*##ಮಾಹಿತಿ ವೇದಿಕೆ##*
*ಮೇಘಾಲಯದ ಸಿಎಂ ಆಗಿ ಕನ್ರಾಡ್ ಸಂಗ್ಮಾ ಪದಗ್ರಹಣ*
###############
*ಮೇಘಾಲಯದ 12ನೇ ಮುಖ್ಯಮಂತ್ರಿಯಾಗಿ ಕನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿಲ್ಲಾಂಗ್ ನಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಸಿಎಂ ಹುದ್ದೆಯನ್ನು ಅಲಂಕರಿಸಿದ್ರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಮುಖಂಡರು ಪ್ರಮಾಣ ವಚನ ಸಮಾರಂಭದಲ್ಲಿ ಹಾಜರಿದ್ರು.*
##############
*ಸ್ಥಳೀಯ ಪಕ್ಷಗಳು ಹಾಗೂ ಬಿಜೆಪಿಯ ಮೈತ್ರಿ ಸರ್ಕಾರ ಮೇಘಾಲಯದಲ್ಲಿ ಅಭಿವೃದ್ಧಿ ಮಾಡಲಿದೆ ಅಂತಾ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆದಿರಲಿಲ್ಲ.*
##########₹₹#
*ಅತಿ ಹೆಚ್ಚು ಸ್ಥಾನ ಗಳಿಸಿದ್ರೂ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಹಾಗಾಗಿ ಬಿಜೆಪಿ 5 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಎನ್ ಪಿ ಪಿ ಪಕ್ಷದ ಕನ್ರಾಡ್ ಸಂಗ್ಮಾ ಅವರಿಗೆ ಸಿಎಂ ಸ್ಥಾನ ನೀಡಿದೆ.*
*ಮೇಘಾಲಯದ 59 ಸ್ಥಾನಗಳ ಪೈಕಿ ಕಾಂಗ್ರೆಸ್ 21, ಎನ್ ಪಿ ಪಿ 19 , ಬಿಜೆಪಿ 2 ಹಾಗೂ ಇತರರು 17 ಸ್ಥಾನ ಗಳಿಸಿದ್ದರು. ಸರ್ಕಾರ ರಚನೆಗೆ 31 ಸ್ಥಾನಗಳ ಅವಶ್ಯಕತೆಯಿತ್ತು.*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ