು.*
================
> *1991 ರಲ್ಲಿ ಅಮೇರಿಕದ ಪ್ರಜೆಯಾದ ನಂತರ ನಾಸಾ ಗಗನಯಾತ್ರಿ ಕಾರ್ಪ್ಸ್ ಸದಸ್ಯರಾದರು. 6 ವರ್ಷಗಳ ನಂತರ ಇವರ ಮೊದಲ ವಿಮಾನವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡುಹೋದರು.*
================
> *ಕಲ್ಪನಾ ಚಾವ್ಲಾರು ನಿಧನಹೊಂದಿದ ನಂತರದಲ್ಲಿ ಹಲವು ಗೌರವಗಳು ದಯಪಾಲಿಸಿದವು. ಕೊಲಂಬಿಯಾದ ಒಂದು ಬೆಟ್ಟಕ್ಕೆ ಕಲ್ಪನಾ ಬೆಟ್ಟ ಎಂದು ಹೆಸರಿಸಲಾಯಿತು. ಅಲ್ಲದೇ ಅವರು ಓದಿದ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅವರ ಮೆಡಲ್ ಮತ್ತು ವಿದ್ಯಾರ್ಥಿವೇತನವನ್ನು ಅವರ ಹೆಸರಿನಲ್ಲಿ ನೀಡಲಾಯಿತು. ಅಲ್ಲದೇ "ಕಾಂಗ್ರೇಸ್ ನ್ಯಾಷನಲ್ ಸ್ಪೇಸ್ ಮೆಡಲ್", "ನಾಸಾ ಸ್ಪೇಸ್ ಫ್ಲೈಟ್ ಮೆಡಲ್" ಗೌರವ ಸಹ ಲಭಿಸಿತು.*
================
*ಸುನೀತಾ ವಿಲಿಯಮ್ಸ್'ರವರು ಬಾಹ್ಯಾಕಾಶಕ್ಕೆ ಹೋದ ಎರಡನೇ ಮಹಿಳಾ ಗಗನಯಾತ್ರಿ. ಆದರೆ ಮೊಟ್ಟ ಮೊದಲು ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ'ರವರು. ಬಾಹ್ಯಾಕಾಶಕ್ಕೆ ಮೊದಲು ಹಾರಿದವರು Valentina Vladimirovna Tereshkova. ಇವರು ರಷ್ಯಾ'ದವರು*
=================
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ